"ಕೆಲವೊಮ್ಮೆ ನಾನು ಚೆನ್ನಾಗೇ ಕೆಲಸ ಮಾಡುತ್ತಿರುತ್ತೇವೆ. ಏನೆಲ್ಲ ಮಾಡಬೇಕೋ ಅವನ್ನು ಅಚ್ಚುಕಟ್ಟಾಗಿ ಮಾಡುತ್ತಿರುತ್ತೇನೆ. ಅಷ್ಟರಲ್ಲಿ ’ಒಳಗಿಂದ’ ಅದೆಂಥದೋ ಧ್ವನಿಗಳು ಮಾತನಾಡುತ್ತವೆ. ’ನಿನ್ನ ಒಳ್ಳೆಯ ಟೈಮ್ ಮುಗಿಯಿತು’ ಎಂಬಂತಹ ಧ್ವನಿಗಳು. ಅಷ್ಟೇ! ನಾನು ನೆಲಕಚ್ಚಲು ಶುರುಮಾಡುತ್ತೇನೆ. ನನ್ನ ’ಪರ್ಫಾರ್ಮೆನ್ಸ್’ ಕಳೆಗುಂದಲು ತೊಡಗುತ್ತದೆ. ಕಾರಣವೇ ಇಲ್ಲದೇ ಬಲಹೀನನಾಗಲು ಶುರುಮಾಡುತ್ತೇನೆ. ಇವು ಯಾವ ಧ್ವನಿಗಳು? ಇವುಗಳನ್ನು ನಿಭಾಯಿಸುವುದು ಹೇಗೆ? ಇವುಗಳಿಗೆಲ್ಲ ತಲೆಕೆಡಿಸಿಕೊಳ್ಳದೆ ನನ್ನ ಬದುಕನ್ನು ನಾನು ಸುಂದರವಾಗಿ ರೂಪಿಸಿಕೊಳ್ಳುವುದು ಹೇಗೆ?" ಎಂಬುದು ವ್ಯಕ್ತಿಯೊಬ್ಬರ ಪ್ರಶ್ನೆ. ಇದಕ್ಕೆ ಸದ್ಗುರುಗಳ ಅದ್ಭುತ ಉತ್ತರವನ್ನು ಕೇಳಿ.
Subscribe