ನಮ್ಮ ಬದುಕಲ್ಲಿ ಯಾರೋ ಏನೋ ಹೇಳಿದರು ಎಂದೋ, ಇನ್ಯಾರೋ ಏನನ್ನೋ ಹೇಳಲಿಲ್ಲ ಎಂದೋ ಮರುಗುತ್ತಿರುತ್ತೇವೆ. ಯಾರೋ ಏನೋ ಮಾಡಿದರು ಎಂದು, ಇನ್ಯಾರೋ ಏನನ್ನೋ ಮಾಡಲಿಲ್ಲ ಎಂದು ಮರುಗುತ್ತೇವೆ. ನಮ್ಮ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಬೇಸರಿಸುತ್ತೇವೆ, ಗಮನ ತುಂಬಾ ಹೆಚ್ಚಾಯಿತು ಎಂದು ಅಸಹನೆಯನ್ನೂ ತೋಡಿಕೊಳ್ಳುತ್ತೇವೆ. ಯಾರೋ ಸಹಾಯಕ್ಕೆ ಬರಲಿಲ್ಲ ಎಂದೋ, ನಾವಂದುಕೊಂಡ ಹಾಗೆ ನಡೆದುಕೊಳ್ಳಲಿಲ್ಲ ಎಂದೋ ಕುಪಿತರಾಗುತ್ತೇವೆ. ನಂತರ ಕಷ್ಟಪಟ್ಟು ಇವರೆಲ್ಲರನ್ನೂ ’ಕ್ಷಮಿಸಲು’ ಪ್ರಯತ್ನಿಸುತ್ತೇವೆ! ಕ್ಷಮಿಸಿದರೆ ನಮಗೆ ಶಾಂತಿ ಸಿಕ್ಕಂತೆಯೇ? ಸಮಸ್ಯೆ ಅಲ್ಲಿಗೆ ಬಗೆಹರಿಯಿತೆ? ಈ ಕ್ಷಮಿಸುವ ಅಥವಾ ಕ್ಷಮಿಸದೇ ಇರುವ ತಲೆನೋವಿನಿಂದ ಹೊರಬರುವುದು ಹೇಗೆ? ಸದ್ಗುರುಗಳು ಉತ್ತರಿಸುತ್ತಾರೆ ಕೇಳಿ.
Subscribe