Main Centers
International Centers
India
USA
Wisdom
FILTERS:
SORT BY:
ಲವಲವಿಕೆಯಿಂದ, ಜೀವಂತಿಕೆಯಿಂದ ಬಾಳುವುದು ಸಾಧ್ಯವಾಗುವುದು ನೀವು ಬದುಕಿನ ಅನಿಶ್ಚಿತತೆಗಳನ್ನು ಲೀಲಾಜಾಲವಾಗಿ ಆನಂದಿಸಿದರೆ ಮಾತ್ರ.
ನೀವು ನಿಮ್ಮನ್ನು ದೊಡ್ಡವರೆಂದುಕೊಂಡರೆ ಸಣ್ಣವರಾಗುತ್ತೀರಿ. ‘ನಾನೇನೂ ಅಲ್ಲ’ ಎಂದು ನೀವು ಅರಿತರೆ, ನೀವು ಅಗಾಧವಾಗುತ್ತೀರಿ. ಇದುವೇ ಮನುಷ್ಯರಾಗಿರುವುದರ ಸೊಬಗು.
ಜೀವನ ಎಂದರೆ ಪ್ರಜ್ಞಾಪೂರ್ವಕತೆ – ಚಿಂತೆ, ಪ್ರವೃತ್ತಿವಶತೆ, ಅಥವಾ ತಿಕ್ಕಾಟಗಳಲ್ಲ. ಮುಂಬರುವ ತಿಂಗಳುಗಳು ಮನುಷ್ಯ ಚೇತನದ ಅಗಾಧತೆಯನ್ನು ಮುನ್ನೆಲೆಗೆ ತರಲಿ, ಮತ್ತು ಆನಂದಮಯ ಜೀವನಕ್ಕೆ ದಾರಿ ಮಾಡಿಕೊಡಲಿ.ಪ್ರೀತಿ ಮತ್ತು ಆಶೀರ್ವಾದಗಳು,
ನೀವು ಏನನ್ನು ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟಿದ್ದು. ಆದರೆ ನೀವದನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕು. ಅದೇ ‘ಮನುಷ್ಯ’ರಾಗಿರುವುದರ ಅರ್ಥ.
ಸದ್ಗುಣ ಎಂದರೆ ನೈತಿಕತೆಯ ಆಚರಣೆಯಲ್ಲ. ಸಕಲ ಜೀವರಾಶಿಯನ್ನು ನಿಮ್ಮದಾಗಿ ಒಳಗೂಡಿಸಿಕೊಳ್ಳುವುದೇ ಅತ್ಯಂತ ಶ್ರೇಷ್ಠ ಸದ್ಗುಣ.
ಯಾರೋ ಅದ್ಭುತ ವ್ಯಕ್ತಿ ನಿಮಗೆ ಸಿಗಬೇಕೆಂದು ಹಂಬಲಿಸಬೇಡಿ. ಬೇರೆಯವರು ಯಾವ ರೀತಿಯ ಅದ್ಭುತ ವ್ಯಕ್ತಿಯಾಗಿರಬೇಕೆಂದು ನೀವು ನಿರೀಕ್ಷಿಸುತ್ತಿದ್ದೀರೋ, ನೀವೇ ಆ ಅದ್ಭುತ ವ್ಯಕ್ತಿಯಾಗಲು ಹಂಬಲಿಸಿ.
ಗತಕಾಲ ಮತ್ತು ಭವಿಷ್ಯಗಳು ಇರುವುದು ನಿಮ್ಮ ನೆನಪು ಮತ್ತು ಕಲ್ಪನೆಗಳಲ್ಲಿ ಮಾತ್ರ. ನೀವು ‘ಅನುಭವಿಸು’ವುದು ಈ ಕ್ಷಣದಲ್ಲಿ ಇರುವುದನ್ನಷ್ಟೆ.
ಅಧ್ಯಾತ್ಮ ಎಂದರೆ ಜೀವನದಿಂದ ದೂರ ಸರಿಯುವುದಲ್ಲ. ಬದಲಿಗೆ ಅದು ಜೀವನದೊಂದಿಗೆ ಒಂದು ಅವಿನಾಭಾವ ಪ್ರಣಯ ಪ್ರಸಂಗ.
ನೀವು ಸದ್ಯದಲ್ಲಿ ಏನಾಗಿರುವಿರೋ ಅಷ್ಟಕ್ಕೆ ತೃಪ್ತಿ ಪಟ್ಟುಕೊಂಡರೆ, ಆಗ ಪ್ರಯತ್ನ ಪಟ್ಟರೆ ನೀವೇನಾಗಬಹುದು ಎಂಬ ಅರಿವೇ ನಿಮಗೆ ಇರುವುದಿಲ್ಲ.
ಜ್ಞಾನೋದಯ ಘಟಿಸುವುದು ನಿಶ್ಶಬ್ದವಾಗಿ. ಅದೊಂದು ಹೂವಿನ ಅರಳುವಿಕೆಯಂತೆ.
ಚಾಣಾಕ್ಷತನವು ಸಾಮಾಜಿಕವಾಗಿಯಷ್ಟೆ ಮೌಲ್ಯವುಳ್ಳದ್ದು. ಪ್ರಕೃತಿಯ ಮೂಲಭೂತ ಗುಣವು ಬುದ್ಧಿಶಕ್ತಿ.
ನೀವು ನಿಮ್ಮ ಕುಟುಂಬ, ನಿಮ್ಮ ಮಕ್ಕಳು, ಸಮಾಜ, ಮತ್ತು ಜಗತ್ತಿಗೆ ಮಾಡಬಹುದಾದ ಅತ್ಯಂತ ಶ್ರೇಷ್ಠ ಸಂಗತಿಯೆಂದರೆ, ನಿಮ್ಮನ್ನು ನೀವು ಉದ್ಧರಿಸಿಕೊಳ್ಳುವುದು.