ಮಾಂಸಾಹಾರ ಎಂದರೆ ಕೆಲವರಿಗೆ ಬಲು ಇಷ್ಟ. ಕೆಲವರು ಅದನ್ನು ಕಷ್ಟಪಟ್ಟು ತ್ಯಜಿಸಲು ಪ್ರಯತ್ನಿಸುತ್ತಿರುತ್ತಾರೆ. ಅದರಲ್ಲಿ ಯಶಸ್ವಿಯಾಗಿ ಸ್ವಲ್ಪ ದಿನ ತ್ಯಜಿಸುತ್ತಾರೆ ಕೂಡ. ಆದರೆ ಮತ್ತೆ ಆಸೆ ಉಂಟಾಗಿ ಮಾಂಸಾಹಾರವನ್ನು ತಿನ್ನಲು ಪ್ರಾರಂಭಿಸುತ್ತಾರೆ. ಹಾಗಿದ್ದರೆ ಮಾಂಸಾಹಾರ ತಿನ್ನುವುದು ತಪ್ಪೇ? ಅದು ಪಾಪವೇ? ಅದನ್ನು ತ್ಯಜಿಸಬೇಕು ಅಂತಿರುವವರು ತಿಳಿದುಕೊಳ್ಳಬೇಕಿರುವುದು ಏನು? ಇನ್ನು ಕೆಲವರು ಮಾಂಸಾಹಾರ ಅಂತಲ್ಲ, ತಿನ್ನುವಾಗ ಅತಿಯಾಗಿ ತಿನ್ನುತ್ತಾರೆ. ತಿನ್ನುವ ಚಪಲದಿಂದ ಹೊರಬರಲು ಪ್ರಯತ್ನಿಸುತ್ತಿರುತ್ತಾರೆ. ನಾವು ಈ ನಿಟ್ಟಿನಲ್ಲಿ ಯಾವ ರೀತಿ ಯೋಚಿಸಬೇಕು? ಯಾವ ಮನಸ್ಥಿತಿ ಬೆಳೆಸಿಕೊಳ್ಳಬೇಕು? ತಿನ್ನುವ ವಿಷಯದಲ್ಲಿ ವಿವೇಚನೆಯಿಂದಿರುವುದು ಹೇಗೆ? ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು ಈ ವಿಷಯಗಳೆಡೆಗೆ ಬೆಳಾಕು ಚೆಲ್ಲುತ್ತಾರೆ.
Subscribe