ಮನೆಯಲ್ಲಿಯೂ, ಕೆಲಸ ಮಾಡುವಲ್ಲಿಯೂ ಪ್ರತಿದಿನ ಹಲವಾರು ಮಂದಿಗಳೊಂದಿಗೆ ವ್ಯವಹರಿಸುತ್ತಿರುತ್ತೇವೆ, ಮಾತನಾಡುತ್ತಿರುತ್ತೇವೆ. ಕೆಲವು ಸಮಯದಲ್ಲಿ ತಾಳ್ಮೆ ಕಳೆದುಕೊಂಡು ಏನನ್ನೋ ಹೇಳಿಬಿಡುತ್ತೇವೆ. ನಂತರ ಕೆಲವೊಮ್ಮೆ ಹೇಳಿದ್ದಕ್ಕೆ ಪಶ್ಚಾತ್ತಾಪ ಪಡುವುದೂ ಉಂಟು. ಇಂತಹ ಒಂದು ಹೃದಯಸ್ಪರ್ಷಿ ಘಟನೆಯನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ಒಮ್ಮೊಮ್ಮೆ ಕೆಲವು ಕಹಿ ಘಟನೆಗಳು ಜೀವನಪಾಠವಾಗಿ ನಮ್ಮಲ್ಲಿ ಪರಿವರ್ತನೆ ತರುವುದೂ ಉಂಟು. ಈ ಕಥೆಯ ಮೂಲಕ ಹೇಗೆ ಜೀವನದಲ್ಲಿ ಏನೇ ನಡೆದರೂ ಅದನ್ನು ಬೆಳವಣಿಗೆಗೆ ಪೂರಕವಾಗಿ ತೆಗೆದುಕೊಳ್ಳಬಹುದು ಎಂಬುದನ್ನು ಮನಮುಟ್ಟುವಮ್ತೆ ವಿವರಿಸುತ್ತಾರೆ.
Subscribe