ಜನರು ಜೀವನದಲ್ಲಿ ಅನೇಕ ’ಕಷ್ಟ’ಗಳನ್ನು ಅನುಭವಿಸುತ್ತಿರುತ್ತಾರೆ. ಎಲ್ಲದರಲ್ಲೂ ನರಳುತ್ತಿರುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ನರಳಾಟ. ಕೆಲಸ ಸಿಗದಿದ್ದರೆ ನರಳಾಟ, ಸಿಕ್ಕ ಮೇಲೆ ಮತ್ತೊಂದು ಬಗೆಯ ನರಳಾಟ. ಮದುವೆ ಆಗದಿದ್ದರೆ ಗೋಳು, ಆದ ಮೇಲೆ...ಬೇಡ ಬಿಡಿ! ಹೀಗೆ ಎಲ್ಲದರಲ್ಲೂ ಮಾನವರು ನರಳುವುದು ಏಕೆ? ನಮ್ಮೆಲ್ಲ ನರಳಾಟಗಳ, ಗೋಳಿನ ಮೂಲ ಏನು? ನಾವು ಏನನ್ನು ಸರಿಮಾಡಿಕೊಂಡರೆ ಜೀವನವನ್ನು ಖುಷಿಯಿಂದ ಸಾಗಿಸಬಹುದು? ಕೇಳಿ, ಸದ್ಗುರುಗಳ ಮನಮುಟ್ಟುವ ಉತ್ತರವನ್ನು.
Subscribe