ಪ್ರಶ್ನೆ: ಯಾರನ್ನಾದರೂ ಭೇಟಿಯಾದಾಗ ಅವರೊಡನೆ ಮುಕ್ತವಾಗಿ ಮಾತನಾಡಲು ನನಗೆ ತುಂಬ ಆತಂಕ, ತಳಮಳವಾಗುತ್ತದೆ. ಇದೊಂದು ಮಾನಸಿಕ ಸಮಸ್ಯೆಯೋ ಅಥವಾ ಇದು ಕೇವಲ ನಾನು ಸಮಾಜಕ್ಕೆ ಹೊಂದಿಕೊಳ್ಳಲು ಯೋಗ್ಯನಲ್ಲ ಎಂರ್ಥವೋ? ನಾನೇನು ಮಾಡಲಿ?

Register for IE with Sadhguru

ಸದ್ಗುರು: "ಯೋಗ" ಎಂಬ ಶಬ್ದವನ್ನು ನೀವು ಖಂಡಿತವಾಗಿಯೂ ಕೇಳಿರುತ್ತೀರಿ. ನಾನು ಯೋಗವೆಂದು ಹೇಳಿದಾಗ ಜನರು ತಕ್ಷಣ ದೇಹವನ್ನು ಕೆಲವು ಭಂಗಿಗಳಲ್ಲಿ ತಿರುಚುವುದೆಂದು ಭಾವಿಸುತ್ತಾರೆ. ಇಲ್ಲ, ಯೋಗವೆನ್ನುವ ಪದದ ಅರ್ಥ “ಐಕ್ಯತೆ” ಎಂದು. ಜೀವನದ ಬಗೆಗಿನ ನಿಮ್ಮ ಅನುಭವದ ಪ್ರಕಾರ, ನೀವಿದ್ದೀರ ಮತ್ತು ಜಗತ್ತು ಎನ್ನುವುದಿದೆ. ಆದ್ದರಿಂದ ಅದು ನಿಜವಾಗಿಯೂ ನೀವು ಮತ್ತು ನಿಮ್ಮ ಪ್ರತಿಯಾಗಿ ವಿಶ್ವವಾಗಿದೆ. ನೀವು ವಿಶ್ವದ ಎದುರು ಸ್ಪರ್ಧೆಗಿಳಿಯುವುದು ಒಂದು ಕೆಟ್ಟ ಸ್ಪರ್ಧೆ. ಈ ಸ್ಪರ್ಧೆಯನ್ನು ಗೆಲ್ಲುವ ಯಾವುದೇ ಅವಕಾಶ ನಿಮಗಿದೆ ಎಂದು ನಿಮಗನಿಸುತ್ತದೆಯೆ? ವಿಶ್ವದ ಜೊತೆ ಸ್ಪರ್ಧೆಗಿಳಿಯಬೇಡಿ.

 

ಇದಕ್ಕಾಗಿಯೇ ನಾವು “ಯೋಗ”ವೆಂಬ ಮಾರ್ಗವನ್ನು ಕಂಡುಕೊಂಡೆವು. ಯೋಗ ಅಥವಾ ಐಕ್ಯತೆ ಎನ್ನುವುದರ ಅರ್ಥ ನೀವು ಪ್ರಜ್ಞಾಪೂರ್ವಕವಾಗಿ ನಿಮ್ಮ ವ್ಯಕ್ತಿತ್ವದ ಗಡಿಗಳನ್ನು ಅಳಿಸಿಹಾಕುವುದು. ಹೀಗಾದಾಗ ನೀವು ಮತ್ತು ವಿಶ್ವವೆನ್ನುವುದು ಏನೂ ಇರುವುದಿಲ್ಲ – ಇವೆರಡೂ ಸಹ ಒಂದೇ ಎಂದನಿಸುತ್ತದೆ. ನೀವು ಸ್ವಲ್ಪ ಯೋಗವನ್ನು ಮಾಡಬೇಕಾಗುತ್ತದೆ, ಇಲ್ಲದಿದ್ದರೆ ನಿಮ್ಮ ಮನಸ್ಸು ಎಲ್ಲಾ ರೀತಿಯ ಕಲ್ಪನೆಗಳು, ಭಾವನೆಗಳು ಮತ್ತು ಅಭಿಪ್ರಾಯಗಳಿಂದ ವಕ್ರವಾಗುತ್ತದೆ. 

ನಿಮ್ಮ ಶರೀರ, ಶರೀರದ ರಾಸಾಯನಿಕ ಪ್ರಕ್ರಿಯೆಗಳು, ಮಾನಸಿಕ ಅಸ್ಥಿರತೆಗಳು ಮತ್ತು ಶಕ್ತಿಗಳನ್ನು ಹೇಗೆ ನಿರ್ವಹಿಸಬೇಕೆನ್ನುವುದನ್ನು ಸಾರುವ ಒಂದಿಡೀ ವಿಜ್ಞಾನ ಮತ್ತು ತಂತ್ರಜ್ಞಾನವೇ ಇದೆ – ಅದೇ ಯೋಗ. ನೀವಿದನ್ನು ಒಂದು ನಿರ್ದಿಷ್ಟ ಮಟ್ಟಕ್ಕೆ ತಂದರೆ, ಯಾರು ಬಂದರೂ ಸಹ ನೀವು ಆರಾಮವಾಗಿರುತ್ತೀರಿ.

Register for IE with Sadhguru

ನೀವದನ್ನು ಸ್ವಲ್ಪ ಮುಕ್ತಗೊಳಿಸಿದಾಗ, ನೀವು ನಿಮ್ಮ ವ್ಯಕ್ತಿತ್ವದ ಗಡಿಗಳನ್ನು ಅಳಿಸಿಹಾಕಿದಾಗ, ಅದು ತುಂಬ ಸುಲಭವಾಗುತ್ತದೆ ಏಕೆಂದರೆ ನೀವಿಲ್ಲಿ ಕುಳಿತಾಗ ನಿಮ್ಮ ಪಕ್ಕದಲ್ಲಿರುವ ವ್ಯಕ್ತಿಯನ್ನು ನಿಮ್ಮದೇ ಒಂದು ಭಾಗವಾಗಿ ನೋಡುತ್ತೀರ. ಅವರು ಗಂಡಸೋ, ಹೆಂಗಸೋ, ಮಗುವೋ ಅಥವಾ ಪ್ರಾಣಿಯೋ, ಅದು ನಿಮಗೆ   ಸಮಸ್ಯೆಯಾಗುವುದಿಲ್ಲ. ನೀವು ನಿಮ್ಮ ಗಡಿಗಳನ್ನು ತೆರೆದಿರುವ ಕಾರಣ ನೀವು ಎಲ್ಲದರೊಡನೆ ಸಂಪೂರ್ಣವಾಗಿ ಸಂವಹಿಸುತ್ತೀರ. ನೀವು ನಿಮ್ಮ ಗಡಿಗಳನ್ನು ಗಟ್ಟಿಮಾಡಿಕೊಂಡಾಗ ಮಾತ್ರ ನಿಮಗೆ ಯಾವಾಗಲೂ ಸಮಸ್ಯೆಗಳಿರುತ್ತವೆ. ಅದೊಂದು ಗಂಡಸಾಗಿದ್ದರೆ, ಒಂದು ರೀತಿಯ ಸಮಸ್ಯೆ. ಅದೊಂದು ಹೆಂಗಸಾಗಿದ್ದರೆ, ಇನ್ನೊಂದು ರೀತಿಯ ಸಮಸ್ಯೆ.

ನಿಮ್ಮನ್ನು ನೀವು ಒಂದು ಸಲೀಸಾದ ಸ್ಥಿತಿಗೆ ತಂದುಕೊಳ್ಳಲು ಕೆಲಸ ಮಾಡಬೇಕಾದಂತಹ ಸಮಯವಿದು - ಕೇವಲ ಇತರರೊಂದಿಗೆ ಮಾತ್ರವಲ್ಲ, ಜೀವನದೊಂದಿಗೆ ಸಹ. ನೀವಾಗಿರುವ ಜೀವವು ಆರಾಮವಾಗಿರಬೇಕು. ನೀವು ಸಲೀಸಾಗಿಲ್ಲದಿದ್ದರೆ, ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ನೀವೆಂದೂ ಕಂಡುಕೊಳ್ಳುವುದಿಲ್ಲ.

 

ಪ್ರತಿಯೊಬ್ಬರಲ್ಲೂ ಒಂದು ವಿಶಿಷ್ಟವಾದ ಪ್ರತಿಭೆ ಇರುತ್ತದೆ. ಆದರೆ 99 ಪ್ರತಿಶತದಷ್ಟು ಜನ ತಮ್ಮೊಳಗಿನ ಅಸಾಧಾರಣ ಪ್ರತಿಭೆಯನ್ನು ಎಂದೂ ಸಹ ಕಂಡುಕೊಳ್ಳದೇ ಬದುಕಿ ಸಾಯುತ್ತಾರೆ. ಅದು ತೆರೆದುಕೊಳ್ಳಬೇಕೆಂದರೆ, ನಿಮ್ಮೊಳಗಿನ ನಿಜವಾದ ಸಾಧ್ಯತೆಯು ಅರಳಬೇಕಿದ್ದರೆ, ನಿಮ್ಮ ಜೀವನವು ಸಲೀಸಾದ ಸ್ಥಿತಿಗೆ ಬರಬೇಕು. 

 

ನಿಮ್ಮ ಶರೀರ, ಶರೀರದ ರಾಸಾಯನಿಕ ಪ್ರಕ್ರಿಯೆಗಳು, ಮಾನಸಿಕ ಅಸ್ಥಿರತೆಗಳು ಮತ್ತು ಶಕ್ತಿಗಳನ್ನು ಹೇಗೆ ನಿರ್ವಹಿಸಬೇಕೆನ್ನುವುದನ್ನು ಸಾರುವ ಒಂದಿಡೀ ವಿಜ್ಞಾನ ಮತ್ತು ತಂತ್ರಜ್ಞಾನವೇ ಇದೆ – ಅದೇ ಯೋಗ. ನೀವಿದನ್ನು ಒಂದು ನಿರ್ದಿಷ್ಟ ಮಟ್ಟಕ್ಕೆ ತಂದರೆ, ಯಾರು ಬಂದರೂ ಸಹ ನೀವು ಆರಾಮವಾಗಿರುತ್ತೀರಿ. ತಳಮಳದಲ್ಲಿದ್ದಾಗ ಎಲ್ಲವೂ ವಿರೂಪಗೊಳ್ಳುತ್ತದೆ. ಹಾಗಾಗಿ, ಆರಾಮದಿಂದಿರುವುದು ಬಹಳ ಮುಖ್ಯ, ಇಲ್ಲವಾದಲ್ಲಿ ನೀವು ಜೀವನವನ್ನು ಅದಿರುವ ರೀತಿಯಲ್ಲಿ ಅನುಭವಿಸುವುದಿಲ್ಲ. 

ಸಂಪಾದಕರ ಟಿಪ್ಪಣಿ:  Inner Engineering Completion ಸದ್ಗುರುಗಳು ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮದ ಮುಕ್ತಾಯವನ್ನು ಬೆಂಗಳೂರಿನಲ್ಲಿ ಡಿಸೆಂಬರ್ 15, 16, 2018ರಂದು ನಡೆಸಿಕೊಡಲಿದ್ದಾರೆ. ಜೀವನವನ್ನು ಪರಿವರ್ತಿಸುವ ಶಾಂಭವಿ ಮಹಾಮುದ್ರ ಕ್ರಿಯೆಯನ್ನು ನೇರವಾಗಿ ಸದ್ಗುರುಗಳಿಂದ ಕಲಿಯಲು ಇದೊಂದು ಸದವಕಾಶ. ಈ ತಕ್ಷಣವೇ ನೋಂದಾಯಿಸಿಕೊಳ್ಳಿ ಮತ್ತು ವಿಶೇಷ ರಿಯಾಯಿತಿಯನ್ನು ಪಡೆಯಿರಿ, ಅಕ್ಟೋಬರ್ 20, 2018ರ ವರೆಗೆ ರಿಯಾಯಿತಿ ಲಭ್ಯ.

 

Register for IE with Sadhguru