ಸದ್ಗುರುಗಳಿಂದ ಸಂಸ್ಥಾಪಿಸಲ್ಪಟ್ಟ ಈಶ ಫೌಂಡೇಶನ್ ಒಂದು ಲಾಭೋದ್ದೇಶವಿಲ್ಲದ ಅಂತರರಾಷ್ಟ್ರೀಯ ಜನಸೇವಾ ಸಂಸ್ಥೆ. ಪ್ರಪಂಚದಾದ್ಯಂತ ಇರುವ ೨೫೦ಕ್ಕೂ ಮೇಲ್ಪಟ್ಟ ಕಾರ್ಯಾಲಯಗಳಲ್ಲಿರುವ ತೊಂಬತ್ತು ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಇದಕ್ಕೆ ಒತ್ತಾಸೆಯಾಗಿರುವರು. ಇನ್ನೊಬ್ಬನನ್ನು ಸಶಕ್ತನನ್ನಾಗಿಸುವಂತಹ ಸಾಮರ್ಥ್ಯವು ಪ್ರತಿಯೊಂದು ಮಾನವನಲ್ಲಿರುವುದನ್ನು ಪರಿಗಣಿಸುತ್ತಾ, ಈಶ ಫೌಂಡೇಶನ್, ಯಾವುದೇ ನಿರ್ದಿಷ್ಟ ಸಿದ್ಧಾಂತ, ಮತ ಅಥವಾ ಜನಾಂಗವನ್ನು ಅನುಮೋದಿಸದೇ, ಸರ್ವವಿಧಗಳಿಂದಲೂ ಮಾನವಕಲ್ಯಾಣವನ್ನು ಸಾಧಿಸುವುದಕ್ಕಾಗಿ ಕಂಕಣಬದ್ಧವಾದ ಒಂದು ಮಹಾಆಂದೋಲನವನ್ನು ಹುಟ್ಟುಹಾಕಿದೆ.
Subscribe