ಸಾವು - ಜೀವನಕ್ಕೆ ಪೂರಕವಾಗುವಂತೆ ಬದುಕಿ
ನೀವು ನಿಮ್ಮ ನಶ್ವರತೆಯನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿದ್ದರೆ, ಈ ಪ್ರಪಂಚದಲ್ಲಿ ನಿಮ್ಮ ಜೀವನವನ್ನು ಸೌಮ್ಯವಾಗಿ ಹಾಗೂ ವಿವೇಚನೆಯಿಂದ ನಡೆಸುವಿರಿ ಎಂದು ಸದ್ಗುರುಗಳು ವಿವರಿಸುತ್ತಾರೆ.
ಸದ್ಗುರು: ಪ್ರತಿಯೊಬ್ಬ ಮನುಷ್ಯರೂ ಮಾಡಬೇಕಾದ ಒಂದು ಮಹತ್ವದ ವಿಷಯವೆಂದರೆ, ತಮಗಾಗಿ ಒಂದು ಮಾನಸಿಕ ಮತ್ತು ಭಾವನಾತ್ಮಕ ಚೌಕಟ್ಟನ್ನು, ತಮ್ಮ ಜೀವನದ ಅತ್ಯಂತ ಮೂಲಭೂತವಾದ ಸತ್ಯವಾದ ‘ನಶ್ವರತೆಯ’ ಸುತ್ತಲೂ ರಚಿಸುವುದು. ನೀವು ಹೀಗೆ ಮಾಡಿದಾಗ, ಸ್ವಾಭಾವಿಕವಾಗಿಯೇ ಪ್ರಾಪಂಚಿಕತೆಯನ್ನು ಮೀರಿದ ಆಯಾಮವಾದ ಆಧ್ಯಾತ್ಮಿಕ ಪ್ರಕ್ರಿಯೆಗೆ ಅರ್ಹರಾಗುತ್ತೀರಿ. ನಿಮ್ಮ ತಾರ್ಕಿಕ ಮನಸ್ಸಿನ ಸ್ವರೂಪವು, ನಶ್ವರತೆಯನ್ನು ನಿಮ್ಮ ಚಿಂತನೆಯ ವ್ಯಾಪ್ತಿಯಿಂದ ಸಂಪೂರ್ಣವಾಗಿ ತೆಗೆದುಹಾಕಲು ಬಯಸುತ್ತದೆ. ಆ ಕಾರಣದಿಂದಾಗಿಯೇ, ಹೆಚ್ಚಿನ ಜನರು ತಮ್ಮ ಮಾನಸಿಕ ಪ್ರಕ್ರಿಯೆಯಲ್ಲಿ ’ತಾವು ಅಮರರು” ಎಂಬ ಅಸಂಬದ್ಧ ಕಲ್ಪನೆಯಲ್ಲಿರುತ್ತಾರೆ - ಅವರೇನೋ ಇಲ್ಲಿಯೇ ಶಾಶ್ವತವಾಗಿ ನೆಲೆಸುವವರಂತೆ! ಪ್ರತಿದಿನವೂ, ತಮ್ಮ ಜೀವನ ಒಂದು ನಿರ್ದಿಷ್ಟ ಸಮಯಕ್ಕಷ್ಟೇ ಸೀಮಿತ ಹಾಗೂ ಎಲ್ಲರೂ ತಮ್ಮ ಹಿಂದಿನ ಪೀಳಿಗೆಯಿಂದ ಮುಂದಿನ ಪೀಳಿಗೆಗೆ ವಿಷಯಗಳನ್ನು ಸಾಗಿಸುವ ಸೇತುವೆಯಷ್ಟೇ ಎಂಬುದನ್ನು ಮರೆತಿದ್ದಾರೆ. ಇದೀಗ, ಜನರು ತಮ್ಮ ನಶ್ವರತೆಯನ್ನು ಅರ್ಥಮಾಡಿಕೊಳ್ಳಲು ಜೀವಿತಾವಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ; ಅವರಿಗೆ ಅದನ್ನು ನೆನಪಿಸಲು ಹೃದಯಾಘಾತ ಅಥವಾ ದೇಹದಲ್ಲಿ ಮಾರಣಾಂತಿಕ ಖಾಯಿಲೆಯು ಅವಶ್ಯಕವಾಗಿದೆ.
ನಿಮ್ಮ ಜೀವನದ ಪ್ರತಿ ಕ್ಷಣವನ್ನು ನೀವು ಆಚರಿಸಬೇಕು ಮತ್ತು ಆನಂದಿಸಬೇಕು ಏಕೆಂದರೆ ಜೀವನದ ಒಂದು ಕ್ಷಣವೂ ನಿಮಗಾಗಿ ಕಾಯುವುದಿಲ್ಲ. ಆದ್ದರಿಂದ ನೀವು ಇದನ್ನು ಸಂತೋಷದಾಯಕ ಮತ್ತು ಅದ್ಭುತ ಪ್ರಕ್ರಿಯೆಯನ್ನಾಗಿ ಮಾಡುವುದು ಬಹಳ ಮುಖ್ಯ. ನೀವು ಅಮರರಾಗಿದ್ದರೆ, ಪ್ರತಿ ನೂರು ವರ್ಷವನ್ನು - ನಿಮ್ಮ ಖಿನ್ನತೆಗಾಗಿ, ಆತಂಕಕ್ಕಾಗಿ, ಹುಚ್ಚಾಟಕ್ಕಾಗಿ ಮತ್ತು ದುಃಖಕ್ಕಾಗಿ ಮೀಸಲಿಟ್ಟು, ಅದರ ನಂತರ ನಿಮ್ಮ 500 ನೇ ವಾರ್ಷಿಕೋತ್ಸವದಂದು ನೀವು ಸಂತೋಷವಾಗಿರಹುದಾಗಿತ್ತು. ಆದರೆ ಜೀವನ ಹಾಗಿಲ್ಲ. ನಿಮ್ಮ ಜೀವನ ನಶ್ವರ ಮತ್ತು ಪ್ರತಿ ಕ್ಷಣವೂ ಓಡುತ್ತಿದೆ.
ನೀವು ಶಾಶ್ವತವಾಗಿ ಇಲ್ಲಿರುತ್ತೀರಿ ಎಂದು ನೀವು ಭಾವಿಸಿದರೆ, ನಿಮ್ಮದೇ ಸ್ವಂತ ಮಾನಸಿಕ ಅಸಂಬದ್ಧತೆಗೆ ಸಿಲುಕಿಕೊಂಡು ಜೀವನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತೀರಿ, ಆದರೆ ಅದು ವಾಸ್ತವದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ಅದೇ, ಮುಂದಿನ ಒಂದು ಗಂಟೆಯಲ್ಲಿ ನೀವು ಸಾಯುವಿರಿ ಎಂದು ನಿಮಗೆ ತಿಳಿದಿತ್ತು ಎಂದು ಭಾವಿಸೋಣ, ನೀವು ಜೀವನದ ಪ್ರತಿಯೊಂದು ಸಣ್ಣ ಭಾಗವನ್ನೂ ಗಮನಿಸುತ್ತೀರಿ, ನೀವು ಏನನ್ನೂ ಕಳೆದುಕೊಳ್ಳಲು ಬಯಸುವುದಿಲ್ಲ.
ಇದೊಂದು ದಿಗಿಲು ಹುಟ್ಟಿಸುವ ಸಂದೇಶವಲ್ಲ, ಇದು ಜೀವನಕ್ಕೆ ಪೂರಕವಾದ ಸಂದೇಶವಾಗಿದೆ. ಜೀವನವು ಬಹಳ ಸೀಮಿತ ಸಮಯ ಎಂಬುದನ್ನು ನೀವು ತಿಳಿದುಕೊಂಡರೆ ಮಾತ್ರ, ನಿಜವಾಗಿಯೂ ಜೀವನ-ಪೂರಕರಾಗುತ್ತೀರಿ. ಅಹಿತಕರ ಮತ್ತು ಖಿನ್ನತೆಗೆ ಒಳಗಾಗುವವರು ಸಾವಿಗೆ ಪೂರಕರಾಗಿರುತಾರಷ್ಟೇ, ಅಲ್ಲವೇ? ನೀವು ಅಮರರು ಎಂಬ ತಪ್ಪು ಭಾವನೆ ಇರುವುದರಿಂದ ಮಾತ್ರ ಈ ಎಲ್ಲ ವಿಷಯಗಳಿಗೆ ನಿಮಗೆ ಸಮಯ ಮತ್ತು ಅವಕಾಶ ಮಾಡಿಕೊಡಬಹುದು.
ಹತಾಶೆಗೆ, ಖಿನ್ನತೆಗೆ, ಆತಂಕಕ್ಕೆ ಅಥವಾ ಕೋಪಕ್ಕೆ ಇಲ್ಲಿ ಸಮಯವಿಲ್ಲ. ಈ ಜೀವನದಲ್ಲಿ ಯಾವುದೇ ರೀತಿ ಅಹಿತ ವಿಷಯಗಳಿಗೆ ಸಮಯವಿಲ್ಲ. ನೀವು ಶಾಶ್ವತವಾಗಿ ಇಲ್ಲಿರುತ್ತೀರಿ ಎಂದು ನೀವು ಭಾವಿಸಿದರಷ್ಟೇ, ನಿಮ್ಮದೇ ಸ್ವಂತ ಮಾನಸಿಕ ಅಸಂಬದ್ಧತೆಗೆ ಸಿಲುಕಿರುವ ರೀತಿ ಜೀವನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತೀರಿ, ಅದು ವಾಸ್ತವದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ಅದೇ, ಮುಂದಿನ ಒಂದು ಗಂಟೆಯಲ್ಲಿ ನೀವು ಸಾಯುವಿರಿ ಎಂದು ನಿಮಗೆ ತಿಳಿದಿತ್ತು ಎಂದು ಭಾವಿಸೋಣ, ನೀವು ಜೀವನದ ಪ್ರತಿಯೊಂದು ಸಣ್ಣ ಭಾಗವನ್ನೂ ಗಮನಿಸುತ್ತೀರಿ, ನೀವು ಏನನ್ನೂ ಕಳೆದುಕೊಳ್ಳಲು ಬಯಸುವುದಿಲ್ಲ.
ನೀವು ನಶ್ವರರು ಎಂಬುದನ್ನು ತಿಳಿದುಕೊಂಡರಷ್ಟೇ ಈ ಜೀವನವನ್ನು ಸುಖ-ಸಂತೋಷದಿಂದ ನಡೆಸಬಹುದು. ಇದು ನಿಮ್ಮ ನೆನಪಿನಲ್ಲಿ ನಿರಂತರವಾಗಿ ನೆಲೆಸಿದರೆ, ಇಡೀ ಜೀವನ ಪ್ರಕ್ರಿಯೆಯು ಮಾನಸಿಕ ಅಸಂಬದ್ಧತೆ ಮತ್ತು ಭೌತಿಕ ಮಿತಿಯಿಂದ ದೂರವಿರುತ್ತದೆ ಮತ್ತು ಎಲ್ಲ ಅಂಶಗಳನ್ನೂ ಅನುಭವಿಸಲು ಬಯಸುತ್ತದೆ. ಇದು ಒಂದು ರೀತಿಯ ಹೆಚ್ಚಿದ ಜಾಗೃತಿಯ ಮಟ್ಟವಾಗುತ್ತದೆ. ನಿಮ್ಮ ಜೀವನವು ಸ್ವಾಭಾವಿಕವಾಗಿಯೇ ಅಮಿತವಾದುದನ್ನು ಹುಡುಕಲು ಪ್ರಾರಂಬಿಸುತ್ತದೆ. ಆಧ್ಯಾತ್ಮಿಕ ಪ್ರಕ್ರಿಯೆಯು ನಿಮಗೆ ಬೆಳವಣಿಗೆಯ ಸಹಜ ಪ್ರಕ್ರಿಯೆಯಾಗಿ ಪರಿಣಮಿಸುತ್ತದೆ – ಬಲವಂತದ ಹೇರಕೆಯೆನಿಸುವುದಿಲ್ಲ.
Editor’s Note: Download the video “Unraveling Death”, in which Sadhguru explores the intricacies behind death and dying, from the time of entering the womb to exiting the body.