ಯೋಗವಿಜ್ಞಾನದಲ್ಲಿ ಪಂಚಭೂತಗಳಿಗೆ ಮಹತ್ತರವಾದ ಸ್ಥಾನವಿದೆ. 'ಆಕಾಶ' ಪಂಚಭೂತಗಳಲ್ಲಿ ಒಂದು. ಆದರೆ ಇದು ಪಂಚಭೂತಗಳಲ್ಲೇ ಅತ್ಯಂತ ನಿಗೂಢ ಹಾಗೂ ವಿಸ್ಮಯಕಾರಿಯಾದದ್ದು! ಅಲ್ಲದೇ, ಈಥರ್ (Aether) ಎಂಬ ಪದಾರ್ಥದ ಇರುವಿಕೆಯನ್ನು ಪುರಾತನ ಮತ್ತು ಮಧ್ಯಕಾಲೀನ ವಿಜ್ಞಾನ ಪ್ರಪಂಚ ಪ್ರತಿಪಾದಿಸಿತ್ತು. ಆಧುನಿಕ ವಿಜ್ಞಾನ ಸ್ಪೇಸ್(Space) ಬಗ್ಗೆ ತೀವ್ರವಾಗಿ ಸಂಶೋಧನೆಗಳನ್ನು ನಡೆಸುತ್ತಿದೆ. ಹಾಗಿದ್ದರೆ 'ಆಕಾಶ' ಎಂದರೆ ಇವುಗಳಲ್ಲಿ ಯಾವುದು? ವಿಜ್ಞಾನಿಗಳು ಮಾತನಾಡಿದ್ದ 'ಈಥರ್' ಗೂ 'ಆಕಾಶ'ಕ್ಕೂ ನಂಟಿದೆಯೇ? 'ಆಕಾಶ'ಕ್ಕೆ ನಮ್ಮ ಬದುಕಿನಲ್ಲಿರುವ ಮಹತ್ವವೇನು? ಅದರ ಅಗಾಧತೆಯೇನು? ಚಿಕ್ಕ ಅಣುವಿನಿಂದ ಹಿಡಿದು, ಬೃಹತ್ ಆಕಾಶಕಾಯಗಳ ವರೆಗೆ ಸೃಷ್ಟಿಯಲ್ಲಿ ಸಾಮ್ಯತೆಯಿದೆಯೇ? ಅದೇಕೆ ಅಷ್ಟೊಂದು ನಿಗೂಢ? ಕೇಳಿ, ಸದ್ಗುರುಗಳ ಮಾತುಗಳಲ್ಲಿ!
Subscribe