Main Centers
International Centers
India
USA
Wisdom
FILTERS:
SORT BY:
ನಿಮ್ಮ ಮನಸ್ಸು ಒಂದು ಬೆಂಕಿಯ ಚೆಂಡಿದ್ದಂತೆ. ಅದನ್ನು ನೀವು ಸರಿಯಾಗಿ ಬಳಸಿಕೊಂಡರೆ, ಅದು ಸೂರ್ಯನಂತಾಗಬಲ್ಲದು.
ನಿಮ್ಮನ್ನು ನಿಮಗೆ ಬೇಕಾದಂತೆ ರೂಪಿಸಿಕೊಳ್ಳಲು ನಿಮಗೆ ಸಾಧ್ಯವಾದಾಗ, ನಿಮ್ಮ ವಿಧಿಯನ್ನೂ ನಿಮಗೆ ಬೇಕಾದಂತೆ ನೀವು ರೂಪಿಸಿಕೊಳ್ಳಬಹುದು.
ವಸಂತದ ಸೊಬಗೇನೆಂದರೆ, ಹಣ್ಣು ಇನ್ನೂ ಬರಬೇಕಿದೆ, ಆದರೆ ಅದಾಗಲೇ ಮೂಡಿರುವ ಹೂವು ಒಂದು ವಾಗ್ದಾನ ಮತ್ತು ಸಾಧ್ಯತೆ.
ಸಮಸ್ತ ಬ್ರಹ್ಮಾಂಡವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ನಿಮ್ಮ ಯೋಚನೆಗಳಿಗೆ ಏನೂ ಅರ್ಥವಿಲ್ಲ. ಇದು ನಿಮಗೆ ಮನವರಿಕೆಯಾದರೆ, ನೀವು ಸಹಜವಾಗಿಯೇ ನಿಮ್ಮ ಯೋಚನಾ ಪ್ರಕ್ರಿಯೆಯಿಂದ ಅಂತರವನ್ನು ಉಂಟುಮಾಡಿಕೊಳ್ಳುತ್ತೀರಿ.
ನೀವು ಏನನ್ನೇ ಮಾಡಿದರೂ, ಇದನ್ನು ಪರಿಶೀಲಿಸಿಕೊಳ್ಳಿ – ನಿಮ್ಮ ಕಾರ್ಯವು ಕೇವಲ ನಿಮ್ಮ ಕುರಿತಾದುದೋ ಅಥವಾ ಅದು ಎಲ್ಲರ ಒಳಿತಿನ ಸಲುವಾಗಿಯೋ. ಒಳ್ಳೆಯ ಮತ್ತು ಕೆಟ್ಟ ಕರ್ಮದ ಕುರಿತಾದ ಎಲ್ಲ ಗೊಂದಲವನ್ನು ಇದು ನಿವಾರಿಸುತ್ತದೆ.
ಅಗತ್ಯವಾದ ಜೀವಶಕ್ತಿಯಿಲ್ಲದೆಯೇ ಅರಿವಿನಿಂದ ಇರುವುದು ಬಹಳ ಕಷ್ಟ. ಯೋಗ ಸಾಧನೆಯಲ್ಲಿ ತೊಡಗುವುದು ಅದಕ್ಕೇ – ಅದು ಜೀವಶಕ್ತಿಯನ್ನು ತೀವ್ರಗೊಳಿಸುತ್ತದೆ.
ಭಾವನೆಗಳು ಬಹುತೇಕ ಜನರಲ್ಲಿನ ಅತ್ಯಂತ ಪ್ರಬಲ ಶಕ್ತಿಯಾಗಿವೆ – ತಾವು ಬುದ್ಧಿಜೀವಿಗಳು ಎಂದುಕೊಂಡಿರುವವರಲ್ಲಿಯೂ ಕೂಡ.
ಪ್ರೀತಿ ಎಂಬುದು ಒಂದು ವಿನಿಮಯವಲ್ಲ, ಬದಲಿಗೆ ನಿಮ್ಮೊಳಗೆ ಉರಿಯುವ ಒಂದು ಜ್ವಾಲೆ. ನೀವು ‘ನಾನು’ ಅಂದುಕೊಂಡಿರುವುದರ ಮೂಲವನ್ನೇ ಅದು ದಹಿಸಿಬಿಟ್ಟಾಗ, ಅದು ನಿಮ್ಮನ್ನು ಮುಕ್ತಗೊಳಿಸುತ್ತದೆ.
ನಿಮಗೆ ಎಚ್ಚರದ ಸ್ಥಿತಿಯಿಂದ ನಿದ್ರೆಗೆ ಪ್ರಜ್ಞಾಪೂರ್ವಕವಾಗಿ ಸಾಗಲು ಸಾಧ್ಯವಾದರೆ, ಜೀವನದಿಂದ ಮರಣಕ್ಕೂ ನೀವು ಪ್ರಜ್ಞಾಪೂರ್ವಕವಾಗಿ ಸಾಗಲು ಸಮರ್ಥರಾಗುತ್ತೀರಿ.
ಮನುಷ್ಯ ಒಂದು ಬೀಜವಿದ್ದಂತೆ. ಒಂದೋ ನೀವು ಈಗಿರುವಂತೆಯೇ ಇದ್ದುಬಿಡಬಹುದು, ಅಥವಾ ಹೂವು-ಹಣ್ಣುಗಳಿಂದ ಕೂಡಿದ ಅದ್ಭುತ ಮರವಾಗಿ ನಿಮ್ಮನ್ನು ಬೆಳೆಸಿಕೊಳ್ಳಬಹುದು.
ಕಾರ್ಯಕ್ಷಮತೆ ಎಂಬುದು ಯಾವಾಗಲೂ ನಿಮ್ಮ ಸುತ್ತಲಿನ ಜನರೆಡೆಗಿನ ಪ್ರೀತಿ ಮತ್ತು ಕಾಳಜಿಯಿಂದ ಮೂಡಬೇಕು, ಯಾಂತ್ರಿಕ ಮತ್ತು ಭಾವಶೂನ್ಯ ಕಾರ್ಯವಾಗಲ್ಲ.
ನಿಮ್ಮದೇ ತಲೆಯೊಳಗೆ ನೀವು ಹುಟ್ಟುಹಾಕುವ ಅಸಂಬದ್ಧಕ್ಕಿಂತ ಸೃಷ್ಟಿಕರ್ತನ ಸೃಷ್ಟಿಗೆ ಗಮನ ನೀಡುವುದು ಹೆಚ್ಚು ಮುಖ್ಯ.