ಮಗುವಿಗೆ ಬೇಕಾಗಿರುವುದು ಒಬ್ಬ ಸ್ನೇಹಿತ, ಬಾಸ್ ಅಲ್ಲ ಎಂಬ ವಿಷಯವನ್ನು ಇಲ್ಲಿ ಸದ್ಗುರುಗಳು ವಿವರಿಸುತ್ತಾರೆ. ನಿಮ್ಮ ಉಪದೇಶಗಳನ್ನು ಅವರ ಮೇಲೆ ಬಲವಂತವಾಗಿ ಹೇರಿದರೆ, ಅವರು ಸ್ವಾತಂತ್ರ್ಯದ ಭಾವನೆಯನ್ನು ಕಳೆದುಕೊಳ್ಳುತ್ತಾರೆ, ಮತ್ತು ಇದರಿಂದ ಅವರು ಮುಂದೆ ನಿಮ್ಮ ಮೇಲೆ ತಿರುಗಿ ಬೀಳಬಹುದಾದ ಸಂಭವನೀಯತೆ ಉಂಟಾಗುತ್ತದೆ. ನೀವು ಹಾಗೆ ಮಾಡದಿದ್ದರೆ ಮಕ್ಕಳೇ ನಿಮ್ಮ ಬಳಿ ಪ್ರಶ್ನೆಗಳೊಂದಿಗೆ ಅಥವಾ ಸಹಾಯ ಕೇಳುತ್ತಾ ಬರುತ್ತಾರೆ. ಆಗ ನಿಮಗೆ ಗೊತ್ತಿದ್ದಷ್ಟು, ನಿಮ್ಮಿಂದಾದಷ್ಟು ಉತ್ತರಗಳನ್ನು, ಸಹಾಯವನ್ನು ನೀಡಿ, "ನನಗಿಷ್ಟೇ ಗೊತ್ತು" ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು ಎಂದೆನ್ನುತ್ತಾರೆ. ಹೆತ್ತವರು ಮಕ್ಕಳ ಮುಂದೆ ೧೦೦% ಪ್ರಾಮಾಣಿಕರಾಗಿರುವುದು ಬಹಳ ಮುಖ್ಯ. ಹಾಗೆಯೇ ಅವರನ್ನು ಕೆಟ್ಟ ಪ್ರಭಾವಗಳಿಂದ ರಕ್ಷಿಸಬೇಕು ಅಷ್ಟೆ, ಉಳಿದಂತೆ ಅವರನ್ನು ಸ್ವತಂತ್ರರಾಗಿ ಬಿಡಬೇಕೆಂದು ಹೇಳುತ್ತಾರೆ. ಅದೇ ಸಮಯದಲ್ಲಿ ಅವರು ನಿಮ್ಮ ಪ್ರಭಾವದಿಂದಲೂ ಸ್ವತಂತ್ರರಾಗಿರಬೇಕು ಎಂದು ಸೂಚಿಸುತ್ತಾರೆ. ಅವರೊಂದು ಸ್ವತಂತ್ರ ಜೀವ, ನಿಮ್ಮ ಆಸ್ತಿಯಲ್ಲ!
Subscribe