Main Centers
International Centers
India
USA
Wisdom
FILTERS:
SORT BY:
ಯೋಚನೆ ಮತ್ತು ಭಾವನೆಗಳು ಪ್ರತ್ಯೇಕ ಸಂಗತಿಗಳಲ್ಲ. ನೀವು ಯೋಚಿಸುವ ರೀತಿಯೇ ನೀವು ಭಾವಿಸುವ ರೀತಿಯಾಗಿರುತ್ತದೆ.
ಬದುಕನ್ನು ಸುಂದರವಾಗಿಸುವುದು ನೀವು ಎಷ್ಟು ಕೆಲಸ ಮಾಡಿದಿರಿ ಎಂಬುದಲ್ಲ, ಬದಲಿಗೆ ಅದನ್ನು ಹೇಗೆ ಮಾಡಿದಿರಿ ಎಂಬುದು.
ನಿಮ್ಮ ಸ್ವಾಸ್ಥ್ಯ ಮತ್ತು ಅಸ್ವಾಸ್ಥ್ಯ, ನಿಮ್ಮ ಸಂತೋಷ ಮತ್ತು ತೊಳಲಾಟ, ಎಲ್ಲವೂ ಉಂಟಾಗುವುದು ಒಳಗಿನಿಂದ. ನಿಮಗೆ ಒಳಿತು ಬೇಕಿದ್ದರೆ ನೀವು ಅಂತರ್ಮುಖರಾಗಬೇಕು.
ಒಮ್ಮೆ ನೀವು ನಿಮ್ಮ ಚೇತನದ ಆಂತರ್ಯದ ಆನಂದವನ್ನು ಅನುಭವಿಸಿದರೆ, ಬಾಹ್ಯ ಸುಖಗಳು ಕ್ಷುಲ್ಲಕವೆನಿಸುತ್ತವೆ.
ನಿಮ್ಮ ಜೀವಶಕ್ತಿಯನ್ನು ಲವಲವಿಕೆಭರಿತವೂ ಕೇಂದ್ರಿತವೂ ಆಗಿಟ್ಟುಕೊಂಡರೆ ನಿಮಗೆ ಬೇಕಿದ್ದುದೆಲ್ಲವೂ ತಾನಾಗೇ ನಡೆಯುತ್ತದೆ.
ಚಲಿಸುವುದೆಲ್ಲವೂ ಒಂದು ದಿನ ತೀರಿ ಹೋಗುವುದು. ಅಚಲವಾದುದು ಮಾತ್ರ ಶಾಶ್ವತ. ಧ್ಯಾನವೆಂದರೆ ಮೂಲತಃ ಆ ಅಚಲತೆಯೆಡೆಗೆ ಸಾಗುವುದು, ಮತ್ತು ಅಸ್ತಿತ್ವದ ಜೀವಾಳದಂತಾಗುವುದು.
ಜೀವನದಲ್ಲಿ ನಿಮಗೆ ಸಿಗಬಹುದಾದ ಅತ್ಯಂತ ದೊಡ್ಡ ಸಾರ್ಥಕತೆಯೆಂದರೆ ನಿಮಗಿಂತ ಎಷ್ಟೋ ಮಿಗಿಲಾದ ಒಂದು ವಿಷಯವನ್ನು ಮಾಡುವುದು.
ನಿಮ್ಮ ಸುತ್ತಲಿನ ಎಲ್ಲದರೊಂದಿಗೂ ನೀವು ಆಳವಾಗಿ, ಪ್ರಜ್ಞಾಪೂರ್ವಕವಾಗಿ ತೊಡಗಿದಾಗ, ಅದರಲ್ಲಿ ಯಾವ ರೀತಿಯ ಬಂಧನವೂ ಇರುವುದಿಲ್ಲ; ಕೇವಲ ಆನಂದವಷ್ಟೆ ಇರುತ್ತದೆ.
ಒತ್ತಡ, ಭಯ, ಅಥವಾ ಇನ್ಯಾವುದೇ ರೀತಿಯ ಋಣಾತ್ಮಕತೆಯನ್ನು ನೀವು ಅನುಭವಿಸಿದರೂ, ಅವೆಲ್ಲದಕ್ಕೂ ಇರುವುದು ಒಂದೇ ಮೂಲ ಕಾರಣ: ನಿಮ್ಮ ಅಂತರಂಗದ ಸ್ವರೂಪದ ಬಗೆಗಿನ ಅಜ್ಞತೆ.
ನೀವು ನಡೆಯಲು ಆರಿಸಿಕೊಳ್ಳುವ ದಾರಿಯು ಯಾವುದೇ ಆಗಿರಲಿ, ನನ್ನನ್ನು ನಿಮ್ಮ ದಾರಿಯನ್ನು ಬೆಳಗುವ ದೀಪವಾಗಿಸಿಕೊಳ್ಳಿ. ಈ ದೀಪಾವಳಿಯು ನಿಮ್ಮ ಜೀವನವನ್ನು ಒಳಗಿನಿಂದಲೂ ಹೊರಗಿನಿಂದಲೂ ದೇದೀಪ್ಯಮಾನವಾಗಿ ಬೆಳಗಲಿ.ಪ್ರೀತಿ ಮತ್ತು ಆಶೀರ್ವಾದಗಳು,
ಕರ್ಮಸಂಚಯವಾಗುವುದು ನೀವು ಮಾಡುವ ಕಾರ್ಯದಿಂದಲ್ಲ, ಬದಲಿಗೆ ನಿಮ್ಮ ಸಂಕಲ್ಪಗಳಿಂದ. ಕರ್ಮವನ್ನು ಉಂಟುಮಾಡುವುದು ನೀವು ಏನು ಮಾಡುತ್ತೀರಿ ಎಂಬುದಲ್ಲ, ಬದಲಿಗೆ ಅದನ್ನು ಹೇಗೆ ಮಾಡುತ್ತೀರಿ ಎಂಬುದು.
ನೀವು ನಿಮ್ಮ ದೇಹ, ಮನಸ್ಸು, ಪ್ರಾಣಶಕ್ತಿ, ಮತ್ತು ಭಾವನೆಗಳನ್ನು ಒಂದು ಮಟ್ಟದ ಪ್ರಬುದ್ಧತೆಗೆ ತಂದರೆ, ಧ್ಯಾನವು ಸಹಜವಾಗಿಯೇ ಅರಳುತ್ತದೆ.