ಮಹಾತ್ಮರನ್ನು ನೆನೆಯುತ್ತಾ..
ಮಹಾತ್ಮ ಗಾಂಧಿಯವರ ಉದಾಹರಣೆಯನ್ನು ಬಳಸಿ ಸದ್ಗುರುಗಳು, ನಮ್ಮ ಜೀವನದಲ್ಲಿ ಬದ್ಧತೆಯ ಮಹತ್ವವನ್ನು ವಿವರಿಸುತ್ತಾರೆ.
ಸದ್ಗುರು: ಜಗತ್ತಿನಲ್ಲಿ ಊಹಿಸಲೂ ಅಸಾಧ್ಯವಾದ ಕೆಲಸಗಳನ್ನು ಕೇವಲ ಬದ್ದತೆಯಿಂದ ಮಾಡಲಾಗತ್ತದೆ. ಇದಕ್ಕೆ ಒಂದು ಮಹತ್ತಾದ ಉದಾಹರಣೆ ಎಂದರೆ ಮಹಾತ್ಮ ಗಾಂಧಿಯವರು. ನೀವು ಸರಿಯಾಗಿ ಗಮನಿಸಿದರೆ, ಅವರು ಹೆಚ್ಚು ಪ್ರತಿಭಾವಂತರಾಗಿರಲಿಲ್ಲ, ಬೇರಾವುದೇ ವಿಶೇಷ ಗಣಗಳು ಅವರಲ್ಲಿ ಇರಲಿಲ್ಲ. ತಮ್ಮ ಬಾಲ್ಯಾವಸ್ಥೆಯಲ್ಲಿ, ಅಪ್ರತಿಮ ಸಾಧನೆಗಾದ ಯಾವದೇ ಲಕ್ಷಣ ಅವರಲ್ಲಿರಲಿಲ್ಲ. ಅವರು ಅಸಾಧಾರಣ ಬುದ್ಧಿವಂತರೇನೂ ಆಗಿರಲಿಲ್ಲ. ಅವರು ಕಲಾವಿದರೋ, ವಿಜ್ಞಾನಿಯೋ ಅಥವಾ ಉತ್ತಮ ವಕೀಲರೋ ಆಗಿರಲಿಲ್ಲ. ಅವರು ಭಾರತದಲ್ಲಿ ನ್ಯಾಯವಾದಿಯಾಗಿ ಅಭ್ಯಾಸ ಯಶಸ್ವಿಯಾಗಿ ಮಾಡಲು ಸಾಧ್ಯವಾಗದ ಕಾರಣ, ಉತ್ತಮ ಅವಕಾಶಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದರು. ಅಲ್ಲಿಯೂ ಕೂಡ ಅಷ್ಟೇನೂ ಯಶಸ್ಸನ್ನು ಕಂಡಿರಲಿಲ್ಲ. ಆದರೆ ಅವರು ತಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ವಿಷಯದ ಕರಿತು ಬದ್ದತೆಯನ್ನು ತೋರಿದರು. ಅವರು ಒಂದು ವಿಚಾರದಲ್ಲಿ ಎಷ್ಟು ಬದ್ಧತೆಯನ್ನು ತೋರಿದರೆಂದರೆ, ಅವರು ಮಹಾತ್ಮರೇ ಆದರು.
ಭಾರತದ ನ್ಯಾಯಾಲಯದಲ್ಲಿ ತಮ್ಮ ಮೊದಲ ಪ್ರಕರಣದ ಬಗ್ಗೆ ವಾದಿಸಿದ ಬಗ್ಗೆ ಅವರು ಒಂದು ಕಡೆ ಬರೆದದ್ದು ನನಗೆ ನೆನಪಿದೆ: ತನ್ನ ವಾದವನ್ನು ಮಂಡಿಸಲು ಮುಂದಾದಾಗ, ಹಟಾತ್ತನೆ, ಒಮ್ಮೆಲೆ ಅವರನ್ನು ನಿರಾಶಾ ಮನೋಭಾವ ಆವರಿಸಿತು. ಈ ವ್ಯಕ್ತಿ ಮಹಾತ್ಮಾ ಗಾಂಧಿಯವರೇ? ಆದರೆ ಅದೇ ವ್ಯಕ್ತಿ ಮುಂದೆ ಲಕ್ಷಾಂತರ ಜನರನ್ನು ಮುನ್ನಡೆಸುವಂತಾದರು. ಒಂದೇ ಒಂದು ಜೀವನದ ಘಟನೆಯಿಂದ, ತಮ್ಮ ಎಲ್ಲಾ ಗುರುತಿಸಿಕೊಳ್ಳುವಿಕೆಯಿಂದ ಹೊರಬರುವಂತಾಯಿತು.
ಅವರು ತಮ್ಮ ಜೀವನೋಪಾಯಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದರು ಮತ್ತು ಅವರ ವಕೀಲ ವೃತ್ತಿ ತಕ್ಕ ಮಟ್ಟಕ್ಕೆ ಸರಿಯಾಗಿಯೇ ಸಾಗುತ್ತಿತ್ತು. ಒಂದು ದಿನ ಅವರು ಪ್ರಥಮ ದರ್ಜೆ ಟಿಕೆಟ್ ಖರೀದಿಸಿ, ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಹತ್ತಿದ ನಂತರದ ನಿಲ್ದಾಣದಲ್ಲಿ, ದಕ್ಷಿಣ ಆಫ್ರಿಕಾದ ಬಿಳಿ ಮನುಷ್ಯನೊಬ್ಬ ಪ್ರವೇಶಿಸಿದನು. ಕಂದು ಚರ್ಮದ ವ್ಯಕ್ತಿಯು ಪ್ರಥಮ ದರ್ಜೆಯಲ್ಲಿ ಕುಳಿತುಕೊಳ್ಳುವುದನ್ನು ಈ ವ್ಯಕ್ತಿ ಇಷ್ಟಪಡಲಿಲ್ಲ, ಅವನು ಟಿ ಸಿ ಯನ್ನು ಕರೆದನು. ಆಗ ಟಿ ಸಿ, "ಹೊರಕ್ಕೆ ಹೋಗು!" ಎನ್ನಲು ಮಹಾತ್ಮ ಗಾಂಧಿಯವರು, “ನನ್ನ ಬಳಿ ಪ್ರಥಮ ದರ್ಜೆ ಟಿಕೆಟ್ ಇದೆ” ಎಂದು ಹೇಳಿದರು.
"ಇದು ಅಪ್ರಸ್ತುತ, ಮೊದಲು ಹೊರಕ್ಕೆ ಹೋಗು."
“ಇಲ್ಲ, ನನ್ನ ಬಳಿ ಪ್ರಥಮ ದರ್ಜೆ ಟಿಕೆಟ್ ಇದೆ. ನಾನು ಯಾಕೆ ಹೊರಬರಬೇಕು? ”
ಅವರು ಗಾಂಧಿಯನ್ನು ಅವರ ಸಾಮಾನುಗಳೊಂದಿಗೆ ರೈಲಿನಿಂದ ಹೊರಕ್ಕೆ ತಳ್ಳಿದರು. ಇದರಿಂದ ಅವರು ಪ್ಲಾಟ್ಫಾರ್ಮ್ನಲ್ಲಿ ಬಿದ್ದರು. ಅವರು ಅಲ್ಲಿಯೇ ಗಂಟೆಗಟ್ಟಲೆ ಕುಳಿತು ಯೋಚಿಸಿದರು, “ಇದು ನನಗೆ ಏಕೆ ಸಂಭವಿಸಿತು? ನಾನು ಪ್ರಥಮ ದರ್ಜೆ ಟಿಕೆಟ್ ಖರೀದಿಸಿದ್ದೇನೆ. ಅದರ ಹೊರತಾಗಿಯೂ ನನ್ನನ್ನು ಯಾಕೆ ರೈಲಿನಿಂದ ಹೊರಗೆ ಹಾಕಲಾಯಿತು? ” ಅವರು ಯೋಚಿಸಿದರು. ಆಗ ಅವರು ಜನರು ಅನುಭವಿಸುತ್ತಿರುವ ದೊಡ್ಡ ಸಂಕಟದ ಜೊತೆ ತಮ್ಮನ್ನು ಗುರುತಿಸಿಕೊಂಡರು. ಅಲ್ಲಿಯವರೆಗೆ ಅವರ ಬದುಕು, ಕಾನೂನು ಅಭ್ಯಾಸ ಮತ್ತು ಹಣ ಸಂಪಾದನೆಯಷ್ಟೇ ಅವರ ಜೀವದಲ್ಲಿ ಮುಖ್ಯವಾಗಿತ್ತು. ಆದರೆ ಈಗ, ಅಸ್ತಿತ್ವದಲ್ಲಿದ್ದ ದೊಡ್ಡ ಸಮಸ್ಯೆಯನ್ನು ಅವರು ಗುರುತಿಸಿದರು. ಅವರು ತಮ್ಮಲ್ಲಿನ ಸೀಮಿತ ಗುರುತುಗಳನ್ನು ಮುರಿದು ಮಹತ್ತಾದ ಗುರುತಿನೊಂದಿಗೆ ಕಾಣಿಸಿಕೊಂಡರು.
ಇತಿಹಾಸದಲ್ಲಿ, ಶ್ರೇಷ್ಠ ಜೀವಿಗಳು ಎಂದು ಕರೆಯಲ್ಪಡುವ ಹಲವು ವ್ಯಕ್ತಿಗಳಿಗೆ ಆದದ್ದು ಇಷ್ಟೇ. ಅವರು ತಮ್ಮದೇ ಸೀಮಿತ ಗುಣಗಳಿಂದ ಗುರುತಿಸಿಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ, ಒಂದು ಘಟನೆ ತಮ್ಮೆಲ್ಲಾ ಸೀಮತ ಗುರುತಿಸುವಿಕೆಗಳನ್ನು ಮುರಿದು, ತಮ್ಮ ಸುತ್ತಲೂ ನಡಯುತ್ತಿದ್ದ ದೊಡ್ಡ ಪ್ರಕ್ರಿಯೆಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಯಿತು. ನಂತರ ತಾವು ಊಹಿಸಲೂ ಅಸಾಧ್ಯವಾದ ಕೆಲಸಗಳನ್ನು ಮಾಡಿದರು.
ಈ ರೀತಿ ಗಾಂಧೀಜಿಯವರು ಲಕ್ಷಾಂತರ ಜನರನ್ನು ಮುನ್ನಡೆಸುವಂತೆ ಆಯಿತು. ಭಾರತದಲ್ಲಷ್ಟೇ ಅಲ್ಲ, ಜಗತ್ತಿನೆಲ್ಲೆಡೆ ಮಹಾತ್ಮರ ಹಸರು ಕೇಳಿದಂತೆಯೇ ಗೌರವದ ಭಾವನೆ ಬರುತ್ತದೆ. ಭಾರತದಲ್ಲಿ ಇನ್ನೂ ಹಲವು ಮಹಾನಾಯಕರಿದ್ದ ಸಮಯದಲ್ಲೇ ಇದು ಸಂಭವಿಸಿತು. ಹೆಚ್ಚು ಪ್ರತಿಭಾವಂತರು, ಉತ್ತಮ ವಾಗ್ಮಿಗಳು ಮತ್ತು ಉತ್ತಮ ವಿದ್ಯಾವಂತರು ಇದ್ದರೂ. ಆದರೂ ಇವರು ಎಲ್ಲರಿಗಿಂತ ಒಂದು ಕೈ ಮೇಲೆ ಇದ್ದರು. ಇದೆಲ್ಲಾ ಕೇವಲ ಅವರಲ್ಲಿದ್ದ ಬದ್ದತೆಯಿಂದಾಗಿ ಸಾಧ್ಯವಾಯಿತು.
ಬದುಕೋ ಸಾವೋ.. ಜೀವನದಲ್ಲಿ ಏನೇ ಸಂಭವಿಸಿದರೂ ನಮ್ಮಲ್ಲಿನ ಬದ್ದತೆ ಬದಲಾಗಬಾರದು. ನಿಮ್ಮಲ್ಲಿ ಪೂರ್ಣವಾದ ಬದ್ದತೆಯಿದ್ದಲ್ಲಿ, ಎಲ್ಲ ರೀತಿಯಲ್ಲಿ ನಿಮ್ಮನ್ನು ನೀವು ವ್ಯಕ್ತಪಡಿಸಿಕಳ್ಳುವಿರಿ. ಅದೇ ಬದ್ಧತೆಯ ಕೊರತೆಯಿದ್ದಲ್ಲಿ, ಎಲ್ಲೋ ನಿಮ್ಮ ಉದ್ದೇಶವನ್ನು ಕಳೆದುಕೊಳ್ಳುತ್ತೀರಿ. ನಾವು ಯಾಕೆ ಇಲ್ಲಿದ್ದೇವೆ ಎಂಬ ಉದ್ದೇಶವು ಕಳೆದುಹೋದಾಗ, ನಮ್ಮ ಗುರಿಗಳನ್ನು ಪೂರೈಸುವ ಪ್ರಶ್ನೆಯೇ ಇಲ್ಲ, ಅಲ್ಲವೇ?
ಆದ್ದರಿಂದ ಬದ್ದತೆ ಎಂಬುದು ನಮ್ಮೊಳಗೇ ನಿರ್ಧರಿಸಬೇಕಾದ ವಿಷಯ. ನಮ್ಮ ಜೀವನದಲ್ಲಿ ನಾವು ಕೈಗೆತ್ತಿಕೊಂಡಿರುವ ಯಾವುದೇ ವಿಷಯಕ್ಕೆ ನಾವು ನಿಜವಾಗಿಯೂ ಬದ್ಧರಾದವೆಂದರೆ, ಅದಕ್ಕಾದ ಫಲ ಅಪ್ರತಿಮವಾದದ್ದಾಗಿರುತ್ತದೆ ಅಲ್ಲವೇ? ಒಬ್ಬ ಬದ್ದ ವ್ಯಕ್ತಿಗೆ ಅದಕ್ಕಾದ ಫಲಿತಾಂಶಗಳು ದೊರೆಯದ್ದಿದ್ದಲ್ಲಿ, ಅವನ ಜೀವನದಲ್ಲಿ ವೈಫಲ್ಯ ಎಂಬ ಯಾವುದೇ ವಿಷಯಗಳಿರವುದಿಲ್ಲ. ‘ನಾನು ದಿನದಲ್ಲಿ 100 ಬಾರಿ ಕೆಳಗೆ ಬಿದ್ದರೂ ಏನು? ಮತ್ತೆ ಎದ್ದು ನನ್ನ ಬದ್ದತೆಯಡೆಗೆ ತೊಡಗಿಸಿಕೊಳ್ಳುವೆ’ ಎಂಬುದೇ ಮುಖ್ಯ.
ಬದ್ದತೆಯಿಂದಿರುವುದು ಎಂದರೆ ಆಕ್ರಮಣಕಾರಿಯಾಗುವುದು ಎಂದರ್ಥವಲ್ಲ. ನಾವಿದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಹಾತ್ಮ ಗಾಂಧಿಯವರ ಉದಾಹರಣೆ ಬಹಳ ಸೂಕ್ತವಾಗಿದೆ. ಅವರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿನ ಬದ್ದತೆಯಿದ್ದಿತು, ಅದೇ ಸಮಯದಲ್ಲಿ ಅವರು ಬ್ರಿಟಿಷ್ ಜನರಿಗೆ ವಿರುದ್ಧವಾಗಿರಲಿಲ್ಲ. ಇದು ಅವರ ಪ್ರಬುದ್ದತೆಯನ್ನು ತೋರಿಸುತ್ತದೆ.
Editor’s Note: Download “Culture of Peace,” first published in print in 2008, is now available as an ebook on a “name your price” basis. In this 22-page booklet, you can read about Sadhguru’s insights into the basis of conflict, misconceptions about peace and how each of us can help to create a generation of peaceful human beings.