ಕೊರೋನಾದ ಎರಡನೇ ಅಲೆ ಅಪ್ಪಳಿಸಿರುವ, ಈ ಸಮಯದಲ್ಲಿ ಉತ್ತಮವಾದ ರೋಗನಿರೋಧಕಶಕ್ತಿಯನ್ನು(Immunity Power) ಹೊಂದಿರುವುದು ಬಹಳ ಮುಖ್ಯ. ಆದ್ದರಿಂದ ಮನೆಮದ್ದಿನ ಮೂಲಕವೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸದ್ಗುರುಗಳು ಕೆಲವು ಟಿಪ್ಸ್ ನೀಡುತ್ತಾರೆ. ಕೊರೊನಾ ವ್ಯಾಕ್ಸಿನ್ ಭಾರತ ಸೇರಿದಂತೆ ವಿಶ್ವದಾದ್ಯಂತ ಕೊಡಲಾಗುತ್ತಿದೆಯಾದರೂ, ಸಂಪೂರ್ಣ ಜನಸಂಖ್ಯೆಗೆ ಅದು ಸಿಗಬೇಕೆಂದರೆ ಅದರದ್ದೇ ಆದ ಸಮಯ ಹಿಡಿಯುತ್ತದೆ. ಆದಾಗ್ಯೂ, ವ್ಯಾಕ್ಸಿನ್ ಪಡೆದರೂ ಸಾಮಾಜಿಕ ಅಂತರ(Social Distancing), ಮಾಸ್ಕ್, ಸ್ಯಾನಿಟೈಸರ್ ಮುಂತಾದವುಗಳನ್ನು ಅಭ್ಯಾಸದಲ್ಲಿ ಇರಿಸಿಕೊಳ್ಳುವುದು ಅತ್ಯವಶ್ಯಕ. ಹಾಗೆಯೇ, ನಮ್ಮ ರೋಗನಿರೋಧಕ ಶಕ್ತಿಯ ಮೇಲೆ ಕೆಲಸ ಮಾಡುವುದು ಬಹಳ ಪ್ರಯೋಜನಕಾರಿ. ಈ ವಿಡಿಯೋದ ಸದುಪಯೋಗ ಪಡೆದುಕೊಳ್ಳಿ.
Subscribe