ನಾವು ಕುಂಕುಮವನ್ನು ಹಚ್ಚಿಕೊಳ್ಳುವುದೇಕೆ? ಕುಂಕುಮದ ಮಹತ್ವ ಮತ್ತು ಲಾಭಗಳು
ಕುಂಕುಮದ ಗುಣಲಕ್ಷಣ ಮತ್ತು ಅದರ ಲಾಭಗಳಿಂದ ಹಿಡಿದು ಸಮಾಜ ಮತ್ತು ಸಂಸ್ಕೃತಿಯಲ್ಲಿ ಕುಂಕುಮದ ಸಾಂಕೇತಿಕತೆ ಬಗ್ಗೆಯ ಪ್ರಶ್ನೆಗಳಿಗೆ ಸದ್ಗುರುಗಳು ಉತ್ತರ ನೀಡುತ್ತಾರೆ.
ಪ್ರಶ್ನೆ: ದೇವಸ್ಥಾನ ಮತ್ತು ಪೂಜಾ ಸ್ಥಳಗಳಲ್ಲಿ, ಕುಂಕುಮ, ಗಂಧ ಮತ್ತು ವಿಭೂತಿಯನ್ನು ನೀಡುತ್ತಾರೆ. ಇದರ ಹಿಂದೆ ಯಾವುದಾದರೂ ವೈಜ್ಞಾನಿಕ ಕಾರಣವಿದೆಯೇ?
ಸದ್ಗುರು: ಕೆಲ ವಸ್ತುಗಳು ಬೇರೆಯವುಗಳಿಗಿಂತ ತ್ವರಿತವಾಗಿ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಒಂದು ಉಕ್ಕಿನ ದಂಡ, ಸ್ವಲ್ಪ ವಿಭೂತಿ ಮತ್ತು ಒಬ್ಬ ವ್ಯಕ್ತಿ ನನ್ನ ಮುಂದಿದ್ದಾರೆ ಎಂದೆಣಿಸಿ. ಅವರು ನನ್ನಿಂದ ಯಾವ ಪ್ರಮಾಣದಲ್ಲಿ ಶಕ್ತಿಯನ್ನು ಹೀರಿಕೊಳ್ಳುತ್ತಾರೆ ಎನ್ನುವುದು ಬೇರೆಯಾಗಿರುತ್ತದೆ. ಎಲ್ಲರಿಗೂ ಒಂದೇ ತರಹದ ಅವಕಾಶವಿದ್ದರೂ, ಅವರೆಲ್ಲರೂ ಅದೇ ಪ್ರಮಾಣದ ಶಕ್ತಿಯನ್ನು ಹೀರಿಕೊಳ್ಳುವುದಿಲ್ಲ ಮತ್ತು ಉಳಿಸಿಕೊಳ್ಳುವುದಿಲ್ಲ.
ಕೆಲವು ವಸ್ತುಗಳನ್ನು ಸುಲಭವಾಗಿ ಶಕ್ತಿಯನ್ನು ಹೀರಿಕೊಳ್ಳುವ ಮತ್ತು ಉಳಿಸಿಕೊಳ್ಳುವಂತಹ ವಸ್ತುಗಳು ಎಂದು ಗುರುತಿಸಲಾಗಿದೆ. ಇವುಗಳಲ್ಲಿ ವಿಭೂತಿಯು ಅತೀ ಸೂಕ್ಷ್ಮವಾದದು. ನೀವು ಅದರಲ್ಲಿ ಸುಲಭವಾಗಿ ಶಕ್ತಿಯನ್ನು ಸೇರಿಸಿ, ಅದನ್ನು ಯಾರಿಗಾದರೂ ನೀಡಬಹುದು. ಕುಂಕುಮವೂ ಕೂಡ ಅದೇ ಗುಣವನ್ನು ಹೊಂದಿದೆ. ಶ್ರೀಗಂಧದಕ್ಕೂ ಕೂಡ ಸ್ವಲ್ಪ ಮಟ್ಟಿಗೆ ಆ ಗುಣವಿದೆ, ಆದರೆ ವಾಹಕತೆಯ ಪರಿಭಾಷೆಯಲ್ಲಿ, ವಿಭೂತಿಯನ್ನು ನಾನು ಖಂಡಿತವಾಗಿಯೂ ಮೊದಲನೆಯದು ಎನ್ನುತ್ತೇನೆ.
ಅನೇಕ ದೇವಾಲಯಗಳಲ್ಲಿ, ಶಕ್ತಿಶಾಲಿ ಪ್ರಾಣಶಕ್ತಿಯ ಕಂಪನಗಳು ಇನ್ನೂ ಇವೆ. ಆದ್ದರಿಂದ ಈ ವಸ್ತುವು ನಿರ್ದಿಷ್ಟ ಪ್ರಮಾಣದ ಶಕ್ತಿಯನ್ನು ಹೀರಿಕೊಳ್ಳಲೆಂದು ಅದನ್ನು ಅಲ್ಲಿ ಸ್ವಲ್ಪ ಕಾಲ ಇಡಲಾಗುತ್ತದೆ . ಹೀಗೆ ಮಾಡುವುದು ಅದನ್ನು ಹಂಚಲಿಕ್ಕೆಂದು, ಆದ್ದರಿಂದ ದೇವಾಲಯಗಳಿಗೆ ಬರುವ ಜನರಿಗೆ ಇದನ್ನು ನೀಡಲಾಗುತ್ತದೆ. ನೀವು ಸಂವೇದನಾಶೀಲರಾಗಿದ್ದರೆ, ಅಲ್ಲಿಂದ ನೀವೇ ಈ ಶಕ್ತಿಯನ್ನು ಹೀರಿಕೊಳ್ಳುತ್ತೀರಿ. ನೀವು ಅಷ್ಟು ಸೂಕ್ಷ್ಮವಾಗಿಲ್ಲದಿದ್ದರೆ, ನಿಮಗೆ ಏನನ್ನಾದರೂ ನೀಡಬೇಕಾಗುತ್ತದೆ.
ಕುಂಕುಮವನ್ನು ಹೇಗೆ ತಯಾರಿಸಲಾಗುತ್ತದೆ?
ಕುಂಕಮದ ವಿಷಯದಲ್ಲಿ ಬರಿ ಬಣ್ಣಕ್ಕೆ ಮರುಳಾಗಬೇಡಿ. ಕುಂಕುಮವನ್ನು ಸರಿಯಾಗಿ ತಯಾರಿಸಿದ್ದೇ ಆದರೆ ಅದನ್ನು ಅರಿಶಿನ ಮತ್ತು ಸುಣ್ಣದಿಂದ ತಯಾರಿಸಲಾಗುತ್ತದೆ - ಲಿಂಗ ಭೈರವಿಯ ಕುಂಕುಮವಿದ್ದ ಹಾಗೆ. ದುರದೃಷ್ಟವಶಾತ್, ಅನೇಕ ಸ್ಥಳಗಳಲ್ಲಿ, ಕುಂಕುಮ ಕೇವಲ ರಾಸಾಯನಿಕ ಪುಡಿಯಾಗಿರುತ್ತದೆ. ಅರಿಶಿನವು ಅಸಾಧಾರಣ ಪ್ರಯೋಜನಗಳನ್ನು ಹೊಂದಿದೆ. ಅರಿಶಿನದಲ್ಲಿ ನಮ್ಮ ಸ್ವಾಸ್ಥ್ಯಕ್ಕಾಗಿ ಬಳಸಬಹುದಾದ ನಿರ್ದಿಷ್ಟ ಗುಣವಿರುವ ಕಾರಣ, ಅದನ್ನು ಈ ಸಂಸ್ಕೃತಿಯಲ್ಲಿ ಮಂಗಳಕರವೆಂದು ಪರಿಗಣಿಸಲ್ಪಟ್ಟಿದೆ.
ನಮ್ಮ ಜೀವನವು ಹೇಗೆ ಘಟಿಸುತ್ತದೆ ಎನ್ನುವುದು ನಮ್ಮ ಪ್ರಾಣಶಕ್ತಿ, ದೇಹ ಮತ್ತು ಮನಸ್ಸು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ಅಧರಿಸಿರುತ್ತದೆಯೇ ಹೊರತು ನಮ್ಮ ಸುತ್ತಲಿರುವುದನ್ನಲ್ಲ. ನಮ್ಮ ಸಂಸ್ಕೃತಿಯಲ್ಲಿ, ನಿರ್ದಿಷ್ಟ ನಿಟ್ಟಿನೆಡೆಗೆ ನಮ್ಮ ಪ್ರಾಣಶಕ್ತಿಗಳಿಗೆ ನೆರವಾಗಲು ನಾವು ಈ ವಿಜ್ಞಾನವನ್ನು ರಚಿಸಿದೆವು. ಆದರೆ ಈಗ, ಹೆಚ್ಚಿನ ಮಹಿಳೆಯರು ಕುಂಕುಮವನ್ನು ಧರಿಸುವ ಬದಲು ಪ್ಲಾಸ್ಟಿಕ್-ಅನ್ನು ಧರಿಸುತ್ತಾರೆ. ನೀವು ವಿಭೂತಿ, ಕುಂಕುಮ ಅಥವಾ ಅರಿಶಿನವನ್ನು ಹಚ್ಚಿಕೊಳ್ಳಬಹುದು ಅಥವಾ ಏನನ್ನೂ ಹಚ್ಚಿಕೊಳ್ಳದೇ ಇರಬಹುದು. ನೀವು ಏನನ್ನೂ ಹಚ್ಚಿಕೊಳ್ಳದಿದ್ದರೆ ಪರವಾಗಿಲ್ಲ, ಆದರೆ ಪ್ಲಾಸ್ಟಿಕ್-ಅನ್ನು ಮಾತ್ರ ಹಚ್ಚಿಕೊಳ್ಳಬೇಡಿ. ಪ್ಲಾಸ್ಟಿಕ್-ಅನ್ನು ಹಚ್ಚಿಕೊಳ್ಳುವುದರ ಅರ್ಥವೇನೆಂದರೆ, ನೀವು ನಿಮ್ಮ ಮೂರನೆ ಕಣ್ಣನ್ನು ಮುಚ್ಚಿದ್ದೀರಿ ಮತ್ತು ನಿಮಗೆ ಅದನ್ನು ತೆರೆಯುವ ಆಸಕ್ತಿ ಇಲ್ಲವೆಂದು!
ಮಹಿಳೆಯರು ಏತಕ್ಕಾಗಿ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ?
ಪ್ರಶ್ನೆ: ಮದುವೆಯಾದ ಮಹಿಳೆಯರು ಏತಕ್ಕಾಗಿ ತಲೆಯ ಬೈತಲೆಯ ಭಾಗದಲ್ಲಿಯೂ ಕುಂಕುಮವನ್ನು ಹಚ್ಚಿಕೊಳ್ಳುವುದರ ಮಹತ್ವೇನು?
ಸದ್ಗುರು: ಕುಂಕುಮದಲ್ಲಿ ಅರಿಶಿನವಿರುವುದರಿಂದ ಅದು ಮಹತ್ವಪೂರ್ಣವಾಗಿದೆ. ಅದನ್ನು ಹಚ್ಚಿಕೊಳ್ಳುವುದರಿಂದ ಕೆಲ ಆರೋಗ್ಯ ಮತ್ತು ಇತರ ಪ್ರಯೋಜನಗಳಿವೆ. ಇನ್ನೊಂದು ವಿಷಯವೆಂದರೆ, ಅದನ್ನು ಸಮಾಜದಲ್ಲಿ ಒಂದು ಸಂಕೇತದಂತೆ ಬಳಸಲಾಗುತ್ತದೆ. ಒಬ್ಬ ಮಹಿಳೆಯು ಕುಂಕುಮವನ್ನು ಧರಿಸಿದ್ದರೆ, ಅದರ ಅರ್ಥ ಅವಳ ಮದುವೆಯಾಗಿದೆ, ಅವಳನ್ನು ಸಮೀಪಿಸಬಾರದೆಂದು ಅರ್ಥ. ಇದು ಕೇವಲ ಸೂಚನೆಯಷ್ಟೆ - ಹೀಗಿದ್ದಾಗ ನೀವು ಎಲ್ಲರಿಗೂ ಹೇಳಿಕೊಂಡು ಬರುವ ಅಗತ್ಯವಿರುವುದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ, ಯಾರಾದರೂ ಕೈಬೆರಳಿಗೆ ಉಂಗುರವನ್ನು ಧರಿಸಿದ್ದರೆ, ಅವರಿಗೆ ಮದುವೆಯಾಗಿದೆಯೆಂದು ನಿಮಗೆ ಗೊತ್ತಿರುತ್ತದೆ. ಇಲ್ಲಿನ ಸಾಂಕೇತಿಕತೆ ಏನೆಂದರೆ, ಮಹಿಳೆಯು ಕಾಲುಂಗುರ ಮತ್ತು ಸಿಂಧೂರವನ್ನು ಧರಿಸಿದ್ದರೆ, ಅವಳಿಗೆ ಮದುವೆಯಾಗಿದೆ ಎಂದು ಅರ್ಥ; ಅವಳಿಗೆ ಇತರ ಜವಾಬ್ದಾರಿಗಳಿರುತ್ತದೆ. ಸಾಮಾಜಿಕವಾಗಿ, ಸ್ಪಷ್ಟ ಗುರುತಿಸುವಿಕೆ ಇರುವುದಕ್ಕಾಗಿ, ಪರಿಸ್ಥಿತಿಯನ್ನು ಸಂಘಟಿಸುವ ಒಂದು ಮಾರ್ಗವಾಗಿದೆ; ಸಮಾಜದಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಒಂದು ಸಾಮಾಜಿಕ ಮಾರ್ಗವಾಗಿದೆ.
ಸಂಪಾದಕರ ಟಿಪ್ಪಣಿ: ಗಾಢ ಕೆಂಪು ಬಣ್ಣ ಮತ್ತು ನೈಸರ್ಗಿಕ ಘಟಕಾಂಶಗಳನ್ನು ಹೊಂದಿರುವ ಲಿಂಗ ಭೈರವಿ ಕುಂಕುಮವು ದೇವಿಯ ಅನುಗ್ರಹಕ್ಕೆ ಹೆಚ್ಚು ಗ್ರಹಣಶೀಲರಾಗಲು ಸಹಕರಿಸುತ್ತದೆ. ಈಗಲೇ ಆರ್ಡರ್ ಮಾಡಿ(Order now).