ಕುಂಡಲಿನಿ: ನಮ್ಮೊಳಗಿನ ನಿಧಿ
"ಕುಂಡಲಿನಿ" ಎಂಬ ಪದವು, ತನ್ನ ಸಂಭಾವ್ಯತೆಯನ್ನು ಇನ್ನೂ ಕಂಡುಕೊಳ್ಳದ ಒಂದು ಶಕ್ತಿಯ ಆಯಾಮವನ್ನು ಸೂಚಿಸುತ್ತದೆ. ನಿಮ್ಮೊಳಗೆ, ಕಂಡುಹಿಡಿಯಬೇಕಾದ ಒಂದು ದೊಡ್ಡ ಪ್ರಮಾಣದ ಶಕ್ತಿಯಿದೆ, ಅದು ಅಲ್ಲಿಯೇ ಕಾಯುತ್ತಿದೆಯಷ್ಟೆ. ಮನುಷ್ಯ ಎಂದು ನೀವು ಏನನ್ನು ಕೆರೆಯುವಿರೋ, ಅದಿನ್ನೂ ವಿಕಸನಗೊಳ್ಳುತ್ತಿದೆ – ನೀವು ಸಂಪೂರ್ಣವಾಗಿ ಮನುಷ್ಯರಾಗಿಲ್ಲ, ಇನ್ನೂ ಮಾನವರಾಗುವ ಪ್ರಕ್ರಿಯೆಯಲ್ಲಿರುವಿರಿ. ನಿಮ್ಮನ್ನು ನೀವು ಇನ್ನೂ ಉತ್ತಮರನ್ನಾಗಿ ಮಾಡಿಕೊಳ್ಳುವ ಅವಕಾಶ ಸದಾ ಕಾಲ ಇರತ್ತದೆ.
ಸದ್ಗುರು: "ಕುಂಡಲಿನಿ" ಎಂಬ ಪದವು, ತನ್ನ ಸಂಭಾವ್ಯತೆಯನ್ನು ಇನ್ನೂ ಕಂಡುಕೊಳ್ಳದ ಒಂದು ಶಕ್ತಿಯ ಆಯಾಮವನ್ನು ಸೂಚಿಸುತ್ತದೆ. ನಿಮ್ಮೊಳಗೆ, ಕಂಡುಹಿಡಿಯಬೇಕಾದ ಒಂದು ದೊಡ್ಡ ಪ್ರಮಾಣದ ಶಕ್ತಿಯಿದೆ, ಅದು ಅಲ್ಲಿಯೇ ಕಾಯುತ್ತಿದೆಯಷ್ಟೆ. ಮನುಷ್ಯ ಎಂದು ನೀವು ಏನನ್ನು ಕೆರೆಯುವಿರೋ, ಅದಿನ್ನೂ ವಿಕಸನಗೊಳ್ಳುತ್ತಿದೆ – ನೀವು ಸಂಪೂರ್ಣವಾಗಿ ಮನುಷ್ಯರಾಗಿಲ್ಲ, ಇನ್ನೂ ಮಾನವರಾಗುವ ಪ್ರಕ್ರಿಯೆಯಲ್ಲಿರುವಿರಿ. ನಿಮ್ಮನ್ನು ನೀವು ಇನ್ನೂ ಉತ್ತಮರನ್ನಾಗಿ ಮಾಡಿಕೊಳ್ಳುವ ಅವಕಾಶ ಸದಾ ಕಾಲ ಇರತ್ತದೆ.
ನೀವು ಕಪಿಗಳಾಗಿದ್ದಾಗ, ನಿಮಗೆ ಮಾನವರಾಗುವ ಬಯಕೆಯೇನಿರಲಿಲ್ಲ – ಪ್ರಕೃತಿಯು ನಿಮ್ಮನ್ನು ತಳ್ಳುತ್ತಲೇ ಇತ್ತು. ಆದರೆ ಒಮ್ಮೆ ನೀವು ಮಾನವರಾದ ಬಳಿಕ, ವಿಕಸನವು ಪ್ರಜ್ಞಾಪೂರ್ವಕವಾಗಿ ಆಗಬೇಕು. ನೀವು ಪ್ರಜ್ಞಾರಹಿತರಾಗಿದ್ದರೆ, ಅದೇ ಅರ್ಥವಿಲ್ಲದ ಅಂತ್ಯವಿಲ್ಲದ ಸಂಗತಿಗಳು ಸುತ್ತುತ್ತಲೇ ಇರುತ್ತವೆ. ವಿಕಸನವನ್ನು ಪ್ರಜ್ಞಾಪೂರ್ವಕವಾಗಿ ಹುಡುಕಿದರೆ ಮಾತ್ರ ನೀವು ವಿಕಸಿತರಾಗಲು ಸಾಧ್ಯ.
ನೀವು ಜಾಗೃತರಾದರೆ, ವಿಕಾಸ - ಅಥವಾ ಯಾವುದೇ ಬದಲಾವಣೆ - ಅಗತ್ಯವಾದ ಶಕ್ತಿಯಿಲ್ಲದೆ ಸಂಭವಿಸುವುದಿಲ್ಲ. ಹಾಗಾಗಿ, ವಿಕಸನದ ಪ್ರಕ್ರಿಯೆಯು, ಒಂದು ಅಗಾಧವಾದ ಶಕ್ತಿಯನ್ನು ಹುದುಗಿಡಿಸಲು ಅನುವು ಮಾಡಿಕೊಟ್ಟಿತು. ನಿಮ್ಮಲ್ಲಿ ಅರಿವು ಮೂಡಿದಾಗ, ಏನಾದರೂ ಅಮೋಘವಾದದ್ದನ್ನು ಮಾಡಲು ಈ ಶಕ್ತಿಯನ್ನು ಉಪಯೋಗಿಸಬಹುದು. ನೀವು ಕುಳಿತಡಿಯಲ್ಲಿ ಒಂದು ನಿಧಿಯಿದೆ – ಆದರೆ, ನೀವು ತಪ್ಪಾದ ದಿಕ್ಕಿನಲ್ಲಿ ನೋಡುತ್ತಿದ್ದರೆ, ನಿಧಿಯ ಇರುವಿಕೆಯು ನಿಮಗೆ ಎಂದೂ ತಿಳಿಯದು.
ಕುಂಡಲಿನಿ: ನಿಧಿಯ ಮೇಲೆ ಆಸೀನ
ಒಮ್ಮೆ, ಭೀಕರ ಬಡತನದಲ್ಲಿ ಬದುಕುತ್ತಿದ್ದ ಭಿಕ್ಷುಕನೊಬ್ಬನಿದ್ದ. ಮರದಡಿಯಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದ. ಜನ ಒಂದಿಷ್ಟು ನಾಣ್ಯಗಳನ್ನು ಅವನಡೆ ಹಾಕುತ್ತಿದ್ದರು, ಹೀಗೆ ಅವನ ಜೀವನ ನಡೆಯತ್ತಿತ್ತು. ಒಂದು ದಿನ ಮರಣ ಹೊಂದಿದ – ಅವನ ಸತ್ತ ದೇಹವು ಅಲ್ಲಿಯೆ ಇತ್ತು. ಅವನಿಗೆ ಯಾವುದೇ ಸ್ನೇಹಿತರು ಅಥವಾ ಸಂಬಂಧಿಗಳು ಇರಲಿಲ್ಲ. ಹಾಗಾಗಿ ಯಾರೂ ಅವನ ದೇಹವನ್ನು ಸಾಗಿಸಿ, ಅದನ್ನು ಹೂಳಲು ಸಿದ್ಧರಿರಲಿಲ್ಲ. ಅವನನ್ನು ಮರದಡಿಯಲ್ಲೇ ಹೂಳಲು ನಿರ್ಧರಿಸಿದರು. ಗುಂಡಿ ತೆಗೆಯಲು ಜನ ಅಗೆಯಲು ಆರಂಭಿಸಿದ ಹಾಗೆಯೆ ಒಂದು ದೊಡ್ಡ ನಿಧಿಯು ಕಾಣಿಸಿತು. ಅವನ ಕೆಳೆಗೆ, ಕೆಲವೇ ಅಡಿಗಳಲ್ಲಿ, ಒಂದು ದೊಡ್ಡ ನಿಧಿಯಿತ್ತು, ಒಂದು ದೊಡ್ಡ ಮಡಿಕೆ ತುಂಬ ಚಿನ್ನ – ಆ ಮೂರ್ಖ, ತನ್ನ ಜೀವನಪರ್ಯಂತ ಅದರ ಮೇಲೇ ಕುಳಿತಿದ್ದ – ಭಿಕ್ಷೆ ಬೇಡುತ್ತ. ಅವನೇನಾದರೂ ಕೆಳಗೆ ಅಗೆದಿದ್ದರೆ, ಅವನು ಆಗರ್ಭ ಶ್ರೀಮಂತನಾಗುತ್ತಿದ್ದ. ಆದರೆ, ಅಲ್ಲೆ ಕುಳಿತು ಭಿಕ್ಷೆ ಬೇಡುತ್ತಿದ್ದ.
ಕುಂಡಲಿನಿಯ ರೀತಿಯು ಇದೇ ಆಗಿದೆ – ಅದು ಅಲ್ಲಿಯೇ ಸುಪ್ತವಾಗಿದೆ. ಪ್ರತಿಯೊಬ್ಬರೂ ಒಂದು ನಿಧಿಯ ಮೇಲೆ ಕುಳಿತು, ಬೇರೆಲ್ಲ ದಿಕ್ಕಿಗಳಲ್ಲಿಯೂ ನೋಡುತ್ತಿರುವರು. ನಿಧಿ ಎಲ್ಲಿದೆಯೋ, ಅಲ್ಲಿ ನೋಡುತ್ತಿಲ್ಲ – ಹಾಗಾಗಿ, ಅವರಿಗೆ ಈ ನಿಧಿಯ ಅರಿವೇ ಇರುವುದಿಲ್ಲ. ನಿಮ್ಮೊಳಗೆ ಇನ್ನೂ ಉಪಯೋಗಿಸದ, ಬಳಕೆ ಮಾಡಿರದ ಒಂದು ನಿಧಿಯೇ, ಕುಂಡಲಿನಿ. ನಿಮ್ಮನ್ನು ನೀವು ಒಟ್ಟಾರೆಯಾಗಿ ಒಂದು ಸಂಪೂರ್ಣ ವಿಭಿನ್ನ ಆಯಾಮದಲ್ಲಿ ರೂಪಾಂತರಗೊಳಿಸಿಕೊಳ್ಳಲು ಈ ಶಕ್ತಿಯನ್ನು ಬಳಸಬಹುದು – ನೀವು ಊಹಿಸಲಸಾಧ್ಯವಾದ ಒಂದು ಆಯಾಮ.
ಕುಂಡಲಿನಿ: ಪರಮ ಮೂಲಕ್ಕೆ ಪ್ಲಗ್ ಮಾಡಿ
ಕುಂಡಲಿನಿಯ ಬಗ್ಗೆ ಅನೇಕ ಕಥೆಗಳು ಇರುವುದರಿಂದ, ನಿಮ್ಮ ಸ್ವಂತ ಜೀವನದಿಂದ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ನಿಮ್ಮ ಮನೆಯ ಗೋಡೆಯಲ್ಲಿ ಒಂದು ಪ್ಲಗ್-ಪಾಯಿಂಟ್ (plug-point) ಇದೆ. ಈ ಪ್ಲಗ್-ಪಾಯಿಂಟ್ ತಾನಾಗಿಯೇ ಯಾವುದೇ ಶಕ್ತಿಯನ್ನು ಉತ್ಪಾದಿಸುವುದಿಲ್ಲ. ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ವಿದ್ಯುತ್ ಸ್ಥಾವರವು ಬೇರೆಡೆಯೇ ಇದೆ, ಆದರೆ ಅದಕ್ಕೆ ವಿದ್ಯುತ್ತನ್ನು ನಿಮಗೆ ನೇರವಾಗಿ ನೀಡಲು ಸಾಧ್ಯವಿಲ್ಲ. ನಿಮಗೆ ವಿದ್ಯುತ್ತನ್ನು ನೀಡುವುದು ಈ ಪ್ಲಗ್-ಪಾಯಿಂಟ್. ಹೆಚ್ಚಿನ ಜನರು ವಿದ್ಯುತ್ ಸ್ಥಾವರದ ಬಗ್ಗೆ ಯೋಚಿಸದೆ ಇದ್ದರೂ, ಅದು ಏನು ಎಂಬುದರ ಬಗ್ಗೆ ಯಾವುದೇ ಪರಿಕಲ್ಪನೆಯನ್ನು ಹೊಂದಿಲ್ಲದ್ದಿದ್ದರೂ, ಪ್ಲಗ್-ಪಾಯಿಂಟ್-ನಲ್ಲಿ ಅವರು ಉಪಕರಣವನ್ನು ಪ್ಲಗ್ ಮಾಡಿದರೆ, ಉಪಕರಣವು ಕೆಲಸ ಮಾಡುತ್ತದೆಯೆಂದು ಅವರು ತಿಳಿದಿರುತ್ತಾರೆ.
ಅಂತೆಯೇ, ಮಾನವ ದೇಹದಲ್ಲೂ ಈ ರೀತಿಯ “ಪ್ಲಗ್-ಪಾಯಿಂಟ್" ಇದೆ. ಇದು 3-ಪಿನ್ ಪ್ಲಗ್-ಪಾಯಿಂಟ್ ಅಲ್ಲ, ಇದು 5-ಪಿನ್ ಪ್ಲಗ್-ಪಾಯಿಂಟ್. ನೀವು ಏಳು ಚಕ್ರಗಳ ಬಗ್ಗೆ ಕೇಳಿರಬಹುದು. ಮೂಲಾಧಾರ ಚಕ್ರವು ಪ್ಲಗ್-ಪಾಯಿಂಟ್ ಇದ್ದ ಹಾಗೆ. ಅದಕ್ಕಾಗಿಯೇ ಇದನ್ನು ಮೂಲಾಧಾರ ಎಂದು ಕರೆಯಲಾಗಿದೆ. ಉಳಿದ ಆರು ಚಕ್ರಗಳಲ್ಲಿ ಐದು ಚಕ್ರಗಳು ಕೂಡ ಪ್ಲಗ್-ಗಳು. ಹಾಗಾದರೆ, ಸಹಸ್ರಾರ ಎಂದು ಕರೆಯಲ್ಪಡುವ ಚಕ್ರ ಯಾವುದು? ಅದು ಒಂದು ಲೈಟ್-ಬಲ್ಬ್. ಅದನ್ನು ನೀವು ಪ್ಲಗ್ ಮಾಡಿದರೆ, ನೀವು ಪ್ರಜ್ವಲಿಸುವಿರಿ. ನೀವು ಇದನ್ನು ಸರಿಯಾಗಿ ಪ್ಲಗ್ ಮಾಡಿದ್ದರೆ, ದಿನದ ೨೪ ಗಂಟೆಗಳ ಕಾಲವೂ ಪ್ರಜ್ವಲಿಸುವುದು ಕಷ್ಟದ ಕೆಲಸವೇನಲ್ಲ. ಬ್ಯಾಟರಿ ಖಾಲಿಯಾಗಬಹುದೆಂಬ ಚಿಂತೆಯಿರದಿರುವ ಕಾರಣ, ಇದನ್ನು ಆರಿಸುವ ಅಗತ್ಯವಿರುವುದಿಲ್ಲ. ಪರಮ ಮೂಲಕ್ಕೆ ಪ್ಲಗ್ ಆಗಿರುವ ಕಾರಣ, ಪ್ರತ್ಯಕ್ಷವಾಗಿ, ಧೈರ್ಯವಾಗಿ ಇದನ್ನು ಬೆಳಗಿಸುತ್ತಲೇ ಇರಬಹುದು.
ಈಗಲೂ ಸಹ, ನಿಮ್ಮಲ್ಲಿ ಶಕ್ತಿಯಿದೆ. ಬರೆದ್ದಿದ್ದನ್ನು ಓದಬಹುದು ಎಂದರೇ ನಿಮ್ಮ ಪ್ರಾಣಶಕ್ತಿಯು ಕೆಲಸ ನಿರ್ವಹಿಸುತ್ತಿದೆ ಎಂದು ಇದರರ್ಥ– ಆದರೆ, ಬಹಳ ಕಡಿಮೆ ರೀತಿಯಲ್ಲಿ. ಕೇವಲ ಒಂದು ಸಣ್ಣ ಭಾಗವು ಕಾರ್ಯನಿರ್ವಹಿಸುತ್ತಿದೆ - ನಿಮಗೆ ಅದು ಸಂಪೂರ್ಣವಾಗಿ ಲಭ್ಯವಾದಲ್ಲಿ. ಸರಿಯಾಗಿ ಪ್ಲಗ್ ಮಾಡಿದ್ದರೆ, ನೀವು ಅದರಿಂದ ಏನು ಮಾಡಬಹುದೆಂಬುದಕ್ಕೆ ಮಿತಿಯೇ ಇಲ್ಲ. ಮನೆಯಲ್ಲಿರುವ ಒಂದೇ ಪ್ಲಗ್=ಪಾಯಿಂಟ್-ನೊಂದಿಗೆ, ಒಂದು ಬಾರಿ ಪ್ಲಗ್ ಹಾಕಿದರೆ, ನೀವು ದೀಪವನ್ನು ಹೊತ್ತಿಸಬಹುದು, ಹವಾ-ನಿಯಂತ್ರಣ ಯಂತ್ರವನ್ನು ಓಡಿಸಬಹುದು, TV-ಅನ್ನು ನೋಡಬಹುದು – ನಿಮಗೆ ಬೇಕಾದ್ದನ್ನು ಮಾಡಬಹುದು. ಕೇವಲ ಒಂದು ವಿದ್ಯುತ್ ಪ್ಲಗ್-ಪಾಯಿಂಟ್. ಏನೇನೆಲ್ಲ ಮಾಡಬಹುದು.
ದುರದೃಷ್ಟವಶಾತ್, ಹೆಚ್ಚಿನ ಮನುಷ್ಯರು ತಮ್ಮನ್ನು ತಾವು ಪ್ಲಗ್ ಮಾಡಿಕೊಂಡಿಲ್ಲ. ಅವರು ತಮ್ಮದೇ ಸ್ವಂತ ಶಕ್ತಿಯನ್ನು ಉತ್ಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ, ಅವರು ದಿನಕ್ಕೆ ಐದು ಬಾರಿ ತಿಂದರೂ, ಹೆಚ್ಚಿನ ಸಮಯ ಆಯಾಸಗೊಂಡಿರುತ್ತಾರೆ. ಅವರುಗಳಿಗೆ ಬದುಕಿರುವುದೇ ಒಂದು ಹೋರಾಟ. ಪ್ರಾಣಶಕ್ತಿಯೆಂದರೆ, ಬರೀ ದೈಹಿಕ ಶಕ್ತಿ ಅಥವಾ ಚಟುವಟಿಕೆಗಳಲ್ಲ – ಜೀವಾಳವೇ ಪ್ರಾಣಶಕ್ತಿ. ಅಸ್ತಿತ್ವವೆಂದರೆ, ಶಕ್ತಿ; ಅಲ್ಲವೇ? ಅಸ್ತಿತ್ವದ ಆಧಾರವೇ ಪ್ರಾಣಶಕ್ತಿ. ಆ ಆಧಾರವು ನಿಮಗೆ ತಿಳಿದಿದ್ದರೆ, ಜೀವನದ ಮೂಲತತ್ವ ತಿಳಿದ ಹಾಗೆ. ಶಕ್ತಿಯ ವಿಧಾನಗಳನ್ನು ನೀವು ಅರ್ಥ ಮಾಡಿಕೊಂಡರೆ, ಸೃಷ್ಟಿಯು ಹೇಗೆ ನಡೆಯುತ್ತದೆ ಎನ್ನುವುದನ್ನು ನೀವು ಸಂಪೂರ್ಣವಾಗಿ ತಿಳಿಯುವಿರಿ. ಹಾಗಾಗಿ, ನಿಮ್ಮನ್ನು ನೀವು ಪ್ಲಗ್ ಮಾಡಿಕೊಂಡಿದ್ದರೆ, ಪ್ರಾಣಶಕ್ತಿ ಎಂದರೇನು, ಅದು ಏನನ್ನು ಮಾಡಬಲ್ಲದು ಹಾಗೂ ಅದರ ಮೂಲಕ ನೀವೇನನ್ನು ಮಾಡಬಹುದೆಂದು ನಿಮಗೆ ತಿಳಿದಿರುತ್ತದೆ. ಕೊನೆಯಿಲ್ಲದ ಚೈತನ್ಯದ ಮೂಲಕ್ಕೆ ನಿಮ್ಮನ್ನು ನೀವು ಜೋಡಿಸಿಕೊಂಡಿದ್ದೀರಿ– ಕುಂಡಲಿನಿ ಎಂದರೆ ಇದೇ.
ಕುಂಡಲಿನಿಯೊಂದಿಗೆ ಸೇರ್ಪಡೆ ಹೇಗೆ?
ಯಾವುದಾದರೊಂದು ಯಂತ್ರೋಪಕರಣವನ್ನು ನೀವು ಪ್ಲಗ್ ಮಾಡಬೇಕಾದಲ್ಲಿ, ನಿಮ್ಮ ಕೈಗಳು ನಡುಗುತ್ತಿದೆ ಎನ್ನಿ– ನೀವು ಇಡೀ ಗೋಡೆಯನ್ನು ಜಾಲಾಡಬಹುದು, ನಿಮಗೆ ಪ್ಲಗ್ ಅನ್ನು ಹಾಕಲಾಗುವುದಿಲ್ಲ. ಅದೇ ರೀತಿಯಾಗಿ, 5-ಪಾಯಿಂಟ್ ಪ್ಲಗ್-ಅನ್ನು ಪ್ಲಗ್-ಪಾಯಿಂಟ್-ಗೆ ಹಾಕಲು ಬಹಳಷ್ಟು ಜನರು ಕಷ್ಟ ಪಡುತ್ತಾರೆ, ಏಕೆಂದರೆ ಅವರ ದೇಹ, ಮನಸ್ಸು, ಭಾವನೆಗಳು ಅಥವಾ ಅವರ ಪ್ರಾಣಶಕ್ತಿಯಲ್ಲಿ ಯಾವುದೇ ಸ್ಥಿರತೆ ಇರುವುದಿಲ್ಲ. ಅವಶ್ಯವಾದ ಸ್ಥಿರತೆಯನ್ನು ಪಡೆಯಲು ಯೋಗವು ಒಂದು ಸಾಧನವಾಗಿದೆ. ಒಮ್ಮೆ ನೀವು ಸರಿಯಾಗಿ ಪ್ಲಗ್ ಆದರೆ – ಅಪರಿಮಿತ ಶಕ್ತಿ! ಶಕ್ತಿ ಉತ್ಪಾದನೆಯಾಗುವ ಸ್ಥಳದ ಬಗ್ಗೆ ಅಥವಾ ಶಕ್ತಿಯ ಬಗ್ಗೆ ಕಲಿಯಬೇಕಾಗಿಲ್ಲ.
ಪ್ಲಗ್-ಅನ್ನು ಸರಿಯಾಗಿ ಸೇರಿಸಿ, ಒಂದು ನಿರಂತರವಾದ ಶಕ್ತಿಯ ಮೂಲವನ್ನು ಪಡೆಯವ ವಿಜ್ಞಾನವೇ ಯೋಗ. ಒಮ್ಮೆ ನೀವು ಈ ನಿರಂತರವಾದ ಶಕ್ತಿಯ ಮೂಲಕ್ಕೆ ಸಂಪರ್ಕ ಹೊಂದಿದರೆ, ಸಹಜವಾಗಿ, ನಿಮ್ಮ ಜೀವವು ಹಾತೊರೆಯುತ್ತಿರುವ ಗುರಿಯತ್ತ ಮುನ್ನಡೆಯುವಿರಿ. ನಿಮ್ಮ ಖಯಾಲಿ ವಿಚಾರಗಳು, ಕನಸುಗಳು, ಯೋಚನೆಗಳು, ಭಾವನೆಗಳು ಅಥವಾ ಜಗತ್ತಿನ ತೊಡುಕುಗಳಲ್ಲಿ ನೀವು ಕಳೆದು ಹೋಗುವುದಿಲ್ಲ.
ಜೈವೀಕ ಅಣು
ಮಾನವನು ಒಂದು ಜೈವೀಕ ಅಣು, ಜೀವದ ಒಂದು ಪ್ರತ್ಯೇಕ ಘಟಕ. ಉದಾಹರಣೆಗೆ, ಇಂದು ಮಾನವರು ಅಣು ವಿಜ್ಞಾನವನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದಾರೆ. ಪರಮಾಣುವು ನಿಮಗೆ ಕಾಣಿಸುವುದಿಲ್ಲ, ಆದರೆ ನೀವು ಎರಡು ಪರಮಾಣುಗಳನ್ನು ಢಿಕ್ಕಿ ಹೊಡೆಸಿದರೆ, ಅಸಾಧಾರಣವಾದದ್ದೇನೋ ಸಂಭವಿಸುತ್ತದೆ. ಮಧ್ಯದಲ್ಲಿ ನೀವೇನಾದರೂ ಇದ್ದರೆ, ಭಯಾನಕವಾದದ್ದೇನೋ ಸಂಭವಿಸುತ್ತದೆ. ಅತ್ಯಂತ ಸಣ್ಣದಾದ ಈ ಪರಮಾಣುವಿನೊಳಗೆ ಇಷ್ಟು ಅಗಾಧವಾದ ಶಕ್ತಿ ಇರಬಹುದೆನ್ನುವುದನ್ನು, ಅದನ್ನು ಒಡೆಯವ ತನಕ ಯಾರಿಗೂ ತಿಳಿದಿರಲಿಲ್ಲ. ಅಂತೆಯೇ, ಮನುಷ್ಯನೊಳಗೂ ಕೂಡ ಒಂದು ಅಗಾಧವಾದ ಶಕ್ತಿ ತುಂಬಿದೆ. ಕುಂಡಲಿನಿಯನ್ನು ಜಾಗೃತಿಗೊಳಿಸುವುದು ಅಥವಾ ಕುಂಡಲಿಯು ಏರುತ್ತಿರುವುದರ ಅರ್ಥ - ನೀವು ಆ ಶಕ್ತಿಯನ್ನು ಬಳಸುವ ತಂತ್ರಜ್ಞಾನವನ್ನು ಕಂಡುಕೊಂಡಿದ್ದೀರಿ ಎಂದು.
ಆದಾಗ್ಯೂ, ಅದ್ಭುತ ಶಕ್ತಿ ಹೊಂದಿರುವ ಈ ಆಯಾಮವನ್ನು ಒಂದು ವೇಳೆ ನೀವು ಬಳಸಲು ಮುಂದಾದರೆ, ನೀವು ಸ್ಥಿರವಾದ ನೆಲದ ಮೇಲಿರಬೇಕು. ಇದು ಪರಮಾಣು ಶಕ್ತಿಯನ್ನು ನಿಭಾಯಿಸಲು ಕಲಿಯುವಂತೆ. ಈ ದಿನಗಳಲ್ಲಿ, ಜಪಾನಿಯರ ಪರಿಸ್ಥಿತಿಯ ಕಾರಣದಿಂದ, ಎಲ್ಲರೂ ಪರಮಾಣು ವಿಜ್ಞಾನದ ಬಗ್ಗೆ ಬಹಳಷ್ಟು ಕಲಿಯುತ್ತಿದ್ದಾರೆ! ನೀವು ರಷ್ಯಾದವರ ಅನುಭವವನ್ನು ಮರೆತಿದ್ದರೆ, ಜಪಾನಿಯರು ನಿಮಗೆ ನೆನಪಿಸುತ್ತಿದ್ದಾರೆ. ನೀವು ಈ ಶಕ್ತಿಯನ್ನು ಬಳಸಲು ಮುಂದಾದರೆ, ನೀವು ಅದನ್ನು ತೀವ್ರವಾದ ಎಚ್ಚರಿಕೆಯಿಂದ ಬಳಸಬೇಕು. ನೀವು ಸರಿಯಾದ ರೀತಿಯ ಪರಿಸ್ಥಿಯಲ್ಲಿರದಿದ್ದರೆ, ನೀವು ಸುನಾಮಿ ಅಥವಾ ಭೂಕಂಪದ ಮಾರ್ಗದಲ್ಲಿದ್ದರೆ, ಬಹಳ ತೊಂದರೆಯಾಗಬಹುದು. ಕುಂಡಲಿನಿಯಲ್ಲಿಯೂ ಹೀಗೆ.
"ಕುಂಡಲಿನಿ" ಬಾಂಬ್ ಅನ್ನು ನಿರ್ಮಿಸಬೇಡಿ!
ಸಂಬಂಧ, ಆಹಾರ ಅಥವಾ ಚಟುವಟಿಕೆಯಂತಹ ಅನೇಕ ವಿಷಯಗಳ ಬಗ್ಗೆ ನಿಯಂತ್ರಣವಿಲ್ಲದ ರೀತಿಯಲ್ಲಿ ಹೆಚ್ಚಿನ ಜನರು ಜೀವಿಸುತ್ತಿರುವರು. ಈ ಪರಿಸ್ಥಿತಿಯಲ್ಲಿ ಕುಂಡಲಿನಿಯನ್ನು ಸಕ್ರಿಯಗೊಳಿಸಲು ಪ್ರಯತ್ನಿಸುವುದರ ಅರ್ಥ –ಪುಸ್ತಕದಲ್ಲೋ ಅಥವಾ Internet-ನಲ್ಲೋ ಓದಿ, ನಿಮ್ಮ ಮನೆಯಲ್ಲಿ nuclear reactor-ಅನ್ನು ನಿರ್ಮಿಸಲು ಪ್ರಾರಂಭಿಸಿದ ಹಾಗೆ. ೨೦೦೬ ರವರೆಗೆ, internet-ನಲ್ಲಿ ಪರಮಾಣು ಬಾಂಬ್-ಅನ್ನು ಹೇಗೆ ನಿರ್ಮಿಸುವುದು ಎಂಬುದರ ಬಗ್ಗೆ ಒಂದು ವಿಸ್ತೃತ ಯೋಜನೆ ಲಭ್ಯವಿತ್ತು! ಎಷ್ಟು ಜನರು ಡೌನ್ಲೋಡ್ ಮಾಡಿದ್ದಾರೆಂದು ನಮಗೆ ಗೊತ್ತಿಲ್ಲ. ಅದೃಷ್ಟವೆಂದರೆ, ಅಗತ್ಯವಿರುವ ವಸ್ತುಗಳು ಅವರ ಕೈಯಿಗೆ ಸಿಗುವ ರೀತಿಯಲ್ಲಿಲ್ಲ. ಕುಂಡಲಿನಿಯ ಬಗ್ಗೆಯೂ ಸಹ, ಕುಂಡಲಿನಿಯ ಜಾಗೃತಿಯಿಂದ, ಎಲ್ಲಾ ರೀತಿಯ ಅದ್ಭುತವಾದ ಕೆಲಸಗಳನ್ನು, ಹೇಗೆ ಮಾಡಬಹುದೆಂಬುದರ ಬಗ್ಗೆ ಓದಿರುವ ಹಲವಾರು ಜನರಿದ್ದಾರೆ.
ಆದರೆ, ಬೌದ್ಧಿಕವಾಗಿ ಏನು ಮಾಡಬೇಕೆಂದು ಅವರಿಗೆ ತಿಳಿದಿದ್ದರೂ, ಪ್ರಾಯೋಗಿಕವಾಗಿ ಏನೂ ತಿಳಿದಿಲ್ಲ. ಅದು ಒಳ್ಳೆಯದೇ, ಏಕೆಂದರೆ, ಈ ಶಕ್ತಿಯನ್ನು ಜಾಗೃತಗೊಳಿಸಿ, ಅದನ್ನು ಹಿಡಿದಿರುವ ಸಾಮರ್ಥ್ಯವನ್ನು ಹೊಂದಿಲ್ಲದಿದ್ದರೆ, ಅದು ನಿಮ್ಮ ಸಂಪೂರ್ಣ ವ್ಯವಸ್ಥೆಯನ್ನು ಒಂದೇ ಕ್ಷಣದಲ್ಲಿ ನಾಶಪಡಿಸಬಹುದು. ಕೇವಲ ನಿಮ್ಮನ್ನಲ್ಲ, ನಿಮ್ಮ ಸುತ್ತಲಿನ ಜನರು ಕೂಡ ತುಂಬಾ ಹಾನಿಗೊಳಗಾಗಬಹುದು. ಆದ್ದರಿಂದ ಕುಂಡಲಿನಿಯು ಕೆಟ್ಟ ವಿಷಯವೇ? ಇಲ್ಲ, ಇದು ಅತ್ಯದ್ಭುತವಾದ ವಿಷಯ. ಆದರೆ ಅತ್ಯಂತ ಅತ್ಯದ್ಭುತವಾದ ವಿಷಯವನ್ನು, ಶ್ರದ್ಧೆಯಿಂದ ಹಾಗೂ ಎಚ್ಚರಿಕೆಯಿಂದ ನಡೆಸಬೇಕು.
ಹಾಗಾದರೆ, ಕುಂಡಲಿನಿಯನ್ನು ಬೇರೆ ಇನ್ಯಾವ ರೀತಿಯಲ್ಲಿ ಸಕ್ರಿಯಗೊಳಿಸಬಹುದು?
ಹಾಗಾದರೆ, ಇನ್ನೇನನ್ನಾದರೂ ಮಾಡಬಹುದೆ? ಯೋಗದ ಪ್ರತಿಯೊಂದು ಅಂಶವೂ ಕುಂಡಲಿನಿಯನ್ನು ಸಕ್ರಿಯಗೊಳಿಸುತ್ತದೆ. ವಾಸ್ತವವಾಗಿ, ನೀವೇನನ್ನಾದರೂ ಮಾಡಿ, 10 ನಿಮಿಷಗಳ ಕಾಲ ಜಿಗಿಯಿರಿ, ಅಥವಾ ಫುಟ್ಬಾಲ್ ಆಡಿ, ನಿಮ್ಮ ಕುಂಡಲಿನಿಯನ್ನು ಸ್ವಲ್ಪ ಮಟ್ಟಿಗೆ ಸಕ್ರಿಯಗೊಳ್ಳುತ್ತದೆ. ಆಟದಲ್ಲಿ, ಸಂಪೂರ್ಣವಾಗಿ ತೊಡಗಿಸಿಕೊಂಡಂತಹ ಕ್ಷಣಗಳಲ್ಲಿ, ಜನರು, ಅಸಾಧಾರಣ ಶಕ್ತಿಯ ಅರಿವನ್ನು ತೋರ್ಪಡಿಸುತ್ತಾರೆ– ಸಾಮಾನ್ಯವಾದ ಸಂದರ್ಭಗಳಲ್ಲಿ ಅವರಿಂದ ಇದು ಸಾಧ್ಯವಾಗುವುದಿಲ್ಲ. ತೀವ್ರ ಚಟುವಟಿಕೆಯ ಸಮಯದಲ್ಲಿ, ಕುಂಡಲಿನಿಯು ಸಕ್ರಿಯಗೊಳ್ಳುತ್ತದೆ. ಆದರೆ ಪ್ರಜ್ಞಾಪೂರ್ವಕವಾಗಿ ಜಾಗೃತಗೊಳಿಸಿ, ಇದನ್ನು ಬಳಸಿಕೊಳ್ಳುವುದು, ಬೇರೆಯ ವಿಷಯವೇ. ಅದನ್ನು ಸಂಪೂರ್ಣವಾದ ನಿಯಂತ್ರಣ ಹಾಗೂ ಮಾರ್ಗದರ್ಶನದಡಿಯಲ್ಲಿ ಮಾಡಬೇಕು.
ಸಂಪಾದಕರ ಟಿಪ್ಪಣಿ: "Mystic’s Musings" ತಂತ್ರ, ಚಕ್ರ ಮತ್ತು ಕುಂಡಲಿನಿಯ ಕುರಿತಾದ ಸದ್ಗುರು ಅವರ ಹೆಚ್ಚಿನ ಒಳನೋಟಗಳನ್ನು ಒಳಗೊಂಡಿದೆ. ಉಚಿತ ನಮೂನೆಯನ್ನು ಓದಿ (pdf ಪ್ರತಿ) ಅಥವಾ E-book ಖರೀದಿಸಿ.