Main Centers
International Centers
India
USA
Wisdom
FILTERS:
SORT BY:
ನೀವು ನಿಮ್ಮ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದಿರೆಂದರೆ ಯಶಸ್ಸು ಸುಲಭವಾಗಿ ದೊರೆಯುತ್ತದೆ.
ಯೋಗ ಎಂದರೆ ನಿಮ್ಮ ಬದುಕಿನ ಎಲ್ಲ ವಿಷಯಗಳಲ್ಲೂ ಒಂದು ಹೊಸ ಮಟ್ಟದ ಸಂತುಲನೆ ಮತ್ತು ಸಾಮರ್ಥ್ಯಕ್ಕೆ ಏರುವುದು.
ಹಣವು ಕೇವಲ ಬಾಹ್ಯ ಪರಿಸರವನ್ನು ಸವಿಯಾಗಿಸಬಲ್ಲದು. ಅಂತರಂಗದ ಸವಿಯನ್ನು ಅದು ಹುಟ್ಟುಹಾಕಲಾರದು.
ಯೇಸುವು "ಭಗವಂತನ ಸಾಮ್ರಾಜ್ಯವು ನಿಮ್ಮ ಅಂತರಂಗದಲ್ಲಿದೆ" ಎಂದ. ಯೋಗವು ನಿಮ್ಮ ಅಂತರಂಗವನ್ನು ಅನುಭವಿಸುವ ಒಂದು ವಿಧಾನ. ಕ್ರಿಸ್ಮಸ್ನ ಹಾರ್ದಿಕ ಶುಭಾಶಯಗಳು.
ನೀವು ನಿಮ್ಮ ಮನಸ್ಸಿನೊಂದಿಗೆ ಹೆಚ್ಚು ಗುರುತಿಸಿಕೊಂಡಷ್ಟೂ, ನಿಮ್ಮ ಸ್ವರೂಪದಿಂದ ಹೆಚ್ಚು ದೂರ ಹೋಗುತ್ತೀರಿ.
ದೈವಿಕತೆಯು ಈ ಶರೀರದಲ್ಲಿ ಬೇರುಬಿಟ್ಟಿದೆ. ನೀವು ಬೇರನ್ನು ಸಲಹಿದರೆ, ಹೂವು ಅರಳುವುದನ್ನು ತಪ್ಪಿಸುವುದು ಹೇಗೆ ಸಾಧ್ಯ.
ಮನುಷ್ಯರ ಅತ್ಯಂತ ದೊಡ್ಡ ಸಮಸ್ಯೆಯೇನೆಂದರೆ, ಅವರಿಗೆ ತಮ್ಮ ಯೋಚನೆ ಮತ್ತು ಭಾವನೆಗಳನ್ನು ನಿಭಾಯಿಸುವುದು ಹೇಗೆಂದು ಗೊತ್ತಿಲ್ಲ.
ನಿಮಗೆ ನಿಮ್ಮ ದೇಹದ ನೋವಿನ ಅರಿವಿದ್ದಂತೆಯೇ, ಒಂದು ಮರದ, ಪ್ರಾಣಿಯ, ಅಥವಾ ಅಸ್ತಿತ್ವದಲ್ಲಿರುವ ಯಾವುದೇ ವಿಷಯದ ನೋವಿನ ಅರಿವಿದ್ದರೆ, ನೀವು ಎಲ್ಲವನ್ನೂ ಚೆನ್ನಾಗಿ ಇಡುತ್ತೀರಿ.
ಧ್ಯಾನ ಎಂದರೆ ಅನಿರ್ಬಂಧತೆಯ ಸ್ಥಿತಿಯನ್ನು ತಲುಪುವುದು. ಧ್ಯಾನದ ಉದ್ದೇಶ ದೇಹ-ಮನಸ್ಸುಗಳನ್ನು ನಿಯಂತ್ರಿಸುವುದಲ್ಲ, ಬದಲಿಗೆ ಮುಕ್ತಗೊಳಿಸುವುದು.
ಶಾಂತಿಯು ಜೀವನದ ಪರಮ ಗುರಿಯಲ್ಲ. ಅದು ಅತ್ಯಂತ ಮೂಲಭೂತ ಅಗತ್ಯ.
ನೀವು ಒಲ್ಲದ ಮನಸ್ಸಿನಿಂದ ಮನಃಪೂರ್ವಕತೆಯೆಡೆಗೆ, ಜಡತೆಯಿಂದ ಲವಲವಿಕೆಯೆಡೆಗೆ ಮಾರ್ಪಟ್ಟರೆ, ನಿಮ್ಮ ಜೀವನವು ಸಂತೋಷಭರಿತವೂ ಅನಾಯಾಸವೂ ಆಗಿರುತ್ತದೆ.