ದೇಹವೂ ಅಲ್ಲ, ಮನಸ್ಸೂ ಅಲ್ಲ
ಸದ್ಗುರುಗಳು ಈಶಾ ಕ್ರಿಯಾ ಅಭ್ಯಾಸದ ಸೂಕ್ಷ್ಮತೆಗಳ ಬಗ್ಗೆ ವಿವರಿಸುತ್ತ “ನಾನೀ ದೇಹವಲ್ಲ, ನಾನೀ ಮನಸೂ ಅಲ್ಲ” ಎಂಬುದು ಕೇವಲ ಒಂದು ಘೋಷಣೆ, ತತ್ವ ಅಥವಾ ಸಿದ್ಧಾಂತವಲ್ಲ, ಆದರೆ ಯಾರೇ ಆಗಲಿ ಉಸಿರಾಟದ ಬಗ್ಗೆ ಕೂಡಲೇ ಪ್ರಜ್ಞಾವಂತರಾಗಲು ಸುಗಂಧವನ್ನು ಬೆರೆಸಿದಂತೆ ಎಂಬುದನ್ನು ಹೇಳುತ್ತಾರೆ.
ಪ್ರಶ್ನೆ: ದೈನಂದಿನದ ಶಾಂಭವಿ ಮತ್ತು ಈಶಾ ಕ್ರಿಯಾ ಅಭ್ಯಾಸದ ಮೂಲಕ, ‘ನನ್ನ ದೇಹ ಮತ್ತು ಮನಸ್ಸು’, ನಾನಲ್ಲ ಎಂಬುದನ್ನು ಅನುಭವಿಸಲು ಪ್ರಾರಂಭಿಸುತ್ತಿದ್ದೇನೆ. ನನ್ನ ದೇಹ ಮತ್ತು ಮನಸ್ಸನ್ನು ನಾನ್ನಿಂದ ಸದಾ ದೂರವಿಡುವುದು ಹೇಗೆ?
ಸದ್ಗುರು: ಈಶಾ ಕ್ರಿಯಾ ಅಭ್ಯಾಸ ಮಾಡುವಾಗ, “ನಾನೀ ದೇಹವಲ್ಲ, ನಾನೀ ಮನಸೂ ಅಲ್ಲ” ಎಂದು ನೀವು ಹೇಳುವುದು ಒಂದು ತತ್ವ ಅಥವಾ ಸಿದ್ಧಾಂತವಲ್ಲ. ಇದು ನಿಮ್ಮೊಳಗೆ ಕೂಗು ಹಾಕುತ್ತಲೇ ಇದ್ದು ಒಂದು ದಿನ ಮಾರ್ಪಾಡು ಮಾಡಿಕೊಳ್ಳುವ ಒಂದು ಘೋಷಣೆಯಲ್ಲ. ಇದು ನೀವು ನಿಮ್ಮ ಉಸಿರಿಗೆ ಬೆರೆಸುವ ಒಂದು ಸೂಕ್ಷ್ಮ ನೆನಪು. “ನಾನೀ ದೇಹವಲ್ಲ, ನಾನೀ ಮನಸೂ ಅಲ್ಲ” ಎಂದು ಸುಮ್ಮನೆ ಉಪಯೋಗಿಸಿ ನಿಮ್ಮನ್ನು ನೀವು ಮಾನಸಿಕವಾಗಿ ಅಸ್ವಸ್ಥರಾಗಿಸಿಕೊಳ್ಳಬೇಡಿ. ನೀವು ನಿಮ್ಮ ಉಸಿರಾಟಕ್ಕೆ ಒಂದು ನಿರ್ದಿಷ್ಟ ಅಂಶವನ್ನು ಬೆರೆಸುತ್ತಿದ್ದೀರಿ. ಇಲ್ಲದಿದ್ದರೆ, ನಿಮ್ಮ ಉಸಿರನ್ನು ಗಮನಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಪ್ರಸ್ತುತ, ನೀವು ಗಾಳಿಯ ಚಲನೆಯಿಂದ ಉಂಟಾಗುವ ಸಂವೇದನೆಗಳನ್ನು ಮಾತ್ರ ಗಮನಿಸಬಹುದು, ಆದರೆ ಉಸಿರಾಟನ್ನೇ ಅಲ್ಲ.
ನೀವು ಉಸಿರೆಳೆದುಕೊಳ್ಳುವಾಗ, ಉಚ್ಛ್ವಾಸ ಮಾತ್ರ ಆಗಬೇಕಾಗಿಲ್ಲ - ಭಾಗಶಃ ನಿಶ್ವಾಸವೂ ಸಂಭವಿಸುತ್ತಿರಬಹುದು. ಅಂತೆಯೇ, ನೀವು ಉಸಿರನ್ನು ಬಿಡುವಾಗ, ನಿಶ್ವಾಸ ಮಾತ್ರ ಆಗಬೇಕಾಗಿಲ್ಲ ಭಾಗಶಃ ಉಚ್ಛ್ವಾಸವೂ ಸಹ ಸಂಭವಿಸುತ್ತಿರಬಹುದು. ಉಸಿರಾಟದ ರೀತಿಯನ್ನು ಗಮನಿಸದ ಹೊರತು ನೀವು ಇದನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಅನೇಕ ವಿಧಗಳಲ್ಲಿ - ಶಾರೀರಿಕವಾಗಿ, ಉಸಿರು ನಿಮ್ಮ ಜೀವನದ ಆಧಾರವಾಗಿದ್ದರೂ ಹೆಚ್ಚಿನ ಮನುಷ್ಯರು ತಮ್ಮ ಉಸಿರಾಟವನ್ನು ನಿಜವಾಗಿಯೂ ಅನುಭವಿಸಿಲ್ಲ. ಕೇವಲ ಉಸಿರಾಟದ ಸಂವೇದನೆಗಳ ಬಗ್ಗೆ ಜಾಗೃತರಾದವರು, ಎಲ್ಲಾ ರೀತಿಯ ಪರಿವರ್ತನೆಗಳನ್ನು ಪ್ರತಿಪಾದಿಸುತ್ತಾರೆ ಮತ್ತು ಅದು ನಿಜ. ಏಕೆಂದರೆ ನಿಮ್ಮ ಸಂವೇದನೆಗಳು ನೀವು ಯಾರೆಂಬುದರ ಹೊರಗಿನ ಪದರವಾಗಿದೆ. ಸಂವೇದನೆಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮೂಲಭೂತವಾದದ್ದು. ನೀವು ಏನೇ ಸ್ಪರ್ಶಿಸಿದರೂ, ನೀವು ಕುಳಿತುಕೊಳ್ಳಿ, ನಿಂತುಕೊಳ್ಳಿ, ಅಲ್ಲಿ ಸಂವೇದನೆಗಳಿವೆ. ಉಸಿರಾಟವು ಹೆಚ್ಚು ಗಹನ ಮತ್ತು ಸೂಕ್ಷ್ಮ ಆಯಾಮವಾಗಿದ್ದು ಅದು ನಿಮ್ಮ ಅನುಭವಕ್ಕೆ ಸುಲಭವಾಗಿ ಬರುವುದಿಲ್ಲ.
ಉಸಿರಾಟವನ್ನು ನಿಲ್ಲಿಸುವುದು
ನಾವು ಕೂರ್ಮ ನಾಡಿ ಎಂಬ ಅರ್ಥದಲ್ಲಿ ಉಸಿರಾಟವೆಂದು ಹೇಳಿದಾಗ, ನಾವು ಆಮ್ಲಜನಕ-ಇಂಗಾಲದ ಡೈಆಕ್ಸೈಡ್ ವಿನಿಮಯದ ಬಗ್ಗೆ ಮಾತನಾಡುತ್ತಿಲ್ಲ. ಅದು ಶ್ವಾಸದ ಪರಿಣಾಮವಾಗಿ ನಡೆಯುತ್ತಿದೆ. ಗಾಳಿ ಒಳಬರುವ ಮತ್ತು ಹೊರಹೋಗುವ ವಹಿವಾಟಿನ ಜೊತೆಗೆ, ಶಾರೀರಿಕ ಪ್ರಕ್ರಿಯೆ ನಡೆಯಲು ಮತ್ತೊಂದು ಹಂತದ ವಹಿವಾಟಿನ ಅಗತ್ಯವಿದೆ. ಒಬ್ಬ ವ್ಯಕ್ತಿಯು ವೈದ್ಯಕೀಯವಾಗಿ ಸತ್ತ ನಂತರವೂ -ಗಾಳಿಯ ಚಲನೆ, ಹೃದಯ ಬಡಿತ ಮತ್ತು ಮೆದುಳಿನ ಚಟುವಟಿಕೆ ನಿಂತುಹೋಗಿರುತ್ತದೆ -ಆದರೆ ಕೂರ್ಮ ನಾಡಿಯ ಪ್ರಕಾರ ಆ ವ್ಯಕ್ತಿ ಇನ್ನೂ ಸ್ವಲ್ಪ ಸಮಯದವರೆಗೆ ಉಸಿರಾಡುತ್ತಿರುತ್ತಾರೆ . ಆ ಪ್ರಕ್ರಿಯೆಯು ಇನ್ನೂ ನಡೆಯುತ್ತಿದೆ, ಆದರೆ ಅದಕ್ಕೆ ಗಾಳಿಯಲ್ಲಿ ಎಳೆಯಲು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ.ಇದು ಒಂದು ಹಳೆಯ ಕೊಳವೆಯಂತೆ ಇನ್ನೂ ಪಂಪ್ ಮಾಡುತ್ತಲಿದೆ, ಆದರೆ ದ್ರವವು ಹರಿಯುವುದಿಲ್ಲ, ಏಕೆಂದರೆ ಸ್ವಲ್ಪ ಸೋರಿಕೆ ಆಗುತ್ತಿದೆ. ಅಂತೆಯೇ, ಕೂರ್ಮ ನಾಡಿ ಪ್ರಕ್ರಿಯೆಯು ಇನ್ನೂ ಮುಂದುವರೆದಿದೆ, ಆದರೆ ಆಮ್ಲಜನಕ-ಇಂಗಾಲದ ಡೈಆಕ್ಸೈಡ್ ವಿನಿಮಯವು ಕೊನೆಗೊಂಡಿದೆ. ಸ್ಟಾಕ್ ಎಕ್ಸ್ಚೇಂಜ್ ಮುಚ್ಚುತ್ತದೆ ಎಂದು ಭಾವಿಸೋಣ - ಹೆಚ್ಚಿನ ಜನರ ತಿಳುವಳಿಕೆಯಲ್ಲಿ, ಇಡೀ ಆರ್ಥಿಕತೆಯು ಮುಗಿದಂತೆ, ಆದರೆ ನೀವು ಇನ್ನೂ ಸ್ಥಳೀಯವಾಗಿ ಬ್ರೆಡ್ ಖರೀದಿಸಬಹುದು. ಬಹುಶಃ ನೀವು ನಗದು ರೂಪದಲ್ಲಿ ಪಾವತಿಸದೇ ಇರಬಹುದು, ಆದರೆ ಅಳೆಯಬಹುದಾದ ಮಟ್ಟದಲ್ಲಿಲ್ಲದಿದ್ದರೂ ಆರ್ಥಿಕತೆಯು ಇನ್ನೂ ಮುಂದುವರಿಯುತ್ತಿದೆ. ಅಂತೆಯೇ, ಗಾಳಿಯ ವಿನಿಮಯವು ಈಗಾಗಲೇ ನಿಂತುಹೋಗಿದ್ದರೂ ಕೂರ್ಮಾ ನಾಡಿ ಇನ್ನೂ ಜೀವಂತವಿರಬಹುದು.

ನಿಮ್ಮ ಉಸಿರಿಗೆ ಸುಗಂಧವನ್ನು ಬೆರೆಸುವುದು
“ನಾನೀ ದೇಹವಲ್ಲ, ನಾನೀ ಮನಸೂ ಅಲ್ಲ” ಎಂದು ಸುಮ್ಮನೆ ಘೋಷಣೆಯಂತೆ ಬಳಸಬೇಡಿ -ಅದು ಹಾಗೆ ಕೆಲಸ ಮಾಡುವುದಿಲ್ಲ. ಕೂರ್ಮ ನಾಡಿ ಅಥವಾ ಉಸಿರಿಗೆ ಜಾಗೃತಿ ಮೂಡಿಸಲು ಇದನ್ನು ನಿಮಗೆ ಸಹಾಯವಾಗಿ ನೀಡಲಾಗಿದೆ. ಘೋಷಣೆಗಳನ್ನು ಕೂಗುವುದು ಬೀದಿಯಲ್ಲಿ ಜನಸಂದಣಿಯನ್ನು ಕುಶಲತೆಯಿಂದ ನಿರ್ವಹಿಸುವ ಒಂದು ಮಾರ್ಗ. ಅದರಿಂದ ಆಂತರ್ಯದಲ್ಲಿ ಏನನ್ನೂ ಮಾಡಲಾಗುವುದಿಲ್ಲ. ನಾನು ಉತ್ತರ ಭಾರತದ ಹೊಸ ಸ್ಥಳಗಳಿಗೆ ಹೋದಾಗ, ಜನರು “ಸದ್ಗುರು ಮಹಾರಾಜ್ ಕಿ ಜೈ!” ಎಂದು ಕೂಗಲು ಬಯಸುವುದು ಬಹಳ ಸಾಮಾನ್ಯ. ನಾನು ತಕ್ಷಣ ಅವರನ್ನು ನಿಲ್ಲಿಸಿ ಹೇಳಿತ್ತೇನೆ, “ಮೊದಲು, ಒಂದು ಘೋಷಣೆ ಬರುತ್ತದೆ, ನಂತರ ಒಂದು ಧ್ವಜ, ನಂತರ ಲಾಂಛನ, ನಂತರ ನೀವು ನಿಮ್ಮದೇ ಆದ ರಾಷ್ಟ್ರವಾಗುತ್ತೀರಿ. ತದನಂತರ ನೀವು ರಾಷ್ಟ್ರೀಯ ಪಕ್ಷಿಯನ್ನು ಹೊಂದಿರುತ್ತೀರಿ!"
ನಿಮ್ಮ ಉಸಿರನ್ನು ಅರಿವಿಗೆ ತರಲು “ನಾನೀ ದೇಹವಲ್ಲ, ನಾನೀ ಮನಸೂ ಅಲ್ಲ” ಎನ್ನುವುದು ಬಹಳ ಸೂಕ್ಷ್ಮ ರೀತಿಯಲ್ಲಿ ಆಗಬೇಕು. ಇದು ಹೇಗೆಂದರೆ, ಗಾಳಿ ಯಾವ ಕಡೆ ಚಲಿಸುತ್ತಿದೆ ಎಂದು ತಿಳಿಯಲು ಧೂಪವನ್ನು ಹಚ್ಚಿದಂತೆ. ಇಲ್ಲದಿದ್ದರೆ ನಿಮಗೆ ತಿಳಿಯುವುದಿಲ್ಲ, ಅದು ಸೂಕ್ಷ್ಮವಾಗಿ ಚಲಿಸುತ್ತಿದೆ
ಸಂಪಾದಕರ ಟಿಪ್ಪಣಿ: ಯೋಗ ವಿಜ್ಞಾನಗಳ ಸಮಯಾತಿತವಾದ ಜ್ಞಾನದಲ್ಲಿ ಬೇರೂರಿರುವ ಈಶಾ ಕ್ರಿಯಾ ಎಂಬುದು ಸದ್ಗುರುಗಳು ರೂಪಿಸಿರುವ ಸರಳ ಮತ್ತು ಪ್ರಬಲ ಪ್ರಕ್ರಿಯೆ. ಸೂಚನಾ ವೀಡಿಯೊ ಮತ್ತು ಡೌನ್ಲೋಡ್ ಮಾಡಬಹುದಾದ ಸೂಚನೆಗಳೊಂದಿಗೆ ಮಾರ್ಗದರ್ಶಿ ಧ್ಯಾನವಾಗಿ ಉಚಿತವಾಗಿ ಲಭ್ಯವಿದೆ ಅಥವಾ ಜಾಗತಿಕವಾಗಿ ನಡೆಸಲಾದ ಉಚಿತ ತಲ್ಲೀನಗೊಳಿಸುವ ಕಾರ್ಯಾಗಾರಗಳ ಮೂಲಕ ಲಭ್ಯವಿದೆ, ದಿನಕ್ಕೆ ಕೇವಲ 12 ನಿಮಿಷ ನೀಡಲು ಸಿದ್ಧರಿರುವ ಯಾರೊಬ್ಬರ ಜೀವನವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಸದ್ಗುರು ಆಪ್ ಮತ್ತು ಆನ್ಲೈನ್ನಲ್ಲಿಲಭ್ಯವಿದೆ.
ಈ ಲೇಖನದ ಆವೃತ್ತಿಯನ್ನು ಮೂಲತಃ ಈಶಾ ಫಾರೆಸ್ಟ್ ಫ್ಲವರ್ ಜೂನ್ 2017 ರಲ್ಲಿ ಪ್ರಕಟಿಸಲಾಯಿತು.