ಈಶ ಫೌಂಡೇಶನ್ ವಿರುದ್ಧದ ಆರೋಪಗಳನ್ನು ವಜಾಗೊಳಿಸಿ, ಆರೋಪಗಳ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ಸರ್ವೋಚ್ಛ ನ್ಯಾಯಾಲಯ
ಉಚ್ಚ ನ್ಯಾಯಾಲಯದ ಆದೇಶಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ವೋಚ್ಛ ನ್ಯಾಯಾಲಯ, ಈಶ ಫೌಂಡೇಶನ್ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದೆ ಮತ್ತು ಇಬ್ಬರು ಮಹಿಳಾ ಸನ್ಯಾಸಿನಿಯರು ತಮ್ಮ ಸ್ವಂತ ಇಚ್ಛೆಯಿಂದ ಫೌಂಡೇಶನ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ದೃಢಪಡಿಸಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯವು ಈಶ ಫೌಂಡೇಶನ್ ವಿರುದ್ಧದ ಪ್ರಕರಣವನ್ನುವಜಾಗೊಳಿಸಿದೆ. ಈ ಪ್ರಕರಣದಲ್ಲಿ ಇಬ್ಬರು ಮಹಿಳಾ ಸನ್ಯಾಸಿನಿಯರನ್ನು ಈಶ ಫೌಂಡೇಶನ್‌ನಲ್ಲಿ ಅವರ ಇಚ್ಛೆಗೆ ವಿರುದ್ಧವಾಗಿ ಬಂಧಿಸಲಾಗಿದೆ ಎಂದು ಆರೋಪಿಸಲಾಗಿತ್ತು. 39 ಮತ್ತು 42 ವರ್ಷ ವಯಸ್ಸಿನ ಈ ಇಬ್ಬರು ಮಹಿಳಾ ಸನ್ಯಾಸಿನಿಯರು ತಮ್ಮ ಸ್ವಂತ ಇಚ್ಛೆಯಿಂದಲೇ ಫೌಂಡೇಶನ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ನ್ಯಾಯಾಲಯವು ದೃಢಪಡಿಸಿದೆ.
ಇದಲ್ಲದೆ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು, "ಜನರ ಮತ್ತು ಸಂಸ್ಥೆಗಳ ಹೆಸರು ಕೆಡಿಸಲು ನ್ಯಾಯಾಲಯದ ಕಾರ್ಯವಿಧಾನಗಳನ್ನು ಬಳಸಬಾರದು" ಎಂದು ಗಮನಿಸಿದರು. ಈಶ ಫೌಂಡೇಶನ್ ವಿರುದ್ಧ ಪೊಲೀಸ್ ತನಿಖೆಗೆ ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ನಿರ್ದೇಶನಗಳ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಪೊಲೀಸ್ ವರದಿಯ ವಿವರಗಳನ್ನು ಪರಿಗಣಿಸಲು ನಿರಾಕರಿಸಿತು. ವಾಸ್ತವವಾಗಿ, ಒಂದು ಹಂತದಲ್ಲಿ, ಈ ಪ್ರಕರಣದ ಹಿಂದಿನ ಉದ್ದೇಶಗಳು ಸಂಶಯಾಸ್ಪದವಾಗಿ ಕಂಡುಬರುತ್ತಿವೆ ಎಂದು ನ್ಯಾಯಾಲಯವು ಗಮನಿಸಿತು.
ಮುಖ್ಯ ನ್ಯಾಯಮೂರ್ತಿಯವರು ಈ ಹಿಂದೆ ಇಬ್ಬರು ಮಹಿಳಾ ಸನ್ಯಾಸಿನಿಯರೊಂದಿಗೆ ಮಾತನಾಡಿದ್ದರು ಮತ್ತು ಇಬ್ಬರೂ ಬುದ್ಧಿವಂತರು ಹಾಗೂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸೂಚಿಸಿದ್ದರು. ಸನ್ಯಾಸಿನಿಯರು ತಮ್ಮ ಪೋಷಕರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ - ಇದನ್ನು ಹಲವಾರು ತನಿಖೆಗಳು ಮತ್ತು ದಾಖಲಾತಿ ಪುರಾವೆಗಳ ಮೂಲಕ ಪರಿಶೀಲಿಸಲಾಗಿದೆ, ಇದರಲ್ಲಿ ಸಿಸಿಟಿವಿ ದೃಶ್ಯಾವಳಿಗಳು, 70 ಕ್ಕೂ ಹೆಚ್ಚು ದೂರವಾಣಿ ಕರೆಗಳು ಮತ್ತು ಸನ್ಯಾಸಿನಿಯರು ಮತ್ತು ಅವರ ಪೋಷಕರ ನಡುವಿನ ಅನೇಕ ನೇರ ಭೇಟಿಗಳು ಸೇರಿವೆ. "ನಿಮ್ಮ ಮಕ್ಕಳು ವಯಸ್ಕರಾಗಿದ್ದಾಗ, ಅವರ ಜೀವನವನ್ನು ನಿಯಂತ್ರಿಸಲು ನೀವು ದೂರು ದಾಖಲಿಸಲು ಸಾಧ್ಯವಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿಯವರು ಆರೋಪಿಸಿದ್ದ ಪಕ್ಷಕ್ಕೆ ತಿಳಿಸಿದರು.
ನ್ಯಾಯಾಲಯದ ಆದೇಶದ ಮಾತುಗಳಲ್ಲಿ: "ಇಬ್ಬರು ವ್ಯಕ್ತಿಗಳು ಆಶ್ರಮ ಸೇರಿದಾಗಲೂ ವಯಸ್ಕರಾಗಿದ್ದರು ಮತ್ತು ಕೊಯಂಬತ್ತೂರಿನ ಈಶ ಫೌಂಡೇಶನ್‌ನಲ್ಲಿ ಮುಂದುವರಿಯಲು ತಮ್ಮ ಸ್ಪಷ್ಟ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ದೃಷ್ಟಿಯಿಂದ, ಹೇಬಿಯಸ್ ಕಾರ್ಪಸ್ ಅರ್ಜಿಯ ಉದ್ದೇಶವು ಸಮರ್ಪಕವಾಗಿ ಈಡೇರಿದೆ. ಹೈಕೋರ್ಟ್‌ನಿಂದ ಯಾವುದೇ ಹೆಚ್ಚಿನ ನಿರ್ದೇಶನಗಳ ಅಗತ್ಯವಿರಲಿಲ್ಲ."
ತೀರ್ಪನ್ನು ಸ್ವಾಗತಿಸಿರುವ ಮಾ ಮಾಯು ಮತ್ತು ಮಾ ಮತಿ ಅವರು, "ಸನ್ಯಾಸ ಜೀವನವನ್ನು ನಡೆಸುವ ನಮ್ಮ ಆಯ್ಕೆಯ ಪರವಾಗಿ ನಿಂತ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ. ನಾವು ಹುಟ್ಟಿದ ಕುಟುಂಬದ ಈ ವಿಚಾರಣೆಯು ನಮಗೆ ಅಪಾರವಾದ ನೋವನ್ನುಂಟುಮಾಡಿದೆ, ಆದರೆ ನಮ್ಮೊಂದಿಗೆ ನಿಂತಿದ್ದಕ್ಕಾಗಿ ನಾವು ಸದ್ಗುರುಗಳು ಮತ್ತು ಎಲ್ಲಾ ಈಶ ಸ್ವಯಂಸೇವಕರು ಮತ್ತು ಹಿತೈಷಿಗಳಿಗೆ ಕೃತಜ್ಞರಾಗಿರುತ್ತೇವೆ. ಅವರು ನಮಗೆ ಕುಟುಂಬಕ್ಕಿಂತ ಹೆಚ್ಚಿನವರು." ಎಂದು ಹಂಚಿಕೊಂಡಿದ್ದಾರೆ.
ಮಹಿಳೆಯರ ಆಯ್ಕೆಗಳಿಗಾಗಿ ಅವರನ್ನು ಅವಮಾನಿಸುವುದು ಮತ್ತು ಅಪರಾಧಿ ಭಾವನೆ ಹುಟ್ಟಿಸುವುದು
ಈ ಆರೋಪಗಳಲ್ಲಿ ಅತ್ಯಂತ ಕಳವಳಕಾರಿ ಅಂಶವೆಂದರೆ ಇಬ್ಬರು ವಯಸ್ಕ ಹೆಣ್ಣುಮಕ್ಕಳು (39 ಮತ್ತು 42 ವರ್ಷ ವಯಸ್ಸಿನವರು) ತಂದೆಯ ಆಜ್ಞೆಗೆ ತಲೆಬಾಗಬೇಕು ಎಂಬ ಪರೋಕ್ಷ ಸೂಚನೆ. ವಾಸ್ತವವಾಗಿ, ತಂದೆಯು ಈ ಆರೋಪಗಳನ್ನು ಮಾಡಿದ್ದು ಇದೇ ಮೊದಲನೆಯ ಬಾರಿಯಲ್ಲ. 2016 ರಲ್ಲಿ, ಅವರ ಪತ್ನಿ ಇದೇ ರೀತಿಯ ಪ್ರಕರಣವನ್ನು ದಾಖಲಿಸಿ ತನ್ನ ಹೆಣ್ಣುಮಕ್ಕಳಿಗೆ ತಲೆಕೆಡಿಸಲಾಗಿದೆ ಎಂದು ಆರೋಪಿಸಿದಾಗ, ಮದ್ರಾಸ್ ಉಚ್ಚ ನ್ಯಾಯಾಲಯ ಆ ಇಬ್ಬರು ಬ್ರಹ್ಮಚಾರಿಣಿಯರನ್ನು ಭೇಟಿಯಾಗಿ ಅವರು ತಮ್ಮ ಸ್ವಂತ ಇಚ್ಛೆಯಿಂದ ಈಶ ಯೋಗ ಕೇಂದ್ರದಲ್ಲಿದ್ದಾರೆ ಮತ್ತು ಅವರು ತಮ್ಮ ಮಾನಸಿಕ ಸ್ಥಿತಿಯಲ್ಲಿ ಸಂಪೂರ್ಣ ಸ್ವಸ್ಥರಾಗಿದ್ದಾರೆ ಎಂದು ಖಚಿತಪಡಿಸಿಕೊಂಡ ನಂತರ ಪ್ರಕರಣವನ್ನು ವಜಾಗೊಳಿಸಿತ್ತು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಯಾವಾಗಲೂ ಸಮಾನ ಮಹತ್ವವನ್ನು ನೀಡಲಾಗಿದೆ. ವಿಪರ್ಯಾಸವೆಂದರೆ ಈ ಇಡೀ ಘಟನೆಯು ದೈವಿಕ ಸ್ತ್ರೀತತ್ವವನ್ನು ಆಚರಿಸುವ ನವರಾತ್ರಿ ಹಬ್ಬದ ಹಿಂದಿನ ದಿನ ನಡೆದಿರುವುದು. ಇದು ಕೇವಲ ಅಸಂವೇದನಾಶೀಲವಾಗಿರುವುದು ಮಾತ್ರವಲ್ಲದೆ ಅತ್ಯಂತ ಅಸಮಂಜಸವೂ ಆಗಿದೆ.
ಈಶದಲ್ಲಿ, ಲಿಂಗದ ಆಧಾರದ ಮೇಲೆ ಮಹಿಳೆಯರ ಕುರಿತು ಅಭಿಪ್ರಾಯ ತಳೆಯುವುದಾಗಲಿ, ಅವರನ್ನು ಅಳೆಯುವುದಾಗಲಿ ಅಥವಾ ಯಾವುದೇ ತೆರನಾದ ತಾರತಮ್ಯವನ್ನು ಮಾಡಲಾಗುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ‘ಮೂಲಭೂತ ಸಂವಿಧಾನಾತ್ಮಕ ಹಕ್ಕುಗಳಾದ - ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯ’ದ ಉಲ್ಲಂಘನೆಯಿಂದಾಗಿ ಇಬ್ಬರು ಬ್ರಹ್ಮಚಾರಿಣಿಗಳು ಮತ್ತು ಈಶ ಫೌಂಡೇಶನ್ನಿನ ಉಳಿದೆಲ್ಲ ಸ್ವಯಂಸೇವಕರು ಈ ಸುಳ್ಳು ಆರೋಪಗಳಿಂದ ನಿಜವಾಗಿಯೂ ನೋವನ್ನು ಅನುಭವಿಸುವಂತಾಗಿದ್ದು,ಇದು ಈ ಆರೋಪಗಳ ಹಿಂದೆ ಯಾವ ರೀತಿಯ ಮನಃಸ್ಥಿತಿಗಳಿವೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಇವು ಪುರುಷಪ್ರಧಾನತೆ, ಮಹಿಳಾದ್ವೇಷಿ ಮತ್ತು ದಬ್ಬಾಳಿಕೆಯ ಮನಃಸ್ಥಿತಿಗಳಾಗಿವೆ.
ಖಾಸಗಿತನದ ಸಂಪೂರ್ಣ ಉಲ್ಲಂಘನೆ
ಪೊಲೀಸ್ ವಿಚಾರಣೆಯ ದಿನ ಈಶದಲ್ಲಿ ಮಹಾಲಯ ಅಮಾವಾಸ್ಯೆಯ ಗಂಭೀರವಾದ ಮತ್ತು ಭಕ್ತಿಪೂರ್ವಕ ಆಚರಣೆಗಳನ್ನು ನಡೆಸಲಾಗುತ್ತಿತ್ತು. ಮಹಾಲಯ ಅಮಾವಾಸ್ಯೆ ಭಾರತೀಯ ಸಂಸ್ಕೃತಿಯಲ್ಲಿ ಒಂದು ಮಹತ್ವದ ದಿನವಾಗಿದ್ದು, ಜನರು ತಮ್ಮ ಪೂರ್ವಜರನ್ನು ನೆನಪಿಸಿಕೊಂಡು ಗೌರವ ಸಲ್ಲಿಸುತ್ತಾರೆ. ಈ ಉದ್ದೇಶಕ್ಕಾಗಿ ಅನೇಕ ಅತಿಥಿಗಳು ಮತ್ತು ಸಂದರ್ಶಕರು ಈಶ ಯೋಗ ಕೇಂದ್ರದಲ್ಲಿ ಆ ದಿನ ಹಾಜರಿದ್ದರು. ಇಂತಹ ಮಹತ್ವದ ಸಂದರ್ಭದಲ್ಲಿ, ವಿಚಾರಣಾ ಆದೇಶ ಹೊರಡಿಸುವುದು ಮತ್ತು ಈಶ ಯೋಗ ಕೇಂದ್ರದಲ್ಲಿ ಜನರನ್ನು ವಿಚಾರಣೆ ಮಾಡುವುದು, ಅನೇಕ ಸಂದರ್ಶಕರನ್ನು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ತೀವ್ರವಾಗಿ ಕಳವಳಗೊಳಿಸಿತು, ಏಕೆಂದರೆ ಅವರು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಭಾವಿಸಿದರು.
ಸ್ಥಳೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಪುನರುಜ್ಜೀವನದ ಮೇಲೆ ದಾಳಿ
ಸ್ಥಳೀಯ ಸಾಂಸ್ಕೃತಿಕ ಆಚರಣೆಗಳು ಮತ್ತು ಸನಾತನ ಧರ್ಮವು ದೇಶದಲ್ಲಿ ಅನೇಕ ವರ್ಷಗಳಿಂದ ಒತ್ತಡ ಮತ್ತು ದಾಳಿಗೆ ಒಳಗಾಗಿವೆ. ಈಶ ಫೌಂಡೇಶನ್ ಮೇಲೆ ಸಂಪೂರ್ಣವಾಗಿ ನಿರಾಧಾರ ಆರೋಪಗಳನ್ನು ಹೊರಿಸಿದ್ದು ಇದೇ ಮೊದಲನೆಯ ಸಂದರ್ಭವಲ್ಲ. 3 ದಶಕಗಳಿಂದ ಧರ್ಮ, ಜಾತಿ, ರಾಷ್ಟ್ರೀಯತೆ ಅಥವಾ ಲಿಂಗವನ್ನು ಪರಿಗಣಿಸದೆ ವಿಶ್ವದಾದ್ಯಂತ ಒಂದು ಬಿಲಿಯನ್‌ಗಿಂತ ಹೆಚ್ಚು ಜನರಿಗೆ ಪರಿವರ್ತನೆ ಮತ್ತು ಯೋಗಕ್ಷೇಮಕ್ಕಾಗಿ ಯೋಗದ ಸಾಧನಗಳನ್ನು ನೀಡಲು ಈಶ ಫೌಂಡೇಶನ್ ಕಾರ್ಯನಿರ್ವಹಿಸಿದೆ. ಈ ಸಾಧನಗಳು ಒಳಗೊಳ್ಳುವಿಕೆಯ ಮತ್ತು ಸಾಮರಸ್ಯದ ಜಗತ್ತನ್ನು ಸೃಷ್ಟಿಸಲು ಆಧಾರವಾಗಿವೆ ಮತ್ತು ಈ ಸುಳ್ಳು ಆರೋಪಗಳನ್ನು ಮಾಡುವವರ ವಿಭಜನಕಾರಿ ಪ್ರಯತ್ನಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ ನಿಲ್ಲುತ್ತವೆ.
ಬಡವರೇ ಹೆಚ್ಚು ಸಂಕಷ್ಟ ಅನುಭವಿಸುವವರು
ಲಕ್ಷಾಂತರ ಈಶ ಸ್ವಯಂಸೇವಕರಿಗೆ, ಈ ಆರೋಪಗಳ ಅತ್ಯಂತ ನೋವಿನ ಭಾಗವೆಂದರೆ ಸ್ವಯಂಸೇವಕರ ಮೇಲೆ ಅದು ಬೀರುವ ಭಾವನಾತ್ಮಕ ಪರಿಣಾಮವಲ್ಲ. ಬದಲಾಗಿ, ಫೌಂಡೇಶನ್‌ನ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಅವಲಂಬಿಸಿರುವ ಗ್ರಾಮೀಣ ಬಡವರು ಮತ್ತು ಸಮಾಜದ ದುರ್ಬಲ ವರ್ಗಗಳ ಮೇಲೆ ಅದು ಬೀರುವ ಭಯಾನಕ ಪರಿಣಾಮವಾಗಿದೆ. ಏಕೆಂದರೆ ಫೌಂಡೇಶನ್ ಈ ಅತ್ಯಗತ್ಯ ಸಾಮಾಜಿಕ ಕಾರ್ಯದಿಂದ ತನ್ನ ಗಮನವನ್ನು ಬದಲಾಯಿಸಿ ನಿರರ್ಥಕ, ಕ್ಷುಲ್ಲಕ ಆರೋಪಗಳ ವಿರುದ್ಧ ಹೋರಾಡಬೇಕಾಗಿ ಬಂದಿರುವುದರಿಂದ, ಗ್ರಾಮೀಣ ಭಾರತದಲ್ಲಿ ಉಚಿತ ಆರೋಗ್ಯ ಸೇವೆ ಪಡೆದ 5೦ ಲಕ್ಷ ರೋಗಿಗಳು ಅಥವಾ ಈಶದ ಕೃಷಿ, ಮಣ್ಣು ಮತ್ತು ನೀರಿನ ಯೋಜನೆಗಳಿಂದ ಪ್ರಯೋಜನ ಪಡೆದ 2,25,000 ರೈತರ ಜೀವನವು ಪ್ರಭಾವಿತವಾಗಿದೆ.