ನಿಮ್ಮ ಮಕ್ಕಳ ವಿಕಸನಕ್ಕೆ ನೆರವಾಗುವುದಕ್ಕಾಗಿ ಪೋಷಕರಿಗೆ ಹತ್ತು ಶ್ರೇಷ್ಠ ಒಳ ಸೂಚನೆಗಳು
ಮಕ್ಕಳನ್ನು ಬೆಳೆಸುವುದರ ಕುರಿತು ಯಾವುದೇ ಒಂದು ನಿಖರವಾದ ಸ್ಪಷ್ಟ ವಿವರಣೆಯಾಗಲಿ ಅಥವಾ ಸರಿಯಾದ ಪದ್ಧತಿಯಾಗಲಿ ಇಲ್ಲವೆಂಬುದು ನಿಜ. ಅದಕ್ಕಾಗಿ ನಿಮ್ಮ ಮಕ್ಕಳ ಸುಖ-ಸಂತೋಷವನ್ನು ನಿಶ್ಚಿತಗೊಳಿಸುವ ಕೆಲವು ಒಳಸೂಚನೆಗಳನ್ನು ಪೋಷಕರಿಗಾಗಿ ಇಲ್ಲಿ ಕೊಡಲಾಗಿದೆ. ಸದ್ಗುರುಗಳು ಮಕ್ಕಳ ಬೆಳವಣಿಗೆಗಾಗಿ ಪೋಷಕರಿಗೆ ನೀಡಿರುವ ಉತ್ತಮವಾದ ಆ ಹತ್ತು ಒಳಸೂಚನೆಗಳನ್ನು ಗಮನಿಸೋಣ.
ಸದ್ಗುರು: ಪೋಷಕರ ಕರ್ತವ್ಯವು ಒಂದು ನಿರ್ದಿಷ್ಟವಾದ ವಿವೇಚನೆಯಿಂದ ಕೂಡಿದೆ. ಇಲ್ಲ ಮಕ್ಕಳಿಗೂ ಒಂದೇ ಮಾನದಂಡದ ಸೂತ್ರವಿಲ್ಲ. ಬೇರೆ ಬೇರೆ ಮಕ್ಕಳಿಗೆ ಬೇರೆ ಬೇರೆ ಬೇರೆ ಮ್ಟ್ಟದ ಗಮನ, ಪ್ರೀತಿಯ ವ್ಯಕ್ತತೆ, ಹಾಘೂ ಕಠಿನತೆಯ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ನಾನೊಂದು ತೆಂಗಿನ ತೋಟದಲ್ಲಿ ನಿಂತಿರುವಾಗ ನೀವು, ಒಂದೊಂದು ಮರಕ್ಕೂ ಎಷ್ಟು ನೀರು? ಎಂದು ಕೇಳಿದರೆ, ಕನಿಷ್ಠ ಪಕ್ಷ ಒಂದೊಂದು ಗಿಡಕ್ಕೆ ೫೦ ಲೀಟರ್, ಎನ್ನುತ್ತೇನೆ. ನೀವು ಮನೆಗೆ ಹೋಗಿ ನಿಮ್ಮ ಗುಲಾಬಿ ಗಿಡಕ್ಕೆ ೫೦ ಲೀಟರ್ ನೀರನ್ನು ಹಾಕಿದರೆ, ಅದು ಸಾಯುತ್ತದೆ. ನಿಮ್ಮ ಮನೆಯಲ್ಲಿ ಯಾವ ಜಾತಿಯ ಗಿಡವಿದೆ, ಮತ್ತು ಅದರ ಅಗತ್ಯಗಳೇನು ಎನ್ನುವುದನ್ನು ಗಮನಿಸಬೇಕು.
ಒಳ ಸೂಚನೆ ೧: ಸುಯೋಗವನ್ನು ಅಂಗೀಕರಿಸಿ
ಆನಂದದ ಖಿನಿಯಾದ ಈ ಮಗುವು ನಿಮ್ಮ ಮೂಲಕ ನಿಮ್ಮ ಮನೆಗೆ ಬಂದಿರುವುದೇ ಒಂದು ಸೌಭಾಗ್ಯವಾಗಿದೆ. ಮಕ್ಕಳು ನಿಮ್ಮ ಆಸ್ತಿಯಲ್ಲ; ಅವರು ನಿಮಗೆ ಸೇರಿಕವರಲ್ಲ. ಕೇವಲ ಅವರಿಂದ ಹೇಗೆ ಆನಂದ ಪಡೆಯುವುದು, ಅವರನ್ನು ಹೇಗೆ ಪಾಲನೆ ಮಾಡುವುದು ಮತ್ತು ಉತ್ತೇಜಿಸುವುದು ಎನ್ನುವುದರ ಕಡೆ ಗಮನ ಕೊಡಿ. ನಿಮ್ಮ ಭವಿಷ್ಯಕ್ಕಾಗಿ ಅವರನ್ನು ಒಂದು ಬಂಡವಾಳವಾಗಿಸಲು ಪ್ರಯತ್ನಿಸದಿರಿ.
ಒಳಸೂಚನೆ ೨: ಅವರ ಪಾಡಿಗೆ ಬಿಡಿ
ಅವರು ಏನಾಗಬೇಕೋ ಅದೇ ಆಗಲಿ. ನೀವು ನಿಮ್ಮ ಜೀವನವನ್ನು ಅರ್ಥೈಸಿಕೊಂಡಿರುವ ರೀತಿಯಲ್ಲಿ ಅವರನ್ನು ರೂಪಿಸಲು ಪ್ರಯತ್ನಿಸಬೇಡಿ. ನೀವು ನಿಮ್ಮ ಜೀವನದಲ್ಲಿ ಏನು ಮಾಡಿದ್ದೀರೋ ನಿಮ್ಮ ಮಕ್ಕಳು ಅದನ್ನೇ ಮಾಡುವ ಅಗತ್ಯವಿಲ್ಲ. ನಿಮ್ಮ ಜೀವನದಲ್ಲಿ ನೀವು ಯೋಚಿಸಲೂ ರ್ಧೈಮಾಡದೆ ಇರುವಂತಹ ಯಾವುದಾದರೂ ಕೆಲಸವನ್ನು ಅವರು ಮಾಡಬೇಕು. ಆಗಲೇ ಪ್ರಪಂಚವು ಪ್ರಗತಿಯನ್ನು ಸಾಧಿಸುತ್ತದೆ.
ಒಳಸೂಚನೆ ೩: ಅವರಿಗೆ ನಿಮ್ಮ ಶುದ್ಧ ಪ್ರೀತಿಯನ್ನು ನೀಡಿ
ಮಕ್ಕಳು ಕೇಳಿದುದೆಲ್ಲವನ್ನೂ ಕೊಡಿಸುವ ಪ್ರಕ್ರಿಯೆಯೇ ಮಕ್ಕಳಿಗೆ ಪ್ರೀತಿ ತೋರುವುದು ಎಂಬ ತಪ್ಪು ತಿಳುವಳಿಕೆ ಜನರಲ್ಲಿದೆ. ಅವರು ಕೇಳಿದುದೆಲ್ಲವನ್ನೂ ಅವರಿಗೆ ಕೊಡಿಸಿದರೆ, ಅದು ಅವಿವೇಕವಲ್ಲವೇ? ನೀವು ಅವರನ್ನು ಪ್ರೀತಿಸುವಾಗ, ಅವರಿಗೆ ಕೇವಲ ಅಗತ್ಯವಾದುದನ್ನು ಮಾಡಬಹುದು. ನೀವು ನಿಜವಾಗಲೂ ಯಾರನ್ನಾದರೂ ಪ್ರೀತಿಸಿದಾಗ, ನೀವು ಜನಪ್ರಿಯರಾಗದೇ ಇರಲು ಇಚ್ಛಿಸುವಿರಿ ಹಾಗೂ ಅವರಿಗಾಗಿ ಯಾವುದು ಅಧಿಕ ಸೂಕ್ತವೋ ಅದನ್ನೇ ಮಾಡುವಿರಿ.
ಒಳಸೂಚನೆ ೪: ಅವರ ಶೀಘ್ರ ಬೆಳವಣಿಗೆಗೆ ಒತ್ತು ಕೊಡಬೇಡಿ
ಮಕ್ಕಳು ಮಕ್ಕಳಂತಿರಬೇಕು; ಅವರನ್ನು ಶೀಘ್ರವಾಗಿ ಯುವಕರನ್ನಾಗಿಸಲು ಪ್ರಯತ್ನಿಸದಿರಿ, ಏಕೆಂದರೆ, ಅನಂತರ ಅದನ್ನು ಹಿಮ್ಮೊಗ ಮಾಡಲಾಗುವುದಿಲ್ಲ. ಅವನು ಮಗುವಾಗಿರುವಾಗ, ಮಗುವಿನಂತೆ ವರ್ತಿಸುವಾಗ ಅದು ಅದ್ಭುತವಾಗಿರುತ್ತದೆ. ಅವನು ಯುವಕನಾದಾಗ, ಮಗುವಿನಂತೆ ವರ್ತಿಸಿದರೆ ಅದು ಕೆಟ್ಟದಾಗಿರುತ್ತದೆ. ಮಗುವು ಯುವುಕನಾಗುವುದಕ್ಕೆ ಧಾವಂತ ಬೇಡ.
ಒಳಸೂಚನೆ ೫: ಅದನ್ನು ಕಲಿಯುವ ಸಮಯವನ್ನಾಗಿಸಿಕೊಳ್ಳಿ, ಬೋಧಿಸುವ ಸಮಯವನ್ನಾಗಿ ಅಲ್ಲ
ನಿಮ್ಮ ಮಕ್ಕಳಿಗೆ ಬೋಧಿಸುವುದಕ್ಕೆ ನೀವು ಜೀವನದಲ್ಲಿ ಏನನ್ನು ಅರಿತಿರುವಿರಿ? ಕೇವಲ ಕೆಲವು ಉಳಿವಿನ ಚಾತುರ್ಯತೆಯನ್ನು ಮಾತ್ರ ಕಲಿಸಬಹುದಷ್ಟೆ. ನೀವು ನಿಮ್ಮನ್ನು ನಿಮ್ಮ ಮಗುವಿನ ಜತೆ ಹೋಲಿಸಿಕೊಂಡು, ಯಾರು ಹೆಚ್ಚು ಆನಂದವಾಗಿರುವ ಸಾಮರ್ಥ್ಯವನ್ನು ಹೊಂದಿದ್ದಾರೆಂಬುದನ್ನು ಕಂಡು ಕೊಳ್ಳಿ. ನಿಮ್ಮ ಮಗುವೇ ಅಲ್ಲವೇ? ಅವನು ನಿಮಗಿಂತಲೂ ಹೆಚ್ಚು ಆನಂದವನ್ನು ತಿಳಿದುಕೊಂಡಿದ್ದರೆ, ಜೀವನದ ಕುರಿತು ಯಾರು ಸಲಹೆಗಾರರಾಗಲು ಅರ್ಹರಾಗುತ್ತಾರೆ, ನೀವೋ ಅಥವಾ ಅವನೋ?
ಒಂದು ಮಗುವಿನ ಆಮಗನವಾದಾಗ, ಅದು ನಾವು ಕಲಿಯುವ ಸಮಯವಾಗಿರುತ್ತದೆ. ಬೋಧಿಸುವ ಸಮಯವಲ್ಲ, ಜೀವನದ ಕುರಿತು ಕಲಿಯುವ ಸಮಯ.
ಒಳಸೂಚನೆ ೬: ಅವರ ಸಹಜ ಅಧ್ಯಾತ್ಮಿಕೆಯನ್ನು ಪೋಷಿಸಿ
ಅವರ ಮಧ್ಯೆ ಹಸ್ತಕ್ಷೇಪ ಮಾಡದೇ ಇದ್ದರೆ, ಮಕ್ಕಳು ಅಧ್ಯಾತ್ಮಿಕತೆಯ ಸಾಧ್ಯತೆಗೆ ನಿಕಟವಾಗಿರುತ್ತಾರೆ. ಸಾಮಾನ್ಯವಾಗಿ, ಪೋಷಕರಾಗಲಿ, ಶಿಕ್ಷಕರಾಗಲಿ, ಸಮಾಜವಾಗಲಿ, ದೂರದರ್ಶನವಾಗಲಿ, ಯಾರೇ ಅಥವಾ ಯಾವುದೇ ಆಗಲಿ, ಅವರೊಂದಿಗೆ ಅತಿಯಾಗಿ ಮಧ್ಯ ಪ್ರವೇಶಿಸುತ್ತಾರೆ / ಪ್ರವೇಶಿಸುತ್ತವೆ. ಇಂತಹ ಹಸ್ತಕ್ಷೇಪದ ವಾತಾವರಣವನ್ನು ಕನಿಷ್ಠಗೊಳಿಸಿ, ಮಗುವಿನ ಬುದ್ಧಿಯ ವೃದ್ಧಿಗೆ ಉತ್ತೇಜನ ಕೊಡಿ, ಆದರೆ ನಿಮ್ಮ ಧರ್ಮದ ಗುರುತಿಸುವಿಕೆಯನ್ನಲ್ಲ. ಮಗುವು ಅಧ್ಯಾತ್ಮಿಕತೆ ಎಂಬ ಪದವನ್ನೇ ಅರಿಯದೇ, ಅದು ಸಹಜವಾಗಿಯೇ ಅಧ್ಯಾತ್ಮಿಕತೆಯತ್ತ ಸಾಗುತ್ತದೆ.
ಒಳಸೂಚನೆ ೭: ಒಂದು ಉತ್ತೇಜನಕಾರಿ ಹಾಗೂ ಪ್ರೀತಿಯ ವಾತಾವರಣವನ್ನು ಒದಗಿಸಿ
ನೀವೊಂದು ಭೀತಿ ಮತ್ತು ಆತಂಕದ ಉದಾಹರಣೆಯನ್ನು / ವಾತಾವರಣವನ್ನು ಸೃಷ್ಟಿಸಿದರೆ, ನಿಮ್ಮ ಮಕ್ಕಳು ಆನಂದದಿಂದ ಜೀವಿಸಬೇಕೆಂದು ಹೇಗೆ ನಿರೀಕ್ಷಿಸುವಿರಿ? ಅವರೂ ಅದನ್ನೇ ಕಲಿಯುತ್ತಾರೆ. ನೀವು ಒಂದು ಆನಂದದ ಮತ್ತು ಪ್ರೀತಿಯ ವಾತಾವರಣವನ್ನು ಸೃಷ್ಟಿಸುವುದೇ ನಿಮ್ಮ ಕರ್ತವ್ಯವಾಗಿದೆ.
ಒಳಸೂಚನೆ ೮: ಒಂದು ಸ್ನೇಹದ ಸಂಬಂಧವನ್ನು ಪೋಷಿಸಿ
ಮಕ್ಕಳ ಮೇಲೆ ನಿಮ್ಮ ಯಾವುದೇ ಬಲವಂತವನ್ನು ಹೇರುವುದನ್ನು ನಿಲ್ಲಿಸಿ. ಒಂದು ಗಾಢವಾದ ಮಿತ್ರತ್ವವನ್ನು ಬೆಳೆಸಿಕೊಳ್ಳಿ, ಅಧಿಕಾರವನ್ನಲ್ಲ. ನೀವೊಂದು ಎತ್ತರದ ಪೀಠದ ಮೇಲೆ ಕುಳಿತು ಮಕ್ಕಳು ಏನನ್ನು ಮಾಡಲೇಬೇಕೆಂದು ಹೇಳಬೇಡಿ. ನೀವು ಮಕ್ಕಳಿಗಿಂತಲೂ ಕೆಳಗೆ ಕುಳಿತರೆ, ಅವರು ನಿಮ್ಮೊಡನೆ ಮಾತನಾಡಲು ಸುಲಭವಾಗುತ್ತದೆ.
ಒಳಸೂಚನೆ ೯: ಗೌರವ ಬಯಸುವುದನ್ನು ಬಿಟ್ಟುಬಿಡಿ
ನೀವು ನಿಮ್ಮ ಮಕ್ಕಳಿಂದ ಪ್ರೀತಿಯನ್ನು ಬಯಸುತ್ತೀರಿ, ಅಲ್ಲವೇ? ಆದರೆ ಅನೇಕ ಪೋಷಕರು ಹೇಳುವುದೆಂದರೆ, ನೀನು ನನ್ನನ್ನು ಗೌರವಿಸಬೇಕು ಎನ್ನುವುದು. ನೀವು ಕೇವಲ ಆ ಮಗುವಿಗಿಂತಲೂ ಸ್ವಲ್ಪ ವರ್ಷಗಳ ಮುಂಚೆ ಇಲ್ಲಿಗೆ ಬಂದಿರಿ, ನಿಮ್ಮ ದೇಹವು ದೊಡ್ಡದಾಗಿದೆ, ನಿಮಗೆ ಉಳಿವಿನ ಕೆಲವು ಚಾಕಚಕ್ಯತೆಗಳು ತಿಳಿದಿವೆ, ಇವುಗಳನ್ನು ಹೊರತುಪಡಿಸಿದರೆ, ನೀವು ಯಾವ ರೀತಿಯಲ್ಲಿ ಜೀವನದಲ್ಲಿ ಮಗುವಿಗಿಂತಲೂ ಶ್ರೇಷ್ಠರಾಗುವಿರಿ?
ಒಳಸೂಚನೆ ೧೦: ನಿಮ್ಮನ್ನು ನೀವು ಪ್ರಾಮಾಣಿಕವಾಗಿ ಆಕರ್ಷಣೀಯವಾಗಿಸಿಕೊಳ್ಳಿ
ಮಗುವು ಹಲವಾರು ವಸ್ತುಗಳು ಮತ್ತು ಜನರಿಂದ ಪ್ರಭಾವಿತವಾಗುತ್ತದೆ - ದೂರದರ್ಶನ, ನೆರೆಹೊರೆಯವರು, ಶಿಕ್ಷಕರು, ಶಾಲೆ ಹಾಗೂ ಲಕ್ಷಾಂತರ ಬೇರೆ ವಿಷಯಗಳಿಂದ ಅದು ತನಗೆ ಯಾವುದು ಹೆಚ್ಚು ಆಕರ್ಷಣೀಯವೋ, ಆ ಮಾರ್ಗದಲ್ಲಿ ಹೋಗುತ್ತದೆ. ಪೋಷಕರಾಗಿ ನೀವು ನಿಮ್ಮನ್ನು ಮಗುವಿಗೆ ಹೆಚ್ಚು ಆಕರ್ಷಿಣೀಯವನ್ನಾಗಿಸಿಕೊಳ್ಳಬೇಕು. ನೀವು ಒಬ್ಬ ಆನಂದಭರಿತ, ಬುದ್ಧಿವಂತ ಹಾಗೂ ಅದ್ಭುತವಾದ ವ್ಯಕ್ತಿಯಾಗಿದ್ದರೆ, ಮಗವು ಬೇರೆಲ್ಲೂ ಜೊತೆಗಾಗಿ ಅರಸುವುದಿಲ್ಲ. ಯಾವುದಕ್ಕೇ ಆಗಲಿ, ನಿಮ್ಮನ್ನೇ ಕೇಳುತ್ತದೆ.
ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪಾಲನೆ ಪೋಷಣೆ ನೀಡಲು ಪ್ರಾಮಾಣಿಕವಾಗಿ ಕುತೂಹಲಿಗಳಾಗಿದ್ದರೆ, ಮೊದಲಿಗೆ ನಿಮ್ಮನ್ನು ನೀವು ಒಬ್ಬ ಶಾಂತಯುತ ಮತ್ತು ಪ್ರೀತಿಯ ಮಾನವನನ್ನಾಗಿ ಪರಿವರ್ತಿಸಿಕೊಳ್ಳಿ.
ಸಂಪಾದಕರ ಟಿಪ್ಪಣಿ: ಈ ಮೇಲ್ಕಂಡ ಒಳಸೂಚನೆಗಳು ನಿಮಗೆ ಉಪಯೋಗಕರವಾಗಿದ್ದರೆ, e-book “inspire your child, inspire the world” ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಉಚಿತವಾಗಿ ಡೌನ್ಲೋಡ್ ಮಾಡಲು price field ನಲ್ಲಿ “0” ಎಂದು ಹಾಕಿ.