ಸದ್ಗುರು: ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಹೇಳಲಾಗುತ್ತದೆ. ಇದರರ್ಥ ನಾವಿನ್ನೂ ಮಾಡಬೇಕಾಗಿರುವ ಅನೇಕಾನೇಕ ವಿಷಯಗಳಿವೆ ಎಂದು. ನನ್ನ ಪ್ರಕಾರ, ಈ ದೇಶದಲ್ಲಿ ನಿರುದ್ಯೋಗದ ಬಗ್ಗೆ ಯಾರೊಬ್ಬರೂ ಸಹ ಮಾತನಾಡಬಾರದು, ಏಕೆಂದರೆ ಇಲ್ಲಿ ಲಕ್ಷಾನುಗಟ್ಟಲೆ ಕೆಲಸಗಳನ್ನು ಮಾಡಬೇಕಾಗಿದೆ. ದುರದೃಷ್ಟವಶಾತ್, ಅಗತ್ಯವಾದ ಕೆಲಸವನ್ನು ಮಾಡದೆ ಗರಿಷ್ಠ ವೇತನ ಪಡೆಯಬಹುದಾದ ಕೆಲಸಗಳನ್ನೇ ಇಂದು ಅನೇಕರು ಬಯಸುತ್ತಾರೆ.

ಇಲ್ಲದಿದ್ದರೆ, ಏನನ್ನಾದರೂ ಮಾಡಲು ನಿಮಲ್ಲಿ ಬುದ್ಧಿ ಮತ್ತು ಧೈರ್ಯವಿದ್ದರೆ, ಜಗತ್ತನಲ್ಲಿ, ಅದರಲ್ಲೂ ವಿಶೇಷವಾಗಿ ಭಾರತದಂತಹ ದೇಶದಲ್ಲಿ, ಮಾಡಲು ಬಹಳಷ್ಟು ಕೆಲಸಗಳಿವೆ. ನೀವು ಉದ್ಯಮಶೀಲರಾಗಿದ್ದರೆ, ಜಗತ್ತಿಗೆ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ.

ಜಗತ್ತು ನಿಮ್ಮ ದಾರಿಯಲ್ಲಿ ಅನೇಕ ಅಡೆತಡೆಗಳನ್ನು ತಂದೊಡ್ಡಬಹುದು. ಒಂದೋ ನೀವು ಅವುಗಳನ್ನು ಅಡೆತಡೆಗಳನ್ನಾಗಿ ನೋಡಬಹುದು ಅಥವಾ ಸಾಧ್ಯತೆಗಳನ್ನಾಗಿ ಪರಿಗಣಿಸಬಹುದು. ಸಮಸ್ಯೆಯಿರುವ ಕಡೆ ನೀವು ಪರಿಹಾರಕ್ಕಾಗಿ ಹುಡುಕಿದರೆ, ಅಲ್ಲೊಂದು ದೊಡ್ಡದಾದ ಸಾಧ್ಯತೆಯಿರುತ್ತದೆ. ಮತ್ತು ನಮ್ಮ ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.

ರೈತರ ಸ್ಥಿತಿ ಗತಿಯನ್ನು ಸುಧಾರಿಸುವುದು

ನಾವು ಆರ್ಥಿಕತೆಯ ಬಗ್ಗೆ ಯೋಚಿಸುವಾಗ, ಶೇರು ಮಾರುಕಟ್ಟೆ ಅಥವಾ ಮುಂಬಯಿಯಂತಹ ಆರ್ಥಿಕ ಕೇಂದ್ರಗಳ ಬಗ್ಗೆ ಯೋಚಿಸುತ್ತೇವೆ. ಆದರೆ, ಭಾರತದ 65% ರಷ್ಟು ಜನಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಬದುಕುತ್ತಿದ್ದಾರೆ. ಇದರಲ್ಲಿ ಬಹಳಷ್ಟು ಜನ ಕಳೆದ ಎಂಟು-ಹತ್ತು ತಲೆಮಾರುಗಳಿಂದ ತುಂಬ ಶೋಚನೀಯವಾದ ಪರಿಸ್ಥಿತಿಗಳನ್ನು ಅನುಭವಿಸುತ್ತಿದ್ದಾರೆ. ನೀವು ಯಾವುದಾದರೊಂದು ಹಳ್ಳಿಗೆ ಹೋಗಿ ನೋಡಿದರೆ, ಅಲ್ಲಿನ ಹೆಚ್ಚಿನ ಗಂಡಸರಿಗೆ ಅವರ ಅಸ್ಥಿಪಂಜರದ ವ್ಯವಸ್ಥೆಯೇ ಸಂಪೂರ್ಣ ಗಾತ್ರಕ್ಕೆ ಬೆಳೆದಿರುವುದಿಲ್ಲ. ಮಹಿಳೆಯರು ಇನ್ನೂ ಹೆಚ್ಚಿನ ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ.

ನಮ್ಮ ರೈತರನ್ನು ಬಡತನ ಹಾಗೂ ಸಾವಿನತ್ತ ತಳ್ಳುತ್ತಿರುವ ಎರಡು ಪ್ರಮುಖ ಸಮಸ್ಯೆಗಳಿವೆ: ನೀರಾವರಿಯಲ್ಲಿನ ಹೂಡಿಕೆ ಮತ್ತು ಮಾರುಕಟ್ಟೆಯಲ್ಲಿ ಬೆಳೆಗಳ ಬೆಲೆಯನ್ನು ತೀರ್ಮಾನಿಸುವ ಹಾಗೂ ವ್ಯವಹರಿಸುವ ಶಕ್ತಿಯ ಕೊರತೆ.

ನಮ್ಮ ರೈತರನ್ನು ಬಡತನ ಹಾಗೂ ಸಾವಿನತ್ತ ತಳ್ಳುತ್ತಿರುವ ಎರಡು ಪ್ರಮುಖ ಸಮಸ್ಯೆಗಳಿವೆ: ನೀರಾವರಿಯಲ್ಲಿನ ಹೂಡಿಕೆ ಮತ್ತು ಮಾರುಕಟ್ಟೆಯಲ್ಲಿ ಬೆಳೆಗಳ ಬೆಲೆಯನ್ನು ತೀರ್ಮಾನಿಸುವ ಹಾಗೂ ವ್ಯವಹರಿಸುವ ಶಕ್ತಿಯ ಕೊರತೆ. ಈಗ ವ್ಯವಸಾಯವನ್ನು ಹೇಗೆ ಮಾಡಲಾಗುತ್ತಿದೆ ಎಂದರೆ, ಪ್ರತಿಯೊಬ್ಬ ರೈತನೂ ತನ್ನದೇ ಆದ ಪಂಪ್ ಸೆಟ್, ತನ್ನದೇ ಆದ ಕೊಳವೆ ಬಾವಿ ಮತ್ತು ವಿದ್ಯುತ್ ಸಂಪರ್ಕವನ್ನು ಹೊಂದಿರುತ್ತಾನೆ. ಇದಕ್ಕೆ ಬೇಕಿರುವ ಹಣಕಾಸಿನ ಹೂಡಿಕೆ ಎಷ್ಟಿರುತ್ತದೆಯೆಂದರೆ, ರೈತರು ಸಾಲ ಮಾಡುವುದು ಅನಿವಾರ್ಯವಾಗುತ್ತದೆ. ಇದರಿಂದಾಗಿ ರೈತನು ಒಂದೋ ತನ್ನ ಕೃಷಿಭೂಮಿಯನ್ನು ಮಾರಾಟ ಮಾಡಬೇಕು, ಇಲ್ಲವೇ ತನ್ನ ಊರನ್ನು ಬಿಟ್ಟು ಓಡಿಹೋಗಬೇಕು ಅಥವಾ ಮರಕ್ಕೆ ನೇಣು ಬಿಗಿದುಕೊಳ್ಳಬೇಕು. ಇಷ್ಟೆಲ್ಲಾ ಮಾಡಿದ ಮೇಲೆಯೂ, ಆ ರೈತನು ತನ್ನ ಬೆಳೆಯನ್ನು ಮಾರಾಟ ಮಾಡಬೇಕೆಂದಾಗ, ಅದನ್ನು ಸಾಗಿಸಲು ವಾಹನಗಳಿರುವುದಿಲ್ಲ, ಸಂಗ್ರಹಣಾ ವ್ಯವಸ್ಥೆಯಾಗಲಿ ಅಥವಾ ಪ್ರಮಾಣೀಕೃತ ಮಾರುಕಟ್ಟೆಯಾಗಲಿ ಇರುವುದಿಲ್ಲ. ಬೆಳೆ ಬೆಳೆಯುವುದು ಒಂದು ವಿಷಯವಾದರೆ, ಆ ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ಯುವುದು ರೈತರಿಗೆ ಒಂದು ದೊಡ್ಡ ದೊಂಬರಾಟವಿದ್ದಂತೆ.

 

ಕನಿಷ್ಟ 10,000 ಎಕರೆ ಭೂಮಿಯನ್ನು ಹೊಂದಿರುವ “ರೈತ ಉತ್ಪನ್ನ ಒಕ್ಕೂಟ”ಗಳನ್ನು ರಚಿಸಿ, ಅವುಗಳಡಿಯಲ್ಲಿ ರೈತರನ್ನು ಒಟ್ಟಾಗಿಸುವ ಮೂಲಕ ಈ ಪರಿಸ್ಥಿತಿಯನ್ನು ಬದಲಾಯಿಸುವುದು ಹೇಗೆಂಬುದನ್ನು ನಾವು ನೋಡುತ್ತಿದ್ದೇವೆ. ರೈತರು ತಮ್ಮ ಭೂಮಿಯ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳುವುದನ್ನು ದೃಢಪಡಿಸಿಕೊಳ್ಳಲು ಕಾನೂನುಗಳನ್ನು ರಚಿಸುವತ್ತ ಮತ್ತು ಆ ಕಾನೂನು ಅವರನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವತ್ತ ನಾವು ಕೆಲಸ ಮಾಡುತ್ತಿದ್ದೇವೆ. ರೈತರು ತಮ್ಮ ಭೂಮಿಯಲ್ಲಿ ವೈಯುಕ್ತಿಕವಾಗಿ ವ್ಯವಸಾಯ ಮಾಡಿಕೊಳ್ಳಬಹುದು, ಆದರೆ ಅವರ ಸೂಕ್ಷ-ನೀರಾವರಿ ಮತ್ತು ಬೆಳೆಗಳ ಮಾರಾಟದ ಜವಾಬ್ದಾರಿಯನ್ನು ಅಗತ್ಯ ಸಾಮರ್ಥ್ಯವಿರುವ ಸಂಸ್ಥೆಗಳು ಒಂದಾಗಿ ನೋಡಿಕೊಳ್ಳಬಹುದಾಗಿದೆ. ಆಹಾರವನ್ನು ಬೆಳೆಸುವ ಬಗ್ಗೆಯಲ್ಲದೇ ಬೇರೆ ಯಾವುದರ ಬಗ್ಗೆಯೂ ಚಿಂತೆ ಮಾಡದಿರುವಂತಹ ಈ ರೀತಿಯ ಬೆಂಬಲ ವ್ಯವಸ್ಥೆಯನ್ನು ನಾವು ನಮ್ಮ ರೈತರಿಗಾಗಿ ರಚಿಸಿದ್ದೇ ಆದರೆ, ಭಾರತವು ಪ್ರಪಂಚದ ಆಹಾರ ಕಣಜವಾಗಬಹುದು. ಇದರೊಂದಿಗೆ ನೀವು ಮೌಲ್ಯ-ವರ್ಧಿತ ಉತ್ಪನ್ನಗಳು, ಹಾಲು, ಮೀನುಗಾರಿಕೆ ಮತ್ತು ಕರಕುಶಲತೆಯಿಂದ ಬರುವ ಆದಾಯವನ್ನೂ ಸಹ ಸೇರಿಸಿದರೆ, ಅದು ಗ್ರಾಮೀಣ ಭಾರತದ ಅದ್ಭುತ ಬೆಳವಣಿಗೆಯ ಒಂದು ಕಥೆಯಾಗಬಹುದು.

ಸಾಂಪ್ರದಾಯಿಕ ಔಷಧಗಳ ಪುನಶ್ಚೇತನ

ಔಷಧೀಯ ಸಸ್ಯಗಳನ್ನು ಬೆಳೆಯುವುದು ಕೃಷಿಯಲ್ಲಿನ ಇನ್ನೊಂದು ಲಾಭದಾಯಕ ಉದ್ಯಮವಾಗಿದೆ. ಈಶದಲ್ಲಿ ನಾವು ಸಿದ್ಧ ವೈದ್ಯದ ಔಷಧವನ್ನು ಸಣ್ಣ ಪ್ರಮಾಣದಲ್ಲಾದರೂ, ಬಹಳ ಪರಿಣಾಮಕಾರಿಯಾಗಿ ಬಳಸುತ್ತೇವೆ. ಸಿದ್ಧ ವೈದ್ಯದ ಔಷಧ ಮತ್ತು ಸ್ವಲ್ಪ ಮಟ್ಟಿಗೆ ಆಯುರ್ವೇದದಲ್ಲಿ, ನಾವು ಕಂಡುಕೊಂಡ ಸಮಸ್ಯೆಯೆಂದರೆ, ಔಷಧವನ್ನು ಮಾಡಲು ಬಳಸುವ ಪದಾರ್ಥಗಳು ನಿರ್ದಿಷ್ಟವಾದ ಗುಣಮಟ್ಟವನ್ನು ಹೊಂದಿರಬೇಕು ಮತ್ತು ಇದನ್ನು ನಿಭಾಯಿಸುವುದು ಬಹಳ ಕಷ್ಟ.

 

ನೀವು ಮರದಿಂದ ಏನನ್ನಾದರು ಕಿತ್ತಿದರೆ, ನೀವದನ್ನು ಬೆಳಗ್ಗೆ ಅಥವಾ ಸಂಜೆ ಕಿತ್ತಿರೋ, ಬೇಸಿಗೆ ಅಥವಾ ಚಳಿಗಾಲದಲ್ಲಿ ಕಿತ್ತಿರೋ ಎನ್ನುವುದನ್ನು ಅವಲಂಬಿಸಿ, ಅದರ ಗುಣಮಟ್ಟವು ಬೇರೆ ಬೇರೆಯಾಗಿರುತ್ತದೆ. ಸಿದ್ಧ ವೈದ್ಯದ ಔಷಧವನ್ನು ಅಭ್ಯಾಸ ಮಾಡುವ ಸಿದ್ಧ ವೈದ್ಯರುಗಳಿಗೆ ಈ ವಿಷಯಗಳು ತಿಳಿದಿದ್ದರೂ ಸಹ, ಅದನ್ನು ನಿರ್ವಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.

ನೀವೊಂದು ನಿರ್ದಿಷ್ಟವಾದ ಎಲೆಯನ್ನು ಕಿತ್ತಾಗ ಅದು ಯಾವ ಸ್ಥಿತಿಯಲ್ಲಿರುತ್ತದೆ ಎನ್ನುವುದನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಾಗದ ಕಾರಣ, ಆಯುರ್ವೇದ ಔಷಧಗಳಲ್ಲಿ, ಮತ್ತು ವಿಶೇಷವಾಗಿ ಸಿದ್ಧ ವೈದ್ಯದ ಔಷಧಗಳಲ್ಲಿ, ಔಷಧದ ಉತ್ಪಾದನೆಯಲ್ಲಿ ಒಂದೇ ರೀತಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅಸಾಧ್ಯವಾಗಿದೆ.

ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ನಾವು ಇಪ್ಪತ್ತು ವರ್ಷಗಳಿಂದ ಪ್ರಯೋಗಗಳನ್ನು ನಡೆಸುತ್ತಿದ್ದೇವೆ. ಆದರೆ, ಉತ್ಪಾದನೆಯನ್ನು ಹೆಚ್ಚಿಸಿದರೆ, ಅದರ ಪರಿಣಾಮಕಾರಿತ್ವವು ಕಡಿಮೆಯಾಗುತ್ತದೆ. ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಕಾರಣದಿಂದಲೇ ಆಧುನಿಕ ವೈದ್ಯಕೀಯ ಪದ್ಧತಿ ಅಥವಾ ಅಲೋಪತಿಯು ಬಹಳ ಪರಿಣಾಮಕಾರಿಯಾಗುವುದು, ಏಕೆಂದರೆ ಅವು ಕೇವಲ ರಾಸಾಯನಿಕಗಳಷ್ಟೆ: ನೀವು ಬೇಕಾದ ಪ್ರಮಾಣದಲ್ಲಿ ಮಾತ್ರೆಗಳನ್ನು ತಯಾರಿಸಬಹುದಾಗಿದೆ. ಆದರೆ ಸಿದ್ಧ ವೈದ್ಯದ ಔಷಧದಲ್ಲಿ ಹೀಗಿಲ್ಲ. ಇದು ಬಹಳ ಪ್ರಾಕೃತಿಕವಾಗಿದ್ದು, ಅದರಲ್ಲಿ ಪಂಚಭೂತಗಳ ಅಂಶವೂ ಒಳಗೊಂಡಿರುತ್ತದೆ; ಜನರು ಇದನ್ನು ಬಳಸಲು ತಕ್ಕ ಮಟ್ಟಿನ ಪರಿಣತಿಯನ್ನು ಹೊಂದಿರಬೇಕಾದ ಅಗತ್ಯವಿರುತ್ತದೆ. ಇದಕ್ಕಾಗಿ ಹೆಚ್ಚಿನ ತೊಡಗಿಸಿಕೊಳ್ಳುವಿಕೆ ಹಾಗೂ ಪರಿಶ್ರಮದ ಅಗತ್ಯವಿರುತ್ತದೆ. ಕೇವಲ ಐದು ವರ್ಷದ ವೈದ್ಯಕೀಯ ಪದವಿಯೊಂದಿದ್ದರೆ ಸಾಕಾಗುವುದಿಲ್ಲ. ನೀವು ಈ ವಿಷಯಗಳನ್ನು ಅನುಭವಾತ್ಮಕವಾಗಿ ಅರ್ಥೈಸಿಕೊಳ್ಳಬೇಕು.

ಔಷಧಗಳನ್ನು ತಯಾರಿಸಲು ಬೇಕಾದ ಪದಾರ್ಥಗಳನ್ನು ಸಂಗ್ರಹಿಸುವುದೂ ಸಹ ತುಂಬಾ ಕಷ್ಟವಾಗಿದೆ. ಈಶ ಯೋಗ ಕೇಂದ್ರದಲ್ಲಿ, ನಾವು ಅದ್ಭುತವಾದ ಪರ್ವತದ ತಪ್ಪಲಿನಲ್ಲಿ ವಾಸಿಸುತ್ತಿರುವ ಕಾರಣ, ಕೆಲವು ಪದಾರ್ಥಗಳನ್ನು ಪಡೆದುಕೊಳ್ಳುವ ಸೌಲಭ್ಯ ನಮಗಿದೆ. ಆದರೆ, ಅಮೇರಿಕಾದಲ್ಲಿರುವ ಚಿಕಿತ್ಸಾಲಯಕ್ಕೆ ಈ ಕಚ್ಚಾ ವಸ್ತುಗಳನ್ನು ರವಾನಿಸಲು ನಾವು ಪ್ರಯತ್ನಿಸಿದರೆ, ಅವುಗಳನ್ನು ನಿರ್ಜಲೀಕರಣಗೊಳಿಸಬೇಕು ಅಥವಾ ಸಂರಕ್ಷಿಸಬೇಕು ಅಥವಾ ಅವುಗಳನ್ನು ಶೈತ್ಯೀಕರಣಗೊಳಿಸಬೇಕಾಗುತ್ತದೆ. ಹಾಗೆ ಮಾಡಿದಾಗ, ಅವುಗಳು ತಮ್ಮ ನೈಸರ್ಗಿಕವಾದ ಗುಣಮಟ್ಟ ಹಾಗೂ ಪ್ರಭಾವವನ್ನು ಉಳಿಸಿಕೊಳ್ಳುವುದಿಲ್ಲ

ಆಯುರ್ವೇದ ಮತ್ತು ಸಿದ್ಧ ವೈದ್ಯದ ಔಷಧವನ್ನು ಪರಿಣಾಮಕಾರಿಯಾಗಿ ಮರಳಿತರಲು ಇರುವ ಒಂದೇ ಒಂದ ಮಾರ್ಗವೆಂದರೆ, ಕೃಷಿ ಉದ್ಯಮಶೀಲರು ಔಷಧೀಯ ಸಸ್ಯಗಳನ್ನು ಸರಿಯಾದ ಗುಣಮಟ್ಟ ಹಾಗೂ ಸಾವಯವ ರೀತಿಯಲ್ಲಿ ಬೆಳೆಯುವಂತಹ ಯೋಗ್ಯವಾದ ಸ್ಥಳವನ್ನು ಸ್ಥಾಪಿಸಿ, ಅವುಗಳನ್ನು ಬೆಳೆಸಲು ಸಿದ್ಧರಿರುವುದಾಗಿದೆ.

ಇದನ್ನು ಬಹಳಷ್ಟು ಜನ ಒಪ್ಪಿಕೊಳ್ಳುವುದಿಲ್ಲ, ಆದರೆ ಈ ಮೇಲೆ ಹೇಳಿದ ಕಾರಣಗಳಿಂದಾಗಿ ಯಾವುದೇ ಆಯುರ್ವೇದ ಔಷಧದ ತಯಾರಿಕೆಯಲ್ಲಿ, ಅದು ಯಾವುದೇ ಸಂಸ್ಥೆಯಿಂದಾದರೂ ಆಗಿರಲಿ, ಬ್ಯಾಚ್-ನಿಂದ ಬ್ಯಾಚ್-ಗೆ ಔಷಧಗಳ ಪರಿಣಾಮಕಾರಿತ್ವದಲ್ಲಿ ಅಪಾರವಾದ ವ್ಯತ್ಯಾಸವಿರಬಹುದು. ನೀವೊಂದು ನಿರ್ದಿಷ್ಟವಾದ ಎಲೆಯನ್ನು ಕಿತ್ತಾಗ ಅದು ಯಾವ ಸ್ಥಿತಿಯಲ್ಲಿರುತ್ತದೆ ಎನ್ನುವುದನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಾಗದ ಕಾರಣ, ಆಯುರ್ವೇದ ಔಷಧಗಳಲ್ಲಿ, ಮತ್ತು ವಿಶೇಷವಾಗಿ ಸಿದ್ಧ ವೈದ್ಯದ ಔಷಧಗಳಲ್ಲಿ, ಔಷಧದ ಉತ್ಪಾದನೆಯಲ್ಲಿ ಒಂದೇ ರೀತಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅಸಾಧ್ಯವಾಗಿದೆ. ನೀವು ಅಪಾರವಾದ ಕಾಳಜಿಯನ್ನು ವಹಿಸಿದರೂ ಸಹ, ಒಂದು ಬ್ಯಾಚ್ ಬಹಳ ಅದ್ಭುತವಾಗಿದ್ದು, ಇನ್ನೊಂದು ಬ್ಯಾಚ್ ಸಾಧಾರಣವಾಗಿರುತ್ತದೆ, ಮತ್ತೊಂದು ಇವೆರಡರ ಮಧ್ಯವಿರುತ್ತದೆ. ಇದು ಸಾಂಪ್ರದಾಯಿಕ ಔಷಧಗಳ ಉತ್ಪಾದನೆಯಲ್ಲಿರುವ ಸಮಸ್ಯೆಯಾಗಿದೆ. ಔಷಧಗಳನ್ನು ತಯಾರಿಸುವ ಸ್ಥಳದಲ್ಲೇ ಸಸ್ಯಗಳನ್ನು ಬೆಳೆದು, ಅವು ತಾಜಾ ಇರುವಾಗಲೇ ಔಷಧಗಳನ್ನು ತಯಾರಿಸಿದಾಗ ಮಾತ್ರ ಅವು ಅದ್ಭುತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಭೂಮಿಯು ಅನೇಕ  ಗಿಡಮೂಲಿಕೆಗಳಿಂದ ಸಮೃದ್ಧವಾಗಿದ್ದಾಗ ಮತ್ತು ಎಲ್ಲವೂ ಲಭ್ಯವಿದ್ದಾಗ, ಸಾಂಪ್ರದಾಯಿಕ ಔಷಧಿ ಏಳಿಗೆ ಹೊಂದಿತು. ಆದರೆ ಈಗ, ಇದನ್ನು ಪಡೆಯಲು ಯಾವುದಾದರೊಂದು ಬೆಟ್ಟಕ್ಕೆ ಹೋಗಬೇಕಾಗುತ್ತದೆ. ಹಾಗಾಗಿ ನೀವು ಅದರ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸಿದಾಗ, ಅದು ಒಂದೇ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ.

ಆಯುರ್ವೇದ ಮತ್ತು ಸಿದ್ಧ ವೈದ್ಯದ ಔಷಧವನ್ನು ಪರಿಣಾಮಕಾರಿಯಾಗಿ ಮರಳಿತರಲು ಇರುವ ಒಂದೇ ಒಂದ ಮಾರ್ಗವೆಂದರೆ, ಕೃಷಿ ಉದ್ಯಮಶೀಲರು ಔಷಧೀಯ ಸಸ್ಯಗಳನ್ನು ಸರಿಯಾದ ಗುಣಮಟ್ಟ ಹಾಗೂ ಸಾವಯವ ರೀತಿಯಲ್ಲಿ ಬೆಳೆಯುವಂತಹ ಯೋಗ್ಯವಾದ ಸ್ಥಳವನ್ನು ಸ್ಥಾಪಿಸಿ, ಅವುಗಳನ್ನು ಬೆಳೆಸಲು ಸಿದ್ಧರಿರುವುದಾಗಿದೆ. ಇದು ತುಂಬ ಲಾಭದಾಯಕ ಉದ್ಯಮವಷ್ಟೇ ಆಗಿರದೆ, ಸಾಂಪ್ರದಾಯಿಕ ಔಷಧವನ್ನು ಪರಿಣಾಮಕಾರಿ ಪ್ರಕ್ರಿಯೆಯಾಗಿ ಮರಳಿ ತರುತ್ತದೆ.
 

ನೈಸರ್ಗಿಕ ಬೀಜದ ಶಕ್ತಿ

ಒಂದು ರಾಷ್ಟ್ರವಾಗಿ ನಾವು ಮಾಡಿದ ಅತ್ಯಂತ ಮೂರ್ಖತನದ ಕೆಲಸವೆಂದರೆ, ನೀರಾವರಿ ಮತ್ತು ಮಾರುಕಟ್ಟೆಯ ಚಟುವಟಿಕೆಗಳನ್ನು (ಮಾರ್ಕೆಟಿಂಗ್) ಖಾಸಗೀಕರಣಗೊಳಿಸುವ ಬದಲು ಬೀಜ ಮತ್ತು ರಸಗೊಬ್ಬರವನ್ನು ಖಾಸಗೀಕರಣಗೊಳಿಸಿದ್ದಾಗಿದೆ. ಮತ್ತೀಗ ನಾವು ನಮ್ಮ ಬೀಜವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ನಮ್ಮ ಸ್ವಂತ ಆಹಾರವನ್ನು ಉತ್ಪಾದಿಸುವಂತಹ ಶಕ್ತಿಯನ್ನು ಕಡಿಮೆ ಅಂದಾಜಿಸಬೇಡಿ. ಅದೊಂದು ಅಸಾಧಾರಣವಾದ ಶಕ್ತಿ. ಆದರೆ ನಮ್ಮೆಲ್ಲಾ ಬೀಜ ಹೊರಗಿನಿಂದ ಬರುತ್ತಿರುವ ಕಾರಣ ನಾವು ಆ ಶಕ್ತಿಯನ್ನು ಕಳೆದುಕೊಳ್ಳಬಹುದು.

ನಮ್ಮ ಸ್ವಂತ ಬೀಜಗಳನ್ನು ನಮ್ಮ ಬಳಿಯೇ ಇರಿಸಿಕೊಳ್ಳುವುದು ಒಂದು ಅದ್ಭುತವಾದ ಶಕ್ತಿಯಾಗಿತ್ತು. ಕರ್ನಾಟಕದಲ್ಲಿ ಇದನ್ನು ಬೀಜದೇವರು ಎಂದು ಕರೆಯುತ್ತಿದ್ದರು. ಪ್ರತಿಯೊಂದು ಮನೆಯಲ್ಲಿಯೂ ದಿನಂಪ್ರತಿ ಪೂಜಿಸಲಾಗುತ್ತಿದ್ದ ಒಂದಿಷ್ಟು ಬೀಜದ ಚೀಲಗಳಿರುತ್ತಿದ್ದವು.

ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ, ಹನ್ನೆರಡು ಸಾವಿರ ವರ್ಷಗಳಿಗಿಂತ ಹೆಚ್ಚಿನ ಕೃಷಿ ಇತಿಹಾಸವಿದೆ. ಈ ಹನ್ನೆರಡು ಸಾವಿರ ವರ್ಷಗಳಿಂದ ನಾವು ಒಂದೇ ಭೂಮಿಯಲ್ಲಿ ವ್ಯವಸಾಯ ಮಾಡಿದ್ದೇವೆ, ಅದರಲ್ಲಿ ಕೆಲವನ್ನು ಬಹುಶಃ ಒಂದೇ ಕುಟುಂಬದವರು ಉಳುಮೆ ಮಾಡಿದ್ದಾರೆ, ಮತ್ತು ಕಳೆದ ಸಾವಿರಾರು ವರ್ಷಗಳಿಂದ ನಾವು ಒಂದೇ ಬೀಜವನ್ನು ಬಳಸುತ್ತಿದ್ದೆವು.

ನಮ್ಮ ಸ್ವಂತ ಬೀಜಗಳನ್ನು ನಮ್ಮ ಬಳಿಯೇ ಇರಿಸಿಕೊಳ್ಳುವುದು ಒಂದು ಅದ್ಭುತವಾದ ಶಕ್ತಿಯಾಗಿತ್ತು. ಕರ್ನಾಟಕದಲ್ಲಿ ಇದನ್ನು ಬೀಜದೇವರು ಎಂದು ಕರೆಯುತ್ತಿದ್ದರು. ಪ್ರತಿಯೊಂದು ಮನೆಯಲ್ಲಿಯೂ ದಿನಂಪ್ರತಿ ಪೂಜಿಸಲಾಗುತ್ತಿದ್ದ ಒಂದಿಷ್ಟು ಬೀಜದ ಚೀಲಗಳಿರುತ್ತಿದ್ದವು. ನಾವು ಹಸಿವಿನಿಂದ ಕಂಗೆಟ್ಟಿದ್ದರೂ ಕೂಡ ಈ ಬೀಜವನ್ನು ಬಳಸುತ್ತಿರಲಿಲ್ಲ. ಮಳೆ ಬಂದ ನಂತರ, ಬಿತ್ತನೆಗಾಗಿ ಮಾತ್ರ ಅವುಗಳನ್ನು ಬಳಸಲಾಗುತ್ತಿತ್ತು. ಆದರೆ ನಾವಿದನ್ನು ಕಳೆದ 35-40 ವರ್ಷಗಳಲ್ಲಿ ಕಳೆದುಕೊಂಡಿದ್ದೇವೆ ಮತ್ತು ಇದರಿಂದಾಗಿ ಭವಿಷ್ಯದಲ್ಲಿ ನಾವು ದೊಡ್ಡ ಬೆಲೆಯನ್ನು ತೆರಲಿದ್ದೇವೆ.

ಕೇವಲ ಮೂವತ್ತು ವರ್ಷಗಳ ಹಿಂದೆ ನೀವು ದಕ್ಷಿಣ ಭಾರತದ ಅಂಗಡಿಯೊಂದಕ್ಕೆ ಹೋಗಿ ನೋಡಿದಿದ್ದರೆ, ಹಲವಾರು ರೀತಿಯ ಬೇಳೆ ಕಾಳುಗಳು ಕಂಡುಬರುತ್ತಿದ್ದವು. ಈಗ ಪ್ರತಿಯೊಬ್ಬರೂ ಸಹ ಕೇವಲ ಬಿಳಿ ಅಕ್ಕಿ ಮತ್ತು ಗೋಧಿಯನ್ನು ತಿನ್ನುತ್ತಿದ್ದಾರೆ, ಬೇರಿನ್ನೇನೂ ಉಳಿದಿಲ್ಲ.

Indian Pulses and Cereals | How Intelligent Entrepreneurship Can Transform Rural India

 

ನಮ್ಮ ದೇಶದಲ್ಲಿದ್ದ ಬಹುತೇಕ ಧಾನ್ಯಗಳು ಕಣ್ಮರೆಯಾಗಿವೆ. ಕಳೆದ ಐವತ್ತು ವರ್ಷಗಳಲ್ಲಿ, ಎಂಬತ್ತೇಳು ವಿಧದ ಧಾನ್ಯಗಳು ಮತ್ತು ಕಾಳುಗಳು ಹೆಚ್ಚು ಕಡಿಮೆ ಕಳೆದೇ ಹೋಗಿವೆ ಎಂದು ನನಗೆ ಹೇಳಲಾಗಿದೆ. ಕೇವಲ ಮೂವತ್ತು ವರ್ಷಗಳ ಹಿಂದೆ ನೀವು ದಕ್ಷಿಣ ಭಾರತದ ಅಂಗಡಿಯೊಂದಕ್ಕೆ ಹೋಗಿ ನೋಡಿದಿದ್ದರೆ, ಹಲವಾರು ರೀತಿಯ ಬೇಳೆ ಕಾಳುಗಳು ಕಂಡುಬರುತ್ತಿದ್ದವು. ಈಗ ಪ್ರತಿಯೊಬ್ಬರೂ ಸಹ ಕೇವಲ ಬಿಳಿ ಅಕ್ಕಿ ಮತ್ತು ಗೋಧಿಯನ್ನು ತಿನ್ನುತ್ತಿದ್ದಾರೆ, ಬೇರಿನ್ನೇನೂ ಉಳಿದಿಲ್ಲ.

ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ. ವರ್ಷದ ಬೇರೆ ಬೇರೆ ಸಮಯದಲ್ಲಿ, ನಾವು ವಿವಿಧ ರೀತಿಯ ಧಾನ್ಯಗಳನ್ನು ತಿನ್ನುತ್ತಿದ್ದೆವು; ಇದು ನಮ್ಮನ್ನು ಆರೋಗ್ಯವಾಗಿಡುತ್ತಿತ್ತು. ಇಂದು, ಸಂಶೋಧನೆಯ ಮೇಲೆ ಲಕ್ಷಾಂತರ ಡಾಲರ್‌ಗಳನ್ನು ಖರ್ಚು ಮಾಡಿದ ನಂತರ, ತಿನ್ನಲು ಸರಿಯಾದ ರೀತಿ ಅದೇ ಎಂದು ಹೇಳುತ್ತಿದ್ದಾರೆ. ನಾವು ಸಾವಿರಾರು ವರ್ಷಗಳಿಂದ ತಿನ್ನುತ್ತಿದ್ದ ರೀತಿಯೇ ಹಾಗಿತ್ತು, ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ನಾವಿದನ್ನು ಕಳೆದುಕೊಂಡಿದ್ದೇವೆ.

ದುರದೃಷ್ಟವಶಾತ್, ನಾವು ಭೂಮಿಯನ್ನು ಅತಿಯಾಗಿ ದುರುಪಯೋಗ ಪಡಿಸಿಕೊಂಡಿರುವುದು ಮಾತ್ರವಲ್ಲದೇ, ನೈಸರ್ಗಿಕವಾದ ಬೀಜವನ್ನೂ ಸಹ ದೂರಾಗಿಸಿಕೊಂಡಿದ್ದೇವೆ. ಈ ಬೀಜಗಳು ಭೂಮಿಯಿಂದ ಪೋಷಣೆಯನ್ನು ಮಾತ್ರ ಪಡೆದುಕೊಳ್ಳುತ್ತಿರಲಿಲ್ಲ, ಬದಲಿಗೆ ಭೂಮಿಯನ್ನು ಪೋಷಿಸುತ್ತಿದ್ದವು ಕೂಡ.

ದುರದೃಷ್ಟವಶಾತ್, ನಾವು ಭೂಮಿಯನ್ನು ಅತಿಯಾಗಿ ದುರುಪಯೋಗ ಪಡಿಸಿಕೊಂಡಿರುವುದು ಮಾತ್ರವಲ್ಲದೇ, ನೈಸರ್ಗಿಕವಾದ ಬೀಜವನ್ನೂ ಸಹ ದೂರಾಗಿಸಿಕೊಂಡಿದ್ದೇವೆ. ಈ ಬೀಜಗಳು ಭೂಮಿಯಿಂದ ಪೋಷಣೆಯನ್ನು ಮಾತ್ರ ಪಡೆದುಕೊಳ್ಳುತ್ತಿರಲಿಲ್ಲ, ಬದಲಿಗೆ ಭೂಮಿಯನ್ನು ಪೋಷಿಸುತ್ತಿದ್ದವು ಕೂಡ. ಇದು ದೇಶೀಯ ಬೀಜಗಳಿಗಿರುವ ಮುಖ್ಯವಾದ ಗುಣ. ನೀವು ಎಲ್ಲಿಂದಲೋ ತಂದ ವಿಚಿತ್ರ ತಳಿಗಳನ್ನು ಇಲ್ಲಿ ಬೆಳೆಸಿದರೆ, ಒಂದು ದೊಡ್ಡ ವಿಪತ್ತು ಸಂಭವಿಸುತ್ತದೆ. 

ಕರ್ನಾಟಕದ ಜನರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಸಿಲ್ವರ್‌ ಓಕ್ ಮತ್ತು ನೀಲಗಿರಿ ಮರಗಳು ಭೂಮಿಯಿಂದ ಪೋಷಣೆಯನ್ನು ಮಾತ್ರ ಪಡೆದುಕೊಂಡವೇ ಹೊರತು ಮಣ್ಣನ್ನು ಪೋಷಿಸಲಿಲ್ಲ. ನೀವೊಂದು ನೀಲಗಿರಿ ತೋಟದಲ್ಲಿ ನಡೆದಾಡಿ, ಭೂಮಿ ಹೇಗಿದೆಯೆಂದು ನೋಡಿದರೆ, ಕೀಟಗಳೂ ಸಹ ಅಲ್ಲಿ ನಿಮಗೆ ಕಾಣಸಿಗುವುದಿಲ್ಲ ಏಕೆಂದರೆ ಅವುಗಳು ಅಲ್ಲಿರಲು ಇಷ್ಟಪಡುವುದಿಲ್ಲ. ಕ್ರಿಮಿಕೀಟಗಳಿಗೆ ಆ ಸ್ಥಳವು ಇಷ್ಟವಾಗದಿದ್ದ ಮೇಲೆ, ನಿಮ್ಮ ಕಥೆ ಮುಗಿಯಿತೆಂದೇ ಅರ್ಥ.

ಬೇರೆ ಯಾರಿಗೋ ದೊರೆಯುತ್ತಿರುವ ಅಲ್ಪಾವಧಿಯ ಪ್ರಯೋಜನಗಳ ಕಾರಣದಿಂದಾಗಿ ನಾವಿದೆಲ್ಲವನ್ನೂ ಮಾಡುತ್ತಿದ್ದೇವೆ. ಇಂತಹ ಸಂಗತಿಗಳನ್ನು ಸರಿಯಾಗಿ ನಿಭಾಯಿಸಬೇಕು, ಇಲ್ಲದಿದ್ದರೆ ನಮಗೆ ಮೌಲ್ಯಯುತವಾದುದ್ದೆಲ್ಲವೂ ಕಣ್ಮರೆಯಾಗುತ್ತದೆ.

ನೈಸರ್ಗಿಕ ಬೀಜವನ್ನು ಮರಳಿ ತರುವುದು ಬಹಳ ಮುಖ್ಯ. ಇದು ಹೆಚ್ಚು ಪ್ರಯೋಜನಕಾರಿ ಮತ್ತು ಆರೋಗ್ಯಕರವಾಗಿರುತ್ತದೆ. ಇಂದು ಜಗತ್ತಿನೆಲ್ಲೆಡೆ ಜನರು ಸ್ಥಳೀಯವಾಗಿ ಬೆಳೆದ ಸಾವಯವ ವಸ್ತುಗಳಿಗಾಗಿ ಬೇಡಿಕೆ ಇಡುತ್ತಿರುವ ಕಾರಣ, ಇದನ್ನು ರಫ್ತು ಸಹ ಮಾಡಬಹುದಾಗಿದೆ.

ಕಸದಿಂದ ರಸ

ಕಸವನ್ನು ಬಳಸಿ ಅನೇಕ ಲಾಭದಾಯಕ ಉದ್ಯಮಗಳನ್ನು ಮಾಡಬಹುದು.

ಕಸವನ್ನು ರಸವನ್ನಾಗಿ ಪರಿವರ್ತಿಸುವಲ್ಲಿ ಉದ್ಯಮಶೀಲರು ದೊಡ್ಡ ಪಾತ್ರವನ್ನು ನಿರ್ವಹಿಸಬಹುದು. ಸದ್ಯದಲ್ಲಿ, ನಮ್ಮ ಪಟ್ಟಣಗಳು ಮತ್ತು ನಗರಗಳಿಂದ ಬರುವ ಬಹುತೇಕ ಚರಂಡಿ ನೀರನ್ನು ನದಿಗಳು ಮತ್ತು ಸಮುದ್ರಗಳಿಗೆ ಹರಿಸಲಾಗುತ್ತದೆ. ಇದು ಕೇವಲ ಮಾಲಿನ್ಯದ ಅಪಾಯವನ್ನು ತಂದೊಡ್ಡುವುದಷ್ಟೇ ಅಲ್ಲದೇ ಭಾರಿ ಆರ್ಥಿಕ ನಷ್ಟವನ್ನೂ ಸಹ ಉಂಟುಮಾಡುತ್ತದೆ, ಏಕೆಂದರೆ ಇಂದು ಕಸವನ್ನು ರಸವನ್ನಾಗಿ ಪರಿವರ್ತಿಸಬಲ್ಲ ಅನೇಕ ತಂತ್ರಜ್ಞಾನಗಳಿವೆ. ಸಿಂಗಾಪುರ್ ದೇಶವು ತಮ್ಮ ತ್ಯಾಜ್ಯ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಮೂಲಕ ಇದನ್ನು ತೋರಿಸಿಕೊಟ್ಟಿದೆ. ನಮ್ಮ ದೇಶದಲ್ಲಿ ಅಷ್ಟು ದೊಡ್ಡ ಮಟ್ಟದ ಶುದ್ಧೀಕರಣವನ್ನು ಮಾಡುವ ಅಗತ್ಯವಿಲ್ಲ. ಆದರೆ, ಉದಾಹರಣೆಗೆ, ನಮ್ಮ ನಗರ ಮತ್ತು ಪಟ್ಟಣಗಳಿಂದ ಬರುವ ಕೊಳಚೆ ನೀರಿನಿಂದ ಕೇವಲ 36 ಶತಕೋಟಿ ಲೀಟರ್‌ನಷ್ಟು ಕೊಳಚೆ ನೀರನ್ನು ಬಳಸಿ, 6 ರಿಂದ 9 ದಶಲಕ್ಷ ಹೆಕ್ಟೇರ್‌ನಷ್ಟು ಕೃಷಿ ಭೂಮಿಗೆ ನಾವು ಸೂಕ್ಷ್ಮ-ನೀರಾವರಿಯನ್ನು ಒದಗಿಸಬಹುದಾಗಿದೆ.

ಕಸವನ್ನು ಬಳಸಿ ಅನೇಕ ಲಾಭದಾಯಕ ಉದ್ಯಮಗಳನ್ನು ಮಾಡಬಹುದು. ಉದಾಹರಣೆಗೆ, ಪ್ಲಾಸ್ಟಿಕ್ ಯಾವ ರೀತಿಯಲ್ಲಿ ಕೆಟ್ಟದ್ದು ಎಂಬುದರ ಬಗ್ಗೆ ಜನಗಳು ಮಾತನಾಡುತ್ತಾರೆ. ಆದರೆ ಅದು ಸರಿಯಲ್ಲ, ಏಕೆಂದರೆ ಪ್ಲಾಸ್ಟಿಕ್ ಮರುಸಂಸ್ಕರಿಸಬಹುದಾದ ವಸ್ತುಗಳಲ್ಲಿ ಒಂದು. ನಾವದನ್ನು ಸರಿಯಾಗಿ ಬಳಸಿದ್ದೇ ಆದರೆ, ಅದು ಭವಿಷ್ಯದ ವಸ್ತುವಾಗಿದೆ. ಸಮಸ್ಯೆ ಪ್ಲಾಸ್ಟಿಕ್‌ನದ್ದಲ್ಲ. ಸಮಸ್ಯೆ ಪ್ಲಾಸ್ಟಿಕ್‌ನ ಬೇಜವಾಬ್ದಾರಿಯುತವಾದ ಬಳಕೆಯದ್ದು.

ಅದನ್ನು ಅಲ್ಲಿ ಇಲ್ಲಿ ಎಸೆಯುವ ಬದಲು, ಪ್ಲಾಸ್ಟಿಕ್‌ನ ಮರುಸಂಸ್ಕರಣೆಯನ್ನು ಹೇಗೆ ಮಾಡಬಹುದು ಎನ್ನುವುದರ ಮೇಲೆ ನಾವು ಗಮನಹರಿಸಬೇಕು. ಇದನ್ನೊಂದು ಕೇಂದ್ರೀಕೃತ ಉದ್ಯಮವಾಗಿ ಮಾಡಬೇಕಾಗಿಲ್ಲ, ಬದಲಿಗೆ ಸ್ಥಳೀಯ ಮಟ್ಟದಲ್ಲೇ ಇದನ್ನು ನಡೆಸಬಹುದು ಮತ್ತಿದು ಗ್ರಾಮೀಣ ಜನರಿಗೆ ಒಂದು ಆರ್ಥಿಕ ಅವಕಾಶವನ್ನು ಒದಗಿಸಬಹುದು. ಈ ಕಸವನ್ನು ಸಂಪತ್ತೆಂದು ಅವರು ಮನಗಂಡರೆ, ಎಲ್ಲಿಯೂ ಅವರು ಪ್ಲಾಸ್ಟಿಕ್‌ನ ಒಂದು ಚೂರನ್ನೂ ಬಿಡುವುದಿಲ್ಲ. ಎಲ್ಲಾ ಪ್ಲಾಸ್ಟಿಕ್ ‌ಅನ್ನು ಮರುಸಂಸ್ಕರಣೆಯ ಘಟಕಕ್ಕೆ ಕಳುಹಿಸುವುದರ ಬಗ್ಗೆ ಅವರು ಕಾಳಜಿಯನ್ನು ವಹಿಸುತ್ತಾರೆ.

 

ಗ್ರಾಮೀಣ ಭಾರತದ ಪರಿವರ್ತನೆ

ಭಾರತವಿಂದು ಸಮೃದ್ಧಿಯ ಹೊಸ್ತಿಲಿನಲ್ಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ನಾವು ಸರಿಯಾದ ಕೆಲಸಗಳನ್ನು ಮಾಡಿದ್ದೇ ಆದರೆ, ನಾವು ಈ ಅಗಾಧವಾದ ಜನಸಮೂಹದ ಜೀವನವನ್ನು ಒಂದು ಮಟ್ಟದಿಂದ ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಬಹುದು. ಈ ಪರಿವರ್ತನೆಯನ್ನು ಸಾಧ್ಯವಾಗಿಸಲು ಕಾರ್ಪೊರೇಟ್ ವಲಯವು ಅದರ ಪರಿಣತಿ ಹಾಗೂ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಜವಾಬ್ದಾರಿ ಮತ್ತು ಸವಲತ್ತುಗಳನ್ನು ಹೊಂದಿದೆ. ಇದು ದಾನ ಧರ್ಮದ ವಿಷಯವಲ್ಲ. ಆರ್ಥಿಕವಾಗಿ ಮತ್ತು ಲಕ್ಷಾಂತರ ಮಾನವರಿಗೆ ಘನತೆ ಹಾಗೂ ಸಮೃದ್ಧಿಯ ಜೀವನವನ್ನು ಒದಗಿಸುವ ದೃಷ್ಟಿಯಿಂದ ಇದೊಂದು ಗಣನೀಯ ಪ್ರಮಾಣದ ಆದಾಯವನ್ನು ಒದಗಿಸುವಂತಹ ಹೂಡಿಕೆಯಾಗಿದೆ.