ಒಂದು ಝೆನ್ ಆಶ್ರಮದಲ್ಲಿ ಅನೇಕ ಶಿಷ್ಯಂದಿರು ತಮ್ಮ ಗುರುಗಳಿಂದ ಕಲಿಯಲು ಒಟ್ಟುಗೂಡಿದ್ದರು. ಎಲ್ಲ ಶಿಷ್ಯರಲ್ಲಿ, ಹೊಸದಾಗಿ ಬಂದ ಒಬ್ಬ ಶಿಷ್ಯನು ಹೆಚ್ಚು ಸಕ್ರಿಯನಾಗಿದ್ದನು. ಗುರುಗಳು ಏನನ್ನಾದರೂ ಬಯಸಿದಲ್ಲಿ, ಎಲ್ಲರಿಗಿಂತ ಮುಂಚಿತವಾಗಿ ತಲುಪುತ್ತಿದ್ದನು. ಗುರುಗಳು ನೀಡಿದ ಎಲ್ಲ ಕೆಲಸಗಳನ್ನೂ ಬೇಗ ಮಾಡುತ್ತಿದ್ದನು. ಅವನು ರಾತ್ರಿ ಎಲ್ಲರಿಗಿಂತ ತಡವಾಗಿ ಮಲಗುತ್ತಿದ್ದು, ಮುಂಜಾನೆ ಮೊದಲು ಎದ್ದು ದಿನನಿತ್ಯದ ಕೆಲಸಗಳಲ್ಲಿ ತೊಡಗುತ್ತಿದ್ದನು. ಇದನ್ನು ಗಮನಿಸಿದ ಗುರುಗಳು ಒಂದು ದಿನ ಅವನಿಗೆ “ಇಲ್ಲಿಗೆ ಬರುವ ಮುನ್ನ ಎಲ್ಲಿದ್ದೆ?” ಎಂದು ಕೇಳಿದರು. ಅದಕ್ಕೆ ಆ ಶಿಷ್ಯ “ ಇಲ್ಲಿಗೆ ಬರುವ ಮುನ್ನ ‘ಶಲಿಂಗ್ ಕ್ಯೂ’ ಅವರ ಬಳಿ ಅಧ್ಯಯನ ಮಾಡುತಿದ್ದೆ” ಎಂದು ಉತ್ತರಿಸಿದ.

ಅದಕ್ಕೆ ಆ ಶಿಷ್ಯ “ ಇಲ್ಲಿಗೆ ಬರುವ ಮುನ್ನ ‘ಶಲಿಂಗ್ ಕ್ಯೂ’ ಅವರ ಬಳಿ ಅಧ್ಯಯನ ಮಾಡುತಿದ್ದೆ” ಎಂದು ಉತ್ತರಿಸಿದ.

“ಓ, ಶಲಿಂಗ್ ಕ್ಯೂ! ನಾನು ಅವರ ಬಗ್ಗೆ ಓದಿದ್ದೇನೆ. ಒಮ್ಮೆ ಸೇತುವೆಯ ಮೇಲೆ ನಡೆಯುತ್ತಿರುವಾಗ, ಅವರು ಜಾರಿ ನೀರಿನಲ್ಲಿ ಬೀಳುತ್ತಾರೆ ಅಲ್ಲವೇ?” ಗುರುಗಳು ಕೇಳಿದರು.

“ಹೌದು ಗುರುಗಳೆ” ಶಿಷ್ಯ ಉತ್ತರಿಸಿದ.

“ಆ ಸನ್ನಿವೇಶದಲ್ಲೇ ಅವರಿಗೆ ಜ್ಞಾನೋದಯವಾಯಿತು ಎಂಬುದು ನಿನಗೆ ಗೊತ್ತಾ?”

“ಅದರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಜ್ಞಾನೋದಯದ ಬಗ್ಗೆ ಒಂದು ಕವನ ಬರೆದಿದ್ದಾರೆ.”

“ಆ ಕವನ ನೆನಪಿದೆಯಾ?”

“ಹೌದು ಗುರುಗಳೆ ನೆನಪಿದೆ.”

“ಹಾಗಾದರೆ ಹೇಳು.”

"ನಾನೊಂದು ಮುತ್ತನ್ನು ಕಂಡೆ

ಧೂಳು ಮತ್ತು ಕೊಳಕು ಅದರ ಹೊಳಪನ್ನು ಬಹಳ ಕಾಲ ಆವರಿಸಿತ್ತು.

ಈಗ ಧೂಳು ಹಾರಿಹೋಗಿದೆ. ಕೊಳಕೂ ಹೋಗಿದೆ.

ಪ್ರಕಾಶ ಹುಟ್ಟಿದೆ.

ಪರ್ವತಗಳು ಮತ್ತು ನದಿಗಳು ಅದರ ಬೆಳಕಿನಿಂದ ಬೆಳಗಿವೆ."

ಆ ಕವನವನ್ನು ಹೇಳಿ ಮುಗಿಸಿದ ಮರುಕ್ಷಣವೇ, ಗುರುಗಳು ಜೋರಾಗಿ ನಕ್ಕುಬಿಟ್ಟರು.

ಶಿಷ್ಯನಿಗೆ ಗೊಂದಲವಾಯಿತು.”ಈ ಕವನದಲ್ಲಿ ನಗುವಂತಹ ವಿಷಯವೇನಿದೆ? ಗುರುಗಳು ಏಕೆ ನಕ್ಕರು?”. ಎಷ್ಟೇ ಯೋಚಿಸಿದರೂ ಕೂಡ ಅವನಿಗೆ ಉತ್ತರ ದೊರಕಲಿಲ್ಲ. ಆ ರಾತ್ರಿ ಅವನ ನಿದ್ರೆ ಹಾಳಾಯಿತು. ಮರುದಿನ ಮುಂಜಾನೆ ಏಳುತ್ತಲೇ ಗುರುಗಳನ್ನು ಹುಡುಕುತ್ತಾ ಬಂದು ಕೇಳಿದ.

“ಗುರುಗಳೇ, ನಿನ್ನೆ ಆ ಕವಿತೆಯನ್ನು ನಾನು ನಿಮಗೆ ಹೇಳಿದಾಗ ನೀವು ಯಾಕೆ ನಕ್ಕಿದ್ದು?"

ಗುರುಗಳು "ನೀನು ಕೋಡಂಗಿಗಿಂತ ಕಡೆ" ಎಂದರು.

"ಏನು?"

"ಹೌದು, ಕೋಡಂಗಿಗಳು ಇತರರನ್ನು ನಗಿಸುತ್ತಾರೆ, ಆದರೆ ಯಾರಾದರೂ ನಗುತ್ತಿದ್ದರೆ ನೀನು ಭಯಭೀತರಾಗುತ್ತೀಯ". ಇದನ್ನು ಹೇಳುತ್ತಾ ಅವರು ಮತ್ತೆ ಜೋರಾಗಿ ನಗಲು ಪ್ರಾರಂಭಿಸಿದರು.

ಗುರುಗಳ ಆ ನಗುವಿನಿಂದಾಗಿ ಶಿಷ್ಯನಿಗೆ ಜ್ಞಾನೋದಯವಾಯಿತು. 

ಸದ್ಗುರುಗಳ ವಿವರಣೆ:

ಸದ್ಗುರು: ಝೆನ್ ಮತ್ತು ನಗೆಯ ನಡುವೆ ಆಳವಾದ ಸಂಬಂಧವಿದೆ.

ಅನೇಕ ಝೆನ್ ಗುರುಗಳು ಜೋರಾಗಿ ನಗುವಂತಹ ಗುಣವುಳ್ಳವರು. ಝೆನ್ ಮಾತ್ರವಲ್ಲ, ಯಾರು ತಮ್ಮೊಳಗೆ ಒಂದು ನಿರ್ದಿಷ್ಟ ಉತ್ಕರ್ಷದ ಸ್ಥಿತಿಯನ್ನು ಸಾಧಿಸಿರುವರೋ ಅವರು ನಗಲು ಒಂದು ಕಾರಣಕ್ಕಾಗಿ ಕಾಯುವುದಿಲ್ಲ. ಇದು ಒಳ್ಳೆಯ ಸುದ್ದಿಯೇ ಆಗಿರಲಿ ಅಥವಾ ಕೆಟ್ಟ ಸುದ್ದಿ ಆಗಿರಲಿ, ಅವರು ನಗಬಹುದು.

ನಾನು ಯುವಕನಾಗಿದ್ದಾಗ, ಜ್ಞಾನೋದಯದ ನಂತರ, ನಾನು ನನ್ನ ಸುತ್ತಲಿರುವ ಪ್ರತಿಯೊಬ್ಬರನ್ನೂ ನೋಡಿ, "ಈ ಜನರು, ತಮ್ಮ ಜೀವನದ ಪ್ರತಿ ಕ್ಷಣವೂ ಅತ್ಯಂತ ಆನಂದಮಯವಾಗಿರಲು ಸಮರ್ಥರಾಗಿದ್ದರೂ ಸಹ, ಅವರ ಜೀವನವನ್ನು ಏಕೆ ಈ ರೀತಿ ಗೊಂದಲಮಯವಾಗಿಸಿಕೊಳ್ಳುತ್ತಾರೆ?" ಎಂದು ಯೊಚಿಸಿದಾಗ ಕಣ್ಣೀರು ಹರಿಸುತ್ತಿದ್ದೆ.

ಆದರೆ ಶೀಘ್ರದಲ್ಲೇ, ನನ್ನ ಸುತ್ತಮುತ್ತಲಿನ ಜನರಲ್ಲಿನ ಅಜ್ಞಾನವನ್ನು ನೋಡಿದಾಗ, ಕಣ್ಣೀರು ಹರಿಸುವುದಕ್ಕಿಂತ ನಗುವುದು ಹೆಚ್ಚು ಆನಂದದಾಯಕ ಎಂದು ಅರಿತುಕೊಂಡೆ. ಕಣ್ಣೀರು ಸುರಿಸುತ್ತಾ ಇರುವುದರಲ್ಲಿ ಯಾವುದೇ ಅರ್ಥವಿಲ್ಲ.

ಜಗತ್ತಿನಲ್ಲಿ, ಬಡತನ ಅಥವಾ ಕಾಯಿಲೆಗಿಂತ ಹೆಚ್ಚಾಗಿ, ಅಜ್ಞಾನವೇ ವ್ಯಾಪಕವಾಗಿದೆ. ಅಜ್ಞಾನವನ್ನು ಕಂಡು ನಗುವುದಕ್ಕಿಂತ ಉತ್ತಮವಾದ ಅವಕಾಶವನ್ನು ಎಲ್ಲಿ ಕಾಣಬಹುದು? ಅಜ್ಞಾನ ಹಾಗು ಆನಂದವನ್ನು ಹೋಲಿಸುವಷ್ಟು ಅರಿವು ನಿಮ್ಮಲ್ಲಿ ಬಂದರೆ, ಯಾವ ತೊಂದರೆಗೂ ಅಲ್ಲಿ ಜಾಗವಿರುವುದಿಲ್ಲ.

ಒಮ್ಮೆ, ನಾನು ಅಮೇರಿಕಾದಲ್ಲಿ ಪರ್ವತಗಳ ನಡುವೆ ಕಾರು ಚಾಲನೆ ಮಾಡುತ್ತಿದ್ದೆ. ಮಳೆ ಸುರಿಯುತ್ತಿತ್ತು. ಈಶಾ ಸ್ವಯಂಸೇವಕರು ನನ್ನೊಂದಿಗೆ ಬೇರೆ ಬೇರೆ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು.

ನನ್ನ ಹಿಂದೆ ಕಾರಿನಲ್ಲಿ, ಈಶಾ ಸ್ವಯಂಸೇವಕನೊಂದಿಗೆ ಅಮೆರಿಕದ ಮೂವರು ಮಹಿಳೆಯರು ಇದ್ದರು. ಸಾಮಾನ್ಯವಾಗಿ ನಾನು ಕಾರನ್ನು ವೇಗವಾಗಿ ಓಡಿಸುತ್ತೇನೆ, ಅವರು ತಮ್ಮ ಕಾರನ್ನು ನನ್ನ ವೇಗದಲ್ಲಿ ಓಡಿಸಲು ಪ್ರಯತ್ನಿಸುತ್ತಿದ್ದರು.

"ನನ್ನ ವೇಗವನ್ನು ಹೊಂದಿಸಲು ಪ್ರಯತ್ನಿಸಬೇಡಿ" ಎಂದು ನಾನು ಅವರಿಗೆ ಎಚ್ಚರಿಕೆ ನೀಡಿದೆ.

"ಇಲ್ಲ, ಈ ಮಾರ್ಗವು ನಮಗೆ ಪರಿಚಿತ" ಎಂದು ಅವರು ಹೇಳಿದರು ಮತ್ತು ಅದೇ ವೇಗದಲ್ಲಿ ಸಾಗುತ್ತಿದ್ದರು.

ಒಂದು ತಿರುವು ಇರುವಕಡೆ ನಾನು ಅದೇ ವೇಗದಲ್ಲಿ ಸಾಗಿದೆ. ಆದರೆ ಅವರಿಗೆ ವೇಗವನ್ನು ನಿರ್ವಹಿಸಲು ಸಾಧ್ಯವಾಗದೆ ಅತಿಯಾದ ವೇಗದಲ್ಲಿ ಆ ಕಾರು ಒಂದು ಮರಕ್ಕೆ ಅಪ್ಪಳಿಸಿತು. ಅದರ ಪ್ರಭಾವ, ಕಾರು ಮರವನ್ನು ಬಾಗಿಸಿ ಒಂದು ರೀತಿ ಪ್ರಾಣಿಯ ಹಾಗೆ ಮರದ ಮೇಲೆ ಹತ್ತಿ ನಿಂತಿತು. ಕಾರಿನ ಅರ್ಧ ಭಾಗ ಮರದ ಮೇಲೆಯೂ, ಇನ್ನರ್ಧ ಭಾಗ ರಸ್ತೆಯಲ್ಲಿಯೂ ನೇತಾಡುತಿತ್ತು.ಸ್ವಲ್ಪ ತಪ್ಪಿದ್ದರೆ, ಅದು 400 ಅಡಿ ಆಳದ ಕಣಿವೆಯಲ್ಲಿ ಬೀಳುತ್ತಿತ್ತು.

ನನ್ನ ಕಾರಿನ ಹಿನ್ನೋಟದ ಕನ್ನಡಿಯಿಂದ ಆ ಕಾರು ಮರಕ್ಕೆ ಗುದ್ದಿದಾಗಿನಿಂದ ನಡೆದ ಎಲ್ಲ ಪ್ರಸಂಗವನ್ನೂ ನಾನು ನೋಡಿದೆ. ನಾನು ಕಾರನ್ನು ಹಿಂದಕ್ಕೆ ತಂದು ನಿಲ್ಲಿಸಿ, ಅಲ್ಲಿನ ಪರಿಸ್ಥಿತಿ ತಿಳಿಯಲು ಹೊರಟೆ.

ಒಳಗಿದ್ದ ಹೆಂಗಸರು ಕಿರುಚುತ್ತಿದ್ದರು. ಕಾರು ಅಂಚಿನಲ್ಲಿ ನೇತಾಡುತ್ತಿತ್ತು, ಮತ್ತು ನಾವು ನಿಧಾನವಾಗಿ ಪ್ರತಿಯೊಬ್ಬರನ್ನು ಕಾರಿನಿಂದ ಒಬ್ಬೊಬ್ಬರಾಗಿ ಸುರಕ್ಷಿತವಾಗಿ ಹೊರತಂದೆವು.

ಅಂತಹ ಅಪಘಾತದಲ್ಲಿ ಅವರೆಲ್ಲರೂ ಸಾವನ್ನಪ್ಪಬಹುದಿತ್ತು. ಆದರೆ ಹೇಗೋ ಅವರು ತಪ್ಪಿಸಿಕೊಂಡರು. ವಿಪತ್ತಿನಿಂದ ಪಾರಾದ ನಂತರವೂ ಭಯ ಮತ್ತು ಗದ್ದಲದಲ್ಲಿ ಅವರೆಲ್ಲರೂ ಇದ್ದರು.ಆ ಮಹಿಳೆಯರು ಇನ್ನಷ್ಟು ತೀವ್ರವಾಗಿ ಅಳಲು ಪ್ರಾರಂಭಿಸಿದರು.

ಆದರೆ ಈಶಾದ ಮಹಿಳೆ ಹೊರಬಂದ ಕ್ಷಣದಿಂದ ಜೋರಾಗಿ ನಗಲು ಪ್ರಾರಂಭಿಸಿದರು. ನಾನು ಅಲ್ಲಿಗೆ ತಲುಪಿದ ಕ್ಷಣ, ನಾನೂ ಸಹ ತಡೆಯಲಾಗದೆ ನಗಲು ಪ್ರಾರಂಭಿಸಿದೆ.

ಅಮೇರಿಕನ್ ಮಹಿಳೆಯರು ಇನ್ನಷ್ಟು ಕೋಪಗೊಂಡರು ಮತ್ತು "ನಾವು ಈ ರೀತಿ ಬಳಲುತ್ತಿರುವಾಗ ನೀವು ಹೇಗೆ ಬೇಜವಾಬ್ದಾರಿಯಿಂದ ಹೀಗೆ ವರ್ತಿಸಬಹುದು?" ಎಂದು ಕೇಳಿದರು.

ನಾನು ನಗುವುದನ್ನು ಮುಂದುವರೆಸಿ, "ನೀವೆಲ್ಲರೂ ಸತ್ತಿದ್ದರೆ ನಾನು ಈ ರೀತಿ ನಗುತ್ತಿರಲಿಲ್ಲ. ನಾನು ಸ್ವಲ್ಪ ಸಮಯ ಕಾಯುತ್ತಿದ್ದೆ, ನಂತರ ನಗುತ್ತಿದ್ದೆ" ಎಂದು ಹೇಳಿದೆ

ಜೀವನದ ಯಾವುದೇ ಹಂತದಲ್ಲಿಯೇ ಆಗಲಿ, ಅಥವಾ ಜೀವನದ ಯಾವುದೇ ಪರಿಸ್ಥಿತಿಯಲ್ಲಿ, ನಿಮಗೆ ಬರುವದನ್ನು ನೀವು ಹೇಗೆ ಎದುರಿಸುತ್ತೀರಿ ಎಂಬುದು ನೀವು ಎಷ್ಟು ಅಜ್ಞಾನಿಯಾಗಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನೀವು ಎಲ್ಲಿಂದ ಬಂದಿರಿ? ನೀವು ಎಲ್ಲಿಗೆ ಹೋಗುತ್ತಿದ್ದೀರಾ? ನಿಮಗೆ ಏನೂ ತಿಳಿದಿಲ್ಲ, ಆದರೆ ನೀವು ಏನನ್ನಾದರೂ ಸ್ವಂತವಾಗಿ ಆಲೋಚಿಸಿ ಅದರಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತೀರಿ. ನೀವು ಇಲ್ಲಿ ಬಹಳ ಕಡಿಮೆ ಅವಧಿಯವರೆಗೆ ಇರುತ್ತೀರಿ, ಆದ್ದರಿಂದ ನಿಮ್ಮ ಮೂರ್ಖತನವನ್ನು ಏಕೆ ಅಂತಹ ಗೊಂದಲಮಯ ಮಾಡಿಕೊಳ್ಳುತ್ತೀರಿ?.

ನಿಮ್ಮ ನಗುವನ್ನು ಕಳೆದುಕೊಳ್ಳಲು ಸಾವಿರ ಕಾರಣಗಳು ಇರಬಹುದು. “ನಾನು ನನ್ನ ತಂದೆಯನ್ನು ಕಳೆದುಕೊಂಡೆ, ನಾನು ನನ್ನ ತಾಯಿಯನ್ನು ಕಳೆದುಕೊಂಡೆ, ನಾನು ನನ್ನ ಹೆಂಡತಿಯನ್ನು ಕಳೆದುಕೊಂಡೆ, ನಾನು ನನ್ನ ಗಂಡನನ್ನು ಕಳೆದುಕೊಂಡೆ, ನಾನು ನನ್ನ ಮಗುವನ್ನು ಕಳೆದುಕೊಂಡೆ. ನೀವು ಯಾವುದೇ ಕಾರಣವನ್ನು ನೀಡಿದರೂ ಸಹ, ನಿಮ್ಮ ನಗುವನ್ನು ಕಳೆದುಕೊಳ್ಳಲು ಅದು ಕಾರಣವಾಗಿರುವುದಿಲ್ಲ..

ಜನರು ತಮ್ಮ ನಗೆಯನ್ನು ಕಳೆದುಕೊಂಡಿದ್ದರೆ, ಒಂದೇ ಒಂದು ಕಾರಣವಿದೆ: ಅವರು ಅಜ್ಞಾನದ ಉತ್ತುಂಗದಲ್ಲಿದ್ದಾರೆ, ಜೀವನದ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ. ನೀವು ಭಾವಪರವಶ ಸ್ಥಿತಿಯನ್ನು ಸಾಧಿಸಿದರೆ, ನಗುವೊಂದೇ ಉಳಿದಿರುತ್ತದೆ. ದೇವಾಲಯದ ಗಂಟೆಯ ಶಬ್ದವನ್ನು ನೀವು ಕೇಳಿದರೆ, ಅದು ದೊಡ್ಡ ನಗೆಯ ಶಬ್ದಕ್ಕೆ ಹತ್ತಿರವಾದುದು ಎಂದು ನೀವು ನೋಡಬಹುದು. ನಗೆಯನ್ನು ಕಳೆದುಕೊಂಡವರು ಎಲ್ಲವನ್ನೂ ಕಳೆದುಕೊಂಡ ಹಾಗೆ. ಆ ಝೆನ್ ಗುರು ತಮ್ಮ ಶಿಷ್ಯನಿಗೆ ತೋರಿಸಿದ್ದು ಇದನ್ನೇ. 

Editor’s Note: Read this article, where Sadhguru explains what Zen is and how it came to be such an effective means towards the Ultimate.