ನಮ್ಮ ಆಂತರ್ಯದೆಡೆಗೆ ತಿರುಗುವ ಮಹತ್ವವನ್ನು ಸಾರುವ ಈ ವಿಡಿಯೋದಲ್ಲಿ ಸದ್ಗುರುಗಳು ಹಾಸ್ಯಮಯವಾಗಿ ಹೇಗೆ ನಮ್ಮ ಸಾಮರ್ಥ್ಯಗಳೇ ನಮಗೆ ತೊಡಕಾಗಬಾರದು ಎಂದು ತಿಳಿಸುತ್ತಾರೆ. ಅದ್ಭುತವಾದ ನೆನಪಿನ ಶಕ್ತಿ ಮತ್ತು ಕಲ್ಪನಾ ಶಕ್ತಿ ನಮಗೆ ತೊಡಕಾಗಿ ಪರಿಣಾಮಿಸಬಾರದು, ಅದು ನಮ್ಮಿಂದ ಸೂಚನೆ ತೆಗೆದುಕೊಳ್ಳುವಂತಿರಬೇಕು ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತರೆ. ಕಣ್ಣು ಬಿಟ್ಟಾಗಂತೂ ಜಗತ್ತಿನ ಅನೇಕ ವಿಚಾರಗಳನ್ನು ನೋಡುತ್ತೇವೆ. ಆದರೆ ಕಣ್ಣು ಮುಚ್ಚಿದಾಗ ಏನನ್ನು ನೋಡುತ್ತೇವೆ? ಕಣ್ಣು ಮುಚ್ಚಿದಾಗ ನಮಗೆ ಯಾವ ಅನುಭವವಾಗಬೇಕು? ಈ ವಿಷಯಗಳ ಬಗ್ಗೆ ಸದ್ಗುರುಗಳು ಇಲ್ಲಿ ಬೆಳಕು ಚೆಲ್ಲುತ್ತಾರೆ.
Subscribe