ಆರೋಗ್ಯಕರ ಹೃದಯ, ಹುರುಪು ತುಂಬಿದ ಹಿತಕರ ಜೀವನ
ಸ್ವಿಟ್ಜರ್ಲ್ಯಾಂಡ್ನ ಜಿನೀವಾದ ವರ್ಡ್ ಹಾರ್ಟ್ ಫೆಡರೇಶನ್ ಸೆಪ್ಟೆಂಬರ್ನ ಕೊನೆಯ ಭಾನುವಾರವನ್ನು ವಿಶ್ವ ಹೃದಯ ದಿನವಾಗಿ ಆಚರಿಸುತ್ತದೆ. ಈ ದಿನದಂದು, ಹೃದ್ರೋಗಕ್ಕೆ ಕಾರಣವಾಗುವ ಅಂಶಗಳು ಮತ್ತು ಅದನ್ನು ತಪ್ಪಿಸಲು ಕೈಗೊಳ್ಳಬಹುದಾದ ಸರಳ ಕ್ರಮಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಹರಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ.
ಸ್ವಿಟ್ಜರ್ಲ್ಯಾಂಡ್ನ ಜಿನೀವಾದ ವರ್ಡ್ ಹಾರ್ಟ್ ಫೆಡರೇಶನ್ ಸೆಪ್ಟೆಂಬರ್ನ ಕೊನೆಯ ಭಾನುವಾರವನ್ನು ವಿಶ್ವ ಹೃದಯ ದಿನವಾಗಿ ಆಚರಿಸುತ್ತದೆ. ಈ ದಿನದಂದು, ಹೃದ್ರೋಗಕ್ಕೆ ಕಾರಣವಾಗುವ ಅಂಶಗಳು ಮತ್ತು ಅದನ್ನು ತಪ್ಪಿಸಲು ಕೈಗೊಳ್ಳಬಹುದಾದ ಸರಳ ಕ್ರಮಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಹರಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಸುಮಾರು 1.7 ಕೋಟಿ ಜನರು ಹೃದ್ರೋಗದಿಂದ ಸಾವನ್ನುಪ್ಪುತ್ತಿದ್ದಾರೆ. 2012ರ ಥೀಮ್ -‘ಒಂದು ಹೃದಯ, ಒಂದು ಮನೆ, ಒಂದು ಜಗತ್ತು" ಆಗಿರುವುದರಿಂದ, ತಾಯಂದಿರು ಮತ್ತು ಮಕ್ಕಳನ್ನೂ ಸೇರಿಸಿ ಸಂಪೂರ್ಣ ಮನೆಯಲ್ಲಿ, ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವತ್ತ ಗಮನ ಹರಿಸಲಾಗಿದೆ. ಈಶ ಬ್ಲಾಗ್ನಲ್ಲಿ ನಾವು, ಈ ಉಪಕ್ರಮದ ಭಾಗವಾಗಲು ಮತ್ತು ಮಹಿಳೆಯರಲ್ಲಿ ಹೃದಯ ನಾಳೀಯ ಕಾಯಿಲೆಗಳ (ಕಾರ್ಡಿಯೋ ವ್ಯಾಸ್ಕುಲಾರ್ ಡಿಸೀಸ್ (ಸಿವಿಡಿ)) ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಲು ಬಯಸುತ್ತೇವೆ.
ಹೃದಯ ರಕ್ತನಾಳದ ಕಾಯಿಲೆಯ ಭೀತಿ
ವಿಶ್ವದ ಮಹಿಳೆಯರಲ್ಲಿ ಸಾವಿಗೆ ಹೃದ್ರೋಗವೇ ಮುಖ್ಯ ಕಾರಣ ಎಂದು ನಿಮಗೆ ತಿಳಿದಿದೆಯೇ? ಭಾರತದಲ್ಲಿ, ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಸಿವಿಡಿಗೆ ತುತ್ತಾಗುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಮತ್ತು ಅಮೇರಿಕಾದಲ್ಲಿ, ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬ ಮಹಿಳೆ ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಈ ಸಂಖ್ಯೆಯು ವಿಶೇಷವಾಗಿ ಸಂಸ್ಕರಿಸಿದ ಆಹಾರಗಳು ಮತ್ತು ಕುಳಿತೇ ಕೆಲಸ ಮಾಡುವ ಜೀವನಶೈಲಿ ಪ್ರಚಲಿತದಲ್ಲಿರುವ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವುದು ಆತಂಕಕ್ಕೆ ಇನ್ನೂ ದೊಡ್ಡ ಕಾರಣವಾಗಿದೆ.
ಪ್ರಸ್ತುತ ಗತಿಯಲ್ಲಿ, 2030ರ ಹೊತ್ತಿಗೆ, ಸಿವಿಡಿಯಿಂದ ವಾರ್ಷಿಕವಾಗಿ 2.3 ಕೋಟಿ ಜನರು ಸಾವನ್ನಪ್ಪುವ ನಿರೀಕ್ಷೆಯಿದೆ. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಈ ಅಂಕಿ ಅಂಶಗಳು ಪುರುಷರಿಗೆ ಹೋಲಿಸಿದರೆ ಮಹಿಳೆಯರ ಹೃದಯವು ಅನಾರೋಗ್ಯಕ್ಕೆ ತುತ್ತಾಗುವುದು ಕಡಿಮೆಯೆಂಬ ಸಾಮಾನ್ಯ ಗ್ರಹಿಕೆಗೆ ವಿರುದ್ಧವಾದ ಚಿತ್ರಣವನ್ನು ತೋರಿಸುತ್ತವೆ. ಆಧುನಿಕ, ನಗರ ಜೀವನಶೈಲಿಗೆ ಜೊತೆಗೂಡಿರುವ ಅರಿವಿಲ್ಲದಿರುವಿಕೆ, ನಿರ್ಲಕ್ಷ್ಯ, ಹೆಚ್ಚಿನ ಮಟ್ಟದ ಒತ್ತಡ ಮತ್ತು ಆಹಾರದ ಅಸಮತೋಲನ ಬಹುಶಃ ಮಹಿಳೆಯರಲ್ಲಿ ಸಿವಿಡಿಯ ಮುಂದುವರೆದ ಏರಿಕೆಗೆ ಮುಖ್ಯ ಕಾರಣಗಳಾಗಿವೆ.
ಮಹಿಳೆಯರ ಹೃದ್ರೋಗಕ್ಕೆ ಅತ್ಯಂತ ಅಪಾಯಕಾರಿ ಅಂಶಗಳು
ಪರಿಧಮನಿಯ ಹೃದಯ ಕಾಯಿಲೆ, ಬ್ರೋಕನ್ ಹಾರ್ಟ್ ಸಿಂಡ್ರೋಮ್, ಪರಿಧಮನಿಯಮೈಕ್ರೊವಾಸ್ಕುಲರ್ ಕಾಯಿಲೆ ಅಥವಾ ಹೃದಯ ವೈಫಲ್ಯವಾಗಿರಲಿ, ಈ ಕಾಯಿಲೆಗಳಿಗೆಕಾರಣವಾಗುವ ಅಪಾಯಕಾರಿ ಅಂಶಗಳು ಯಾವಾಗಲೂ ಒಂದೇ ಆಗಿರುತ್ತವೆ. ಕೆಲ ಪ್ರಮುಖ ಅಪಾಯಕಾರಿ ಅಂಶಗಳು ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ಆಗಿರುತ್ತವೆ - ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್. ಆದರೆ ಮಹಿಳೆಯರಲ್ಲಿ ಹೃದ್ರೋಗದ ಬೆಳವಣಿಗೆಯಲ್ಲಿ ದೊಡ್ಡ ಪಾತ್ರವಹಿಸುವ ಕೆಲ ಅಂಶಗಳಿವೆ:
- ಒತ್ತಡ ಮತ್ತು ಖಿನ್ನತೆ: ಮಾನಸಿಕ ಒತ್ತಡವು ಪುರುಷರ ಹೃದಯಕ್ಕಿಂತ ಮಹಿಳೆಯ ಹೃದಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಖಿನ್ನತೆಗೆ ಒಳಗಾದ ಮಹಿಳೆಯರು ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಕಷ್ಟಪಡಬಹುದು.
- ಧೂಮಪಾನ: ಪುರುಷರಿಗಿಂತ ಮಹಿಳೆಯರಲ್ಲಿ ಸಿವಿಡಿಗೆ ಇದು ಹೆಚ್ಚು ಅಪಾಯಕಾರಿ ಅಂಶವಾಗಿದೆ.
- ಮುಟ್ಚು ನಿಲ್ಲುವ ಕಾಲ: ಮುಟ್ಚು ನಿಂತ ನಂತರ ಮಹಿಳೆಯ ದೇಹದಲ್ಲಿ ಈಸ್ಟ್ರೊಜೆನ್ನ ಉತ್ಪಾದನೆಯು ಕಡಿಮೆಯಾಗುವುದು ಸಣ್ಣ ರಕ್ತನಾಳಗಳಲ್ಲಿ ಸಿವಿಡಿಗಳನ್ನು ಅಭಿವೃದ್ಧಿಪಡಿಸುವ ಮಹತ್ವದ ಅಂಶವೆಂದು ಪರಿಗಣಿಸಲಾಗುತ್ತದೆ.
- ಮೆಟಾಬಾಲಿಕ್ ಸಿಂಡ್ರೋಮ್: ಅಧಿಕ ರಕ್ತದೊತ್ತಡ, ರಕ್ತದಲ್ಲಿ ಅಧಿಕ ಸಕ್ಕರೆ, ಅಧಿಕ ಟ್ರೈಗ್ಲಿಸರೈಡ್ಸ್ಗಳು ಮತ್ತು ಹೊಟ್ಟೆಯ ಸುತ್ತಲಿನ ಕೊಬ್ಬು ಒಂದು ಸಂಯೋಜನೆಯನ್ನು ರೂಪಿಸಿ, ಇದು ಮೆಟಾಬಾಲಿಸಮನ್ನು ಕಡಿಮೆ ಮಾಡುತ್ತದೆ. ಇದು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅಪಾಯಕಾರಿ.
ಕಾಯಿಲೆಗೆ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬಾರದಂತೆ ತಡೆಯುವುದೇ ಅತ್ಯುತ್ತಮ
ಮಹಿಳೆಯರಿಗೆ ಒಳ್ಳೆಯ ಸುದ್ದಿ ಎಂದರೆ ಸಿವಿಡಿಯನ್ನು ಕೆಲವೇ ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಮಾಡುವ ಮೂಲಕ ಸುಲಭವಾಗಿ ತೆಗೆದುಹಾಕಬಹುದು. ಇದಕ್ಕೆ ಹೆಚ್ಚು ಶ್ರಮವೂ ಬೇಕಾಗುವುದಿಲ್ಲ; ಆರೋಗ್ಯಕರ, ಸಂತೋಷಭರಿತ ಹೃದಯವನ್ನು ಹೊಂದಲು ನಿಮಗೆ ಸಹಾಯ ಮಾಡುವಲ್ಲಿ ಸಣ್ಣ ಸಣ್ಣ ಬದಲಾವಣೆಗಳು ಹೆಚ್ಚು ಲಾಭದಾಯಕವಾಗಬಹುದು. ಇಂದು ಜಗತ್ತಿನಾದ್ಯಂತದ ವೈದ್ಯರು ಶಿಫಾರಸು ಮಾಡುವ ಪ್ರಮುಖ ಬದಲಾವಣೆಯೆಂದರೆ ಆಹಾರ ಕ್ರಮ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರುವ ಹೆಚ್ಚು ನೈಸರ್ಗಿಕ ಆಹಾರ ಕ್ರವನ್ನು ರೂಢಿಸಿಕೊಳ್ಳಲು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ.
ವ್ಯಾಯಾಮ ಕೂಡ ಬಹಳ ಮುಖ್ಯ - ದಿನಕ್ಕೆ ಕನಿಷ್ಠ 30 ನಿಮಿಷ, ವಾರಕ್ಕೆ 5 ರಿಂದ 6 ದಿನಗಳಲ್ಲಿ ಚುರುಕಾದ ವಾಕಿಂಗ್ ಮಾಡಲು ಅಥವಾ ಓಡಲು ಅಥವಾ ಈಜಲು ಸಲಹೆ ನೀಡಲಾಗುತ್ತದೆ. ದಿನವಿಡೀ ದೈಹಿಕವಾಗಿ ಸಕ್ರಿಯವಾಗಿರುವುದು ಪ್ರಯೋಜನಕಾರಿ. ನಿಮ್ಮ ಹೃದಯವನ್ನು ನೀವು ಎಷ್ಟು ಹೆಚ್ಚು ಬಳಸುತ್ತೀರೋ, ಅದು ಅಷ್ಟೇ ಉತ್ತಮವಾಗಿರುತ್ತದೆ. ನಿಮ್ಮ ವಯಸ್ಸು, ಜೀವನಶೈಲಿ ಮತ್ತು ಕುಟುಂಬದ ಇತಿಹಾಸದ ಆಧಾರದ ಮೇಲೆ ನಿಯಮಿತ ತಪಾಸಣೆಯು ಈ ರೋಗದ ತಡೆಗಟ್ಟುವಿಕೆಯ ದೃಷ್ಟಿಯಿಂದಲೂ ಬಹಳ ಪ್ರಯೋಜನಕಾರಿ.
ಯೋಗದ ಪಾತ್ರ
ಹೃದಯಾಘಾತ ಮತ್ತು ಸಿವಿಡಿಯನ್ನು ತಡೆಗಟ್ಟುವಲ್ಲಿ ಯೋಗವು ಮಹತ್ವದ ಪಾತ್ರವಹಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುವುದು ಅತ್ಯಂತ ಸ್ಪಷ್ಟವಾದ ಪ್ರಯೋಜನಗಳಲ್ಲಿ ಒಂದಾಗಿದೆ. ಹಲವಾರು ಸಂಶೋಧನಾ ಅಧ್ಯಯನಗಳು ಯೋಗದ ನಿಯಮಿತ ಅಭ್ಯಾಸವು ಒತ್ತಡದ ಸಂದರ್ಭಗಳಲ್ಲಿ ಒತ್ತಡದ ಅನುಭವ ಮತ್ತು ಪ್ರತಿಕ್ರಿಯಾತ್ಮಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಾಬೀತುಪಡಿಸಿದೆ. ಅಧಿಕ ರಕ್ತದೊತ್ತಡ, ರಕ್ತದಲ್ಲಿ ಅಧಿಕ ಸಕ್ಕರೆ ಮತ್ತು ಅಧಿಕ ಕೊಲೆಸ್ಟ್ರಾಲ್ನಂತಹ ಇತರ ಹೆಚ್ಚಿನ ಅಪಾಯಕಾರಿ ಅಂಶಗಳಂತೆ ಕೋಪ, ಆಯಾಸ ಮತ್ತು ಉದ್ವೇಗವೂ ಕಡಿಮೆಯಾಗುತ್ತದೆ.
ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವುದಲ್ಲದೆ, ಯೋಗವು ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಸ್ವನಿಯಂತ್ರಿತ ನರಮಂಡಲದ (ಎಎನ್ಎಸ್) ಕಾರ್ಯ ನಿರ್ವಹಣೆಯನ್ನು ನಿಯಂತ್ರಿಸಲಾಗುತ್ತದೆ. ಹೃದಯದ ಎಎನ್ಎಸ್ ವ್ಯವಸ್ಥೆಯು ಸಮತೋಲನಗೊಂಡಾಗ, ಹೃದಯ ಬಲಗೊಂಡು ವಿವಿಧ ಸಿವಿಡಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಈಶದ ಯೋಗಾಭ್ಯಾಸ ಮಾಡುವವರು ಮತ್ತು ಅಭ್ಯಾಸ ಮಾಡದವರ ಮೇಲೆ ನಡೆಸಿದ ಅಧ್ಯಯನವು ಯೋಗಾಭ್ಯಾಸ ಮಾಡುವವರ ಜನರ ಗುಂಪಿನಲ್ಲಿ ಎಎನ್ಎಸ್ನ ಹೆಚ್ಚಿನ ಸಮತೋಲನವನ್ನು ತೋರಿಸಿದೆ.
ವಿಶ್ವ ಹೃದಯ ದಿನಾಚರಣೆಯ ಸಂದರ್ಭದಲ್ಲಿ, ನಾವು ನಿಮಗೆ ಸಂತೋಷದಾಯಕ, ಆರೋಗ್ಯಕರ ಮತ್ತು ‘ಉಲ್ಲಾಸಮಯ’ ಜೀವನವನ್ನು ಹಾರೈಸುತ್ತೇವೆ!
ಸಂಪಾದಕರ ಟಿಪ್ಪಣಿ: ಈಶ ಫೌಂಡೇಶನ್ ನಡೆಸುವ ಯೋಗ ಕಾರ್ಯಕ್ರಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು http://isha.sadhguru.org/ಗೆ ಭೇಟಿ ನೀಡಿ
Content credit to Mayo Clinic and Times of India