ಮಕ್ಕಳಾಗಿದ್ದಾಗ ಒಂದು ಬಗೆಯ ಆಸೆ. ಕಾಲೇಜಿನಲ್ಲಿದ್ದಾಗ ಬಣ್ಣಬಣ್ಣದ ಆಸೆ. ನಂತರ ಮದುವೆಯಾಗುವ ಆಸೆ. ಮದುವೆಯಾದ ಮೇಲೆ ಮಕ್ಕಳ ಆಸೆ. ಇಷ್ಟೆಲ್ಲ ಆದಮೇಲೆ ಈ ಮದುವೆ ಮತ್ತು ಮಕ್ಕಳಿಂದಲೇ ನನಗೆ ಇಷ್ಟೊಂದು ಆಸೆಗಳು ಎಂಬ ದೂಷಣೆ! 'ಆಸೆಯೇ ದುಃಖಕ್ಕೆ ಮೂಲ’ ಎಂಬುದು ಜನಪ್ರಿಯ ನಂಬಿಕೆ. ಆದರೆ ಅದು ನಿಜಕ್ಕೂ ಸರಿಯೇ? ಮನುಷ್ಯ ಆಸೆಗಳಿಂದ ಮುಕ್ತನಾಗುವುದು ಸಾಧ್ಯವೇ? ’ಆಸೆ’ ಎಂದರೇನು? ಅದರ ಸ್ವರೂಪವೇನು? ಮನುಷ್ಯನಲ್ಲಿ ’ಆಸೆ’ ಎಂಬುದು ಏಕಿದೆ? ನಮ್ಮ ಆಸೆಗಳು ಈಡೇರದಿದ್ದಾಗ ನಮಗೆ ದುಃಖ, ನಿರಾಸೆಗಳಾಗುತ್ತವಲ್ಲ? ಹಾಗಿದ್ದರೆ ಆಸೆ ಪಡುವುದು ತಪ್ಪಾ? ಆಸೆಗಳ ಮಾಯಾಜಾಲವನ್ನು ನಿಭಾಯಿಸುವುದು ಹೇಗೆ? ಆಸೆಯನ್ನೇ ಮೆಟ್ಟಿಲಾಗಿಟ್ಟುಕೊಂಡು ಪರಮಾರ್ಥವನ್ನು ಸಾಧ್ಯವಾಗಿಸಿಕೊಳ್ಳುವುದು ಹೇಗೆ?
Subscribe