#HealthTips #Immunity ಕೊರೊನಾ ಎರಡನೇ ಅಲೆ ಬಂದಿರುವ ಈ ಸಂದರ್ಭದಲ್ಲಿ, ನಮ್ಮ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿಟ್ಟುಕೊಳ್ಳಬೇಕಾದ ಮಹತ್ವ ನಮಗೆಲ್ಲರಿಗೂ ಮನದಟ್ತಾಗುತ್ತಿದೆ. ಮಧ್ಯಂತರ ಉಪವಾಸ ಅಥವಾ Intermittent Fasting ಎನ್ನುವುದು ಯೌಗಿಕ ಸಂಸ್ಕೃತಿಯಲ್ಲಿ ಬಹಳ ಪ್ರಸಿದ್ಧ. ಇದನ್ನು ಅಭ್ಯಸಿಸುವ ಪ್ರಯೋಜನಗಳೇನು ಹಾಗೂ ರೋಗಗಳನ್ನು ದೂರವಿಡುವಲ್ಲಿ ಇದು ಹೇಗೆ ಸಹಕಾರಿ ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ‘ಉಪವಾಸ’ ಎನ್ನುವುದು ನಮ್ಮ ಸಂಸ್ಕೃತಿಯಲ್ಲಿ ಅನೇಕ ವಿಧಗಳಲ್ಲಿ ಹಾಸುಹೊಕ್ಕಾಗಿದೆ. ಆದರೆ ಅದು ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಎಂದು ಅನೇಕರು ಮೂದಲಿಸುತ್ತಿದ್ದರು. ಇತ್ತೀಚಿಗೆ ಕೆಲವು ಪಾಶ್ಚಿಮಾತ್ಯ ಸಂಶೋಧನೆಗಳು ಉಪವಾಸವು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು ಎಂದು ತೋರಿಸಿಕೊಟ್ಟು ಅದಕ್ಕೆ ನೋಬೆಲ್ ಪ್ರಶಸ್ತಿಯೂ ದೊರೆಯಿತು. ಉಪವಾಸವನ್ನು ಮೊದಲು ಮೂದಲಿಸಿದ್ದ ಅನೇಕರು ಈಗ ಅದನ್ನು ಒಪ್ಪಿ ‘ಮಧ್ಯಂತರ ಉಪವಾಸ’ ಎಂಬುದನ್ನು ಪ್ರಾರಂಭಿಸಿದ್ದಾರೆ. ಮಧ್ಯಂತರ ಉಪವಾಸ ಮಾಡುವುದಿದ್ದರೆ ಹೇಗೆ ಮಾಡಬೇಕು? ಎರಡು ಊಟಗಳ ನಡುವೆ ಎಷ್ಟು ಅಂತರವಿರವಿದ್ದರೆ ಚೆನ್ನ? ಮಧ್ಯಂತರ ಉಪವಾಸದಿಂದ ನಮ್ಮ ಆರೋಗ್ಯದ ಸಮಸ್ಯೆಗಳು ದೂರವಾಗಬಹುದೇ? ಇವೆಲ್ಲವಕ್ಕೂ ಉತ್ತರವನ್ನು ಕೇಳಿ, ಸದ್ಗುರುಗಳ ಮಾತುಗಳಲ್ಲಿ!
Subscribe