ಪ್ರಶ್ನೆ: ಸರ್, ನಾವು ಭಾರತವನ್ನು ಒಂದು ಹೆಣ್ಣಾಗಿ ಚಿತ್ರಿಸುತ್ತೇವೆ ಮತ್ತವಳನ್ನು "ಭಾರತ ಮಾತೆ” ಎಂದು ಕರೆಯುತ್ತೇವೆ. ಆದರೂ ಸಹ ನಾವು ಅನೇಕ ಅತ್ಯಾಚಾರದ ಘಟನೆಗಳ ಬಗ್ಗೆ, ಒಬ್ಬ ವ್ಯಕ್ತಿಯು ತನ್ನ ಸ್ವಂತ ತಾಯಿ, ಮಗಳು, ಅಥವಾ ಸಹೋದರಿಯನ್ನೇ ಬಲಾತ್ಕರಿಸಿದ ಬಗ್ಗೆ ಕೇಳುತ್ತಲೇ ಇದ್ದೇವೆ. ಭೋಗಾಸಕ್ತಿಯ ಸುಖಕ್ಕೆ ಇಂತಹ ಅಮಾನವೀಯ ಕೃತ್ಯವನ್ನೆಸಗಲು ಒಬ್ಬ ವ್ಯಕ್ತಿಯನ್ನು ಪ್ರಚೋದಿಸುವುದೇನು?

ಸದ್ಗುರು: ನಾವು ಈ ನೆಲವನ್ನು “ಭೂಮಿ ತಾಯಿ” ಎಂದು ಕರೆಯುವ ಮಾತ್ರಕ್ಕೆ, ಭೂಮಿಯ ಮೇಲೆ ನಡೆಯುವ ಎಲ್ಲ ಅಪರಾಧಗಳು ನಿಲ್ಲುತ್ತವೆಯೇ? ಇಲ್ಲ. ವಿವಿಧ ರೀತಿಯಾದ ಅಪರಾಧಗಳಿವೆ. ಮಹಿಳೆಯರ ಮೇಲಿನ ಲೈಂಗಿಕ ಆಕ್ರಮಣವು ಬಹಳಷ್ಟಿದೆ. ಇದಕ್ಕೆ ಹಲವಾರು ಅಂಶಗಳಿವೆ. ನಾವು ಕೋಪಗೊಂಡು, “ಎಲ್ಲರನ್ನೂ ನೇಣಿಗೇರಿಸುವ.” ಎಂದು ಹೇಳಬಹುದು. ಅತ್ಯಚಾರದ ಪ್ರಕರಣಗಳಲ್ಲಿ ಬಹುತೇಕ ಬಾರಿ ಅತ್ಯಚಾರಕ್ಕೊಳಗಾದವರು ಮಾತ್ರವೇ ಅದಕ್ಕೆ ಸಾಕ್ಷಿಯಾಗಿರುತ್ತಾರೆ. ನೀವು ನೇಣಿಗೇರಿಸುವುದನ್ನು ಶಿಕ್ಷೆಯಾಗಿ ತಂದರೆ, ಅತ್ಯಚಾರದ ಮಾಡಿದವನು, ಸಾಕ್ಷಿಯನ್ನು ಏನು ಮಾಡುತ್ತಾನೆಂದು ನಿಮ್ಮ ಅಭಿಪ್ರಾಯ? ಅವನು ಆ ಒಂದೇ ಒಂದು ಸಾಕ್ಷಿಯನ್ನು ಸಹ ಅಳಿಸಿಹಾಕಿಬಿಡುತ್ತಾನೆ. ಹಾಗಾಗಿ, ಏನನ್ನಾದರು ಹೇಳುವ ಮೊದಲು, ನಾವೇನು ಹೇಳುತ್ತಿದ್ದೇವೆ ಎಂಬುದರ ಬಗ್ಗೆ ನಮಗೆ ಗಮನ ಇರಬೇಕು. ಇದರರ್ಥ, ನಾವು ಅವರನ್ನು ಬೆಂಬಲಿಸುತ್ತಿದ್ದೇವೆ ಎಂದಲ್ಲ. ನೀವು ನಿಜವಾಗಿಯೂ ಪರಿಹಾರಕ್ಕಾಗಿ ಹುಡುಕುತ್ತಿದ್ದೀರೆ ಅಥವಾ ಸುಮ್ಮನೆ “ಎಲ್ಲರನ್ನು ನೇಣಿಗೇರಿಸಿ” ಎಂದು ಕೂಗುತ್ತಿದ್ದೀರೆ ಎಂಬುದೇ ಪ್ರಶ್ನೆ?

ಒಂದು ತಲೆಮಾರಿನಲ್ಲಿನ ಬದಲಾವಣೆ

ಇದೇಕೆ ನಡೆಯುತ್ತಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಒಂದು ವಿಷಯವೆಂದರೆ, ಭಾರತೀಯ ಸಂಸ್ಕೃತಿಕ ಇತಿಹಾಸದಲ್ಲಿ, ಇದು, ಮಹಿಳೆಯರು ಮನೆಯಿಂದ ಹೊರಬಂದು ಪುರುಷರ ಸಾಮೀಪ್ಯದಲ್ಲಿ ಕೆಲಸ ಮಾಡುತ್ತಿರುವಂತಹ ಮೊದಲ ತಲೆಮಾರಾಗಿದೆ. ಜನರಿಗೆ ಇದರ ಅಭ್ಯಾಸವಿಲ್ಲ. ಅಲ್ಲದೆ, ಲಕ್ಷಾಂತರ ಯುವಕರು ಹಳ್ಳಿಗಳಿಂದ ನಗರಗಳಿಗೆ ಬರುತ್ತಿದ್ದಾರೆ. ಅವರ ಹಳ್ಳಿಯಲ್ಲಿ ಅವರಿಗೆ ಮಹಿಳೆಯರೆಂದರೆ - ಅವರ ತಾಯಿ, ಚಿಕ್ಕಮ್ಮ, ಅತ್ತೆ ಅಥವಾ ಅಜ್ಜಿ. ಇಲ್ಲಿ ಬಂದ ನಂತರ, ಯುವತಿಯರು ನಗರದ ರಸ್ತೆಗಳಲ್ಲಿ ನಡೆದು ಹೋಗುವುದನ್ನು ನೋಡುತ್ತಾರೆ. ಇದು ಅವರಿಗೆ ಬಹಳ ಹೊಸದು. ನಾವು ಇಂತಹ ವಿಷಯಗಳನ್ನು ನಗಣ್ಯ ಮಾಡುವುದು ಬೇಡ.

ಮಾನವರಲ್ಲಿ ಲೈಂಗಿಕತೆ ಇರುವುದು ಸಹಜ. ಹದಿನೈದರಿಂದ ಇಪ್ಪತ್ತೈದರ ವಯೋಮಿತಿಯ ನಡುವೆ ಹಾರ್ಮೋನುಗಳ ಪ್ರಭಾವವು ಗರಿಷ್ಠ ಮಟ್ಟದಲ್ಲಿರಬಹುದು.

ಮಾನವರಲ್ಲಿ ಲೈಂಗಿಕತೆ ಇರುವುದು ಸಹಜ. ಹದಿನೈದರಿಂದ ಇಪ್ಪತ್ತೈದರ ವಯೋಮಿತಿಯ ನಡುವೆ ಹಾರ್ಮೋನುಗಳ ಪ್ರಭಾವವು ಗರಿಷ್ಠ ಮಟ್ಟದಲ್ಲಿರಬಹುದು. ಬುದ್ಧಿಶಕ್ತಿಯನ್ನು ಬೆಳೆಸಿ, ಕ್ರೀಡೆ, ಕಲೆ, ಸಂಗೀತ ಮತ್ತು ಶಿಕ್ಷಣದಂತಹ ಬೇರೆ ಬೇರೆ ಅಭಿವ್ಯಕ್ತಿಗಳನ್ನು ಜೀವನದಲ್ಲಿ ತಂದರೆ, ಯುವಜನರಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅನೇಕ ಮಾರ್ಗಗಳಿರುತ್ತವೆ. ಅಂತಹವುಗಳೇನು ಇಲ್ಲದಿದ್ದು, ನೀವು ಕೇವಲ ಹಾರ್ಮೋನುಗಳ ಪ್ರಭಾವದಲ್ಲಿದ್ದರೆ, ಹಳ್ಳಿಯಿಂದ ನಗರಕ್ಕೆ ಬಂದು ಯುವತಿಯರನ್ನು ನೋಡಿದಾಗ, ಫಿಲ್ಮ್-ಗಳಲ್ಲಿ ನೋಡುತ್ತಿದಂತಹ ಜನರೀಗ ರಸ್ತೆಯಲ್ಲಿ ನಡೆದಾಡುತ್ತಿರುವಾಗ, ಯುವಕರ ತಲೆ ಕೆಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲೆಡೆ ನೀವು ಮದ್ಯವನ್ನು ಪ್ರೋತ್ಸಾಹಿಸುತ್ತಿದ್ದೀರಿ – ಒಳಗೆ ಎರಡು ಹನಿ ಮದ್ಯ ಸೇರಿತೆಂದರೆ, ಅವರುಗಳು ಸಂಪೂರ್ಣವಾಗಿ ಹುಚ್ಚರಾಗುತ್ತಾರೆ. ಯಾರೂ ನೋಡುತ್ತಿಲ್ಲವೆಂದು ಅವರಿಗನಿಸಿದರೆ, ಯಾರ ಮೇಲಾದರೂ ಎರಗುತ್ತಾರೆ.

 

ಒಂದು ಅಮಾನವೀಯ ಪರಿಸರ

ಇದರಲ್ಲೊಂದು ಸಾಮಾಜಿಕ ವಿಷಯವೂ ಇದೆ. ಅವರು ಹಳ್ಳಿಯಲ್ಲಿದ್ದಿದ್ದರೆ, ಅವರ ತಾಯಿಯೋ, ಅವರ ಚಿಕ್ಕಮ್ಮನೋ ಅಥವಾ ಯಾರಾದರೂ, “ನಿನಗೆ ಆ ಹುಡುಗಿ ಗೊತ್ತಲ್ಲವೇ? ನೀನು ಅವಳನ್ನೇ ಮದುವೆಯಾಗುವುದು.” ಎಂದು ಹೇಳಿರುತ್ತಿದ್ದರು. ಆ ಹುಡುಗಿಯನ್ನು ಅವನು ಮದುವೆಯಾಗುತ್ತಿದ್ದನೋ ಇಲ್ಲವೋ, ಅವನ ಮನಸ್ಸಿನಲ್ಲಿ ಅವನ ಅಗತ್ಯತೆಗಳಿಗೊಂದು ಪರಿಹಾರವಿರುತ್ತಿತ್ತು. 

ಯಾರಾದರು ಅಪರಾಧವನ್ನೆಸಗಿದರೆ, ಅವರನ್ನು ಶಿಕ್ಷಿಸಬೇಕು - ಅದು ಬೇರೆ ವಿಷಯ. ನಾನದರ ಬಗ್ಗೆ ಮಾತನಾಡುವುದಿಲ್ಲ. ಆದರೆ, ಸಾಮಾಜಿಕವಾಗಿ, ಇದಕ್ಕೆ ಪರಿಹಾರವೇನು?

ಅಂತಹವನು ಈಗ, ಪಟ್ಟಣಕ್ಕೆ ಒಬ್ಬನೆ ಬರುತ್ತಾನೆ. ದಿನರಾತ್ರಿಯನ್ನದೆ, ಅಮಾನವೀಯ ವಾತಾವರಣದಲ್ಲಿ ಕೆಲಸ ಮಾಡಿ, ಹತ್ತಾರು ಹುಡುಗರಿರುವ ಒಂದು ಕೋಣೆಯಲ್ಲಿ ಮಲಗುತ್ತಾನೆ. ಅದೊಂದು ಬಂದಿಗಳ ಶಿಬಿರದಂತಿರುತ್ತದೆ. ಬಹಳಷ್ಟು ಯುವಕರು ಇಂತಹ ವಾತಾವರಣದಲ್ಲಿಯೇ ಬದುಕುತ್ತಿರುವುದು. ಮತ್ತಿದಕ್ಕೆ ಯಾವುದೇ ಪರಿಹಾರವಿಲ್ಲ – ಅವರ ಹಾರ್ಮೋನುಗಳಿಗೆ, ಅವರ ದೇಹಕ್ಕೆ, ಅವರ ಭಾವನೆಗಳಿಗೆ ಮತ್ತವರ ಜೀವನಕ್ಕೆ. “ಮುಂದೇನು ಮಾಡುವೆ? ಯಾರನ್ನು ಮದುವೆಯಾಗುವೆ? ಜೀವದಲ್ಲಿ ಹೇಗೆ ನಲೆಗೊಳ್ಳುವೆ?” ಎಂದು ಅವರನ್ನು ಕೇಳುವವರಾರು ಇಲ್ಲ. ಇಂತಹವರನ್ನು ನೋಡುವ ಒಬ್ಬ ಮನುಷ್ಯರಾದರೂ ಅಲ್ಲಿದ್ದಾರೆಯೆ? ಇಲ್ಲ. ಗೆಳೆಯರೊಂದಿಗೆ ಸಾಯಂಕಾಲ ಹೊರಹೋದಾಗ ಅವನೇನಾದರೂ ಕುಡಿದನೆಂದರೆ, ಅವನು ಹುಚ್ಚನಾಗುತ್ತಾನೆ. ಅದಲ್ಲದೆ, ಜನರು ಎಲ್ಲಾ ರೀತಿಯ ಕಾಮಪ್ರಚೋದಕ ವೀಡಿಯೊಗಳನ್ನು ಸಹ ಮಾರುತ್ತಿದ್ದಾರೆ. ಅದನ್ನೆಲ್ಲ ನೋಡಿ, ಅವನು ಸಹ ಅದನ್ನೇ ಮಾಡಬೇಕೆಂದುಕೊಳ್ಳುತ್ತಾನೆ.

 

ಯಾರಾದರು ಅಪರಾಧವನ್ನೆಸಗಿದರೆ, ಅವರನ್ನು ಶಿಕ್ಷಿಸಬೇಕು - ಅದು ಬೇರೆ ವಿಷಯ. ನಾನದರ ಬಗ್ಗೆ ಮಾತನಾಡುವುದಿಲ್ಲ. ಆದರೆ, ಸಾಮಾಜಿಕವಾಗಿ, ಇದಕ್ಕೆ ಪರಿಹಾರವೇನು? ಅವರು ಸನ್ಯಾಸಿಗಳಾಗುವಂತೆ ಅವರಿಗೆ ತಿಳಿ ಹೇಳುವಿರ? ಅವರು ಬ್ರಹ್ಮಚಾರಿಗಳಾಗಿ ಇದನ್ನೆಲ್ಲ ಪರಿತ್ಯಜಿಸಲು, ಅವರಿಗೆ ಯೋಗ ಮತ್ತು ಸಾಧನವನ್ನು ಕಲಿಸುತ್ತಿದ್ದೀರ? ಇಲ್ಲ, ಇಂತಹದೇನನ್ನೂ ಅವರಿಗೆ ನೀವು ಕಲಿಸಿಲ್ಲ. ಅವರಿಗೆ ಯಾವ ತರಹದ ಪರಿಹಾರವನ್ನು ಕೊಡುತ್ತೀರ? ಅವರು ಹಳ್ಳಿಯಲ್ಲಿದ್ದರೆ, ಹದಿನೆಂಟರಿಂದ ಹತ್ತೊಂಬತ್ತು ವರ್ಷಗಳ ಹೊತ್ತಿಗೆ ಅವರಿಗೆ ಮದುವೆ ಮಾಡುತ್ತಿದ್ದರು. ಈಗ, ಅವರಿಗೆ ಯಾವುದೇ ಭರವಸೆಗಳಿಲ್ಲ. ಸುಮ್ಮನೆ ಹಾಗೇ ಇದ್ದು, ಸಂಯಮ ಕಳೆದುಕೊಂಡು ಏನೋ ಮಾಡುತ್ತಾರೆ. ಇದು ಮಾನವರ ಸಹಜಗುಣವೆಂದು ನಾವು ಅರ್ಥ ಮಾಡಿಕೊಳ್ಳಬೇಕು.

ಚರ್ಚೆಯ ಅಗತ್ಯತೆ

ಕೇವಲ ಐವತ್ತು ವರ್ಷಗಳ ಹಿಂದೆ, ಯುವತಿಯರಿಗೆ, ಸುಮಾರು ಹದಿನಾರು ಹದಿನೇಳು ವರ್ಷವಾದಾಗ, ಯುವಕರಿಗೆ ಇಪ್ಪತ್ತು ವರ್ಷವಾಗುವ ಹೊತ್ತಿಗೆ ಅವರ ವಿವಾಹವನ್ನು ಮಾಡಿಸುತ್ತಿದ್ದರು. ಅವರು ನಿಯಂತ್ರಣ ಕಳೆದುಕೊಳ್ಳುವ ಮೊದಲೇ ಈ ವಿಷಯಗಳನ್ನು ಪರಿಹರಿಸಲಾಗುತ್ತಿತ್ತು. ತಲೆಮಾರು ಹಾಗೂ ಸಂಸ್ಕೃತಿಯಾಗಿ ಈಗ ಪರಿಸ್ಥಿತಿ ಬದಲಾಗಿದೆ. ಅವರ ಜೀವನಕ್ಕೀಗ ಯಾವುದೇ ವ್ಯವಸ್ಥೆ ಇಲ್ಲ. ನಾವು ಕನಿಷ್ಟಪಕ್ಷ, ಇದರ ಬಗ್ಗೆ ಚರ್ಚಿಸಲು ಸಿದ್ಧರಿರಬೇಕು, "ನಾವು ನಮ್ಮ ಯುವಜನರೊಂದಿಗೆ ಏನು ಮಾಡಲಿದ್ದೇವೆ?" ಕೇವಲ ಮಡಿವಂತಿಕೆಯಿಂದಿರುವುದಷ್ಟೆ ಕೆಲಸ ಮಾಡುವುದಿಲ್ಲ.

 ತಾರುಣ್ಯಕ್ಕೆ ಹಲವಾರು ಅಂಶಗಳಿವೆ. ಅದರಲ್ಲೊಂದು, ಹಾರ್ಮೋನುಗಳ ಪ್ರಭಾವ. ಇದಕ್ಕೆ ನಾವು ಪರಿಹಾರವನ್ನು ಕಂಡುಹಿಡಿಯುತ್ತೇವೆಯೋ ಅಥವಾ ಸುಮ್ಮನೆ ಕಣ್ಣು ಮುಚ್ಚಿಕೊಂಡಿರುತ್ತೇವೆಯೋ?

ತಾರುಣ್ಯಕ್ಕೆ ಹಲವಾರು ಅಂಶಗಳಿವೆ. ಅದರಲ್ಲೊಂದು, ಹಾರ್ಮೋನುಗಳ ಪ್ರಭಾವ. ಇದಕ್ಕೆ ನಾವು ಪರಿಹಾರವನ್ನು ಕಂಡುಹಿಡಿಯುತ್ತೇವೆಯೋ ಅಥವಾ ಕಣ್ಣು ಮುಚ್ಚಿಕೊಂಡು, “ಇದೆಲ್ಲ ಏನೂ ಇಲ್ಲ, ಇಂತಹ ಕೆಲವರನ್ನು ನೇಣಿಗೇರಿಸೋಣ, ಆಗ ಎಲ್ಲವೂ ಸರಿಹೋಗುತ್ತದೆ.” ಎಂದೆನ್ನುವಿರೋ? ಇದು ಹೀಗೆ ಸರಿಯಾಗುವುದಿಲ್ಲ. ಇದನ್ನು ಚರ್ಚಿಸಿ ಪರಿಹರಿಸುವ ಕಾಲ ಬಂದಾಗಿದೆ. ಇದನ್ನು ಭಾರತ ಮಾತೆಯೊಂದಿಗೆ ಜೋಡಿಸುವ ಬದಲು, ಇದಕ್ಕೊಂದು ಪರಿಹಾರವನ್ನು ಹುಡುಕಿ. 

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image