ಪ್ರಶ್ನೆ: ನಮಸ್ಕಾರ ಸದ್ಗುರು. ನಿಮ್ಮಂತಹ ಗುರುಗಳ ಕಾರಣದಿಂದ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆ. ನನ್ನ ಸಾಧನೆಯನ್ನು ಮಾಡುವುದರೊಟ್ಟಿಗೆ ನಾನು ಸ್ವಯಂಸೇವಯನ್ನೂ ಸಹ ಮಾಡುತ್ತಿದ್ದೇನೆ. ಆದರೆ, ಅದನ್ನೂ ಮೀರಿ, ನಿಮಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುವ ಅತ್ಯುತ್ತಮ ಮಾರ್ಗ ಯಾವುದೆಂದು ನಿಜವಾಗಿಯೂ ನನಗೆ ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿಕೊಡಿ.

ಸದ್ಗುರು: ಕೃತಜ್ಞತೆ ಎನ್ನುವುದು ನೀವು ತೋರಿಸಬೇಕಾದ ವಿಷಯವಲ್ಲ. ಅದನ್ನು ನಿರೀಕ್ಷಿಸುತ್ತಿರುವ ಜನರಿಗೆ ನೀವು ಕೃತಜ್ಞತೆಯನ್ನು ಸಲ್ಲಿಸಬೇಕು.  ಇತರರು ಹೇಳುವ ಒಳ್ಳೆಯ ವಿಷಯಗಳಿಂದ ಅವರ ಜೀವನ ಉತ್ತಮವಾಗುತ್ತದೆ, ಏಕೆಂದರೆ ಅವರು ಯಾರು, ಅವರು ಏನು ಮತ್ತವರ ಯೋಗ್ಯತೆ ಏನೆಂದು ಅವರಿಗೇ ತಿಳಿದಿರುವುದಿಲ್ಲ. ಇದೊಂದನ್ನು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ - ನನ್ನ ಬಗ್ಗೆ ಯಾರಾದರೂ ಹೇಳುವ ಯಾವುದೇ ಒಳ್ಳೆಯ ವಿಷಯ ನನ್ನ ಜೀವನವನ್ನು ವರ್ಧಿಸುವುದಿಲ್ಲ, ಅಂತೆಯೇ ಅವರು ಹೇಳುವ ಯಾವುದೇ ಕೆಟ್ಟ ವಿಷಯವೂ ಕೂಡ ನನ್ನ ಜೀವನವನ್ನು ಕುಗ್ಗಿಸುವುದಿಲ್ಲ. 

 

ಆದ್ದರಿಂದ, ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವುದು, ಈ ಕೃತಜ್ಞತೆ ಎಂಬ ಅತ್ಯಮೂಲ್ಯ ವಸ್ತುವನ್ನು ವ್ಯರ್ಥಮಾಡಿದಂತೆ. ನೀವದನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಅದನ್ನು ನಿಮ್ಮ ಹೃದಯದೊಳಗಿಟ್ಟುಕೊಂಡರೆ, ಅದು ನಿಮ್ಮ ಹೃದಯ ಮತ್ತು ನಿಮ್ಮನ್ನು ಮೆದುವಾಗಿಸುತ್ತದೆ. ಅದು ನಿಮ್ಮೊಳಗಿರುವ ಎಲ್ಲವನ್ನೂ ಕರಗಿಸುತ್ತದೆ.

ನೀವು ಕರಗಿದರೆ, ಸ್ವಾಭಾವಿಕವಾಗಿ ನಿಮ್ಮ ಸುತ್ತಲೂ ವ್ಯಾಪಿಸುತ್ತೀರಿ. ಇದು ನೀವು ಮಾಡಬಹುದಾದ ಅತ್ಯುತ್ತಮ ಸಂಗತಿ. ಆದರೆ, ನೀವಿನ್ನೂ ಏನನ್ನಾದರು ಮಾಡಲು ಬಯಸುತ್ತಿರುವ ಸ್ಥಿತಿಯಲ್ಲಿರುವ ಕಾರಣ, ನಾನೇಕೆ ಈ ಅವಕಾಶವನ್ನು ವ್ಯರ್ಥ ಮಾಡಬೇಕು?

ಅಚ್ಚರಿಯ ಮುಖಾಮುಖಿಗಳು

Sadhguru talking to children | How Do You Show Your Gratitude For Your Guru?

 

ನಾನು ಇತ್ತಿಚಿಗಷ್ಟೆ ದೆಹಲಿಯಲ್ಲಿ ಭಾರತೀಯ ವಾಯುಪಡೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ. ಸಭೆಯಲ್ಲಿದ್ದವರು ವಾಯುಪಡೆಯ ಶಿಕ್ಷಕರು - ಇವರು ದೇಶಾದ್ಯಂತ ಮೂರು ಸಾವಿರ ಶಾಲೆಗಳನ್ನು ನಡೆಸುತ್ತಿದ್ದಾರೆ. ನಾನು ಸಭೆಯಿಂದ ಹೊರಬಂದು ಕಾರನ್ನು ಹತ್ತುತ್ತಿರುವಾಗ, ಹದಿನಾಲ್ಕು-ಹದಿನೈದು ವರ್ಷದ ಬಾಲಕಿಯರು ಕುಣಿಯುತ್ತ, "ಸದ್ಗುರು, ಸದ್ಗುರು, ಸದ್ಗುರು" ಎಂದು ಕೂಗುತ್ತಿರುವುದನ್ನು ನೋಡಿದೆ. "ಸದ್ಗುರು, ಸದ್ಗುರು ಎಂದು ಏಕೆ ಕೂಗುತ್ತಿದ್ದೀರ? ನಾನ್ಯಾರು ಎಂದು ನಿಮಗೆ ಹೇಗೆ ಗೊತ್ತು?" ಎಂದು ನಾನವರನ್ನು ಕೇಳಿದೆ. ಅದಕ್ಕವರು, "ಸದ್ಗುರು, ನಾವು ನಿಮ್ಮನ್ನು ಫಾಲೋ ಮಾಡ್ತೀವಿ. ನಿಮ್ಮ ಸಂದರ್ಶನಗಳನ್ನ ಕೇಳ್ತೀವಿ" ಎಂದರು. ಅದಕ್ಕೆ ನಾನು "ಖಂಡಿತ ನಿಮ್ಗೆ ಬೋರ್ ಆಗಿರುತ್ತೆ." ಎಂದೆ. "ಇಲ್ಲ, ನಮಗದು ತುಂಬಾ ಇಷ್ಟ ಆಗುತ್ತೆ ಸದ್ಗುರು, ಯೂ ರಾಕ್ ಸದ್ಗುರು!" ಎಂದವರು ಹೇಳಿದರು.

“ನಮ್ಮ ಕ್ಲಾಸ್‌ನಲ್ಲಿರುವವರೆಲ್ಲರಿಗೂ ನೀವು ಯಾರೆಂದು ಗೊತ್ತು. ನಾವೆಲ್ಲ ನಿಮ್ಮ ವೀಡಿಯೋಗಳನ್ನ ನೋಡ್ತೀವಿ. ಯೂ ಆರ್ ಕೂಲ್, ಸದ್ಗುರು.”

ನಂತರ, ರ್ಯಾ ಲಿ ಫಾರ್ ರಿವರ್ಸ್‌ನ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳಲು ನಾನು ಬೆಂಗಳೂರಿಗೆ ಬಂದೆ. ಸಭೆ ಮುಗಿದ ನಂತರ, ನಾನು ಅಲ್ಲೇ ಇದ್ದ ಉದ್ಯಾನದಲ್ಲಿ ಯಾರನ್ನೋ ಭೇಟಿಯಾಗಿ ಮಾತನಾಡುತ್ತಿದ್ದೆ. ಮೂವರು ಹುಡುಗರು, ಹತ್ತು-ಹನ್ನೊಂದು ವಯಸ್ಸಿನವರು - ನನ್ನ ಬಳಿ ಬಂದು, "ಸದ್ಗುರು, ನಾವು ನಿಮ್ಮೊಂದಿಗೆ ಒಂದು ಫೋಟೋವನ್ನು ತೆಗೆದುಕೊಳ್ಳಬಹುದೇ?" ಎಂದು ಕೇಳಿದರು. ಅದಕ್ಕೆ ನಾನು, “ನಾನು ಯಾರೆಂದು ನಿಮಗೆ ಹೇಗೆ ಗೊತ್ತು?" ಎಂದು ಕೇಳಿದೆ. ಅದಕ್ಕವರು, "ನಾವು ನಿಮ್ಮ ವೀಡಿಯೋಗಳನ್ನ ನೋಡ್ತೀವಿ.” ಎಂದರು. ನಾನು, "ಏನು? ನಿಮ್ಮ ತಾಯಂದಿರು ನಿಮಗೆ ಬಲವಂತ ಮಾಡಿಸಿ ನೋಡಿಸುತ್ತಿರಬೇಕು." ಎಂದೆ. ಅವರು, "ಇಲ್ಲ, ನಮ್ಮ ಸ್ಕೂಲ್‌ನಲ್ಲಿ ನಾವು ಮತ್ತು ನಮ್ಮ ಸ್ನೇಹಿತರೆಲ್ಲರೂ ನಿಮ್ಮ ವೀಡಿಯೋಗಳನ್ನು ನೋಡ್ತೀವಿ." ಎಂದು ಹೇಳಿದಾಗ ನನಗದನ್ನು ನಿಜವಾಗಿಯೂ ನಂಬಲಾಗಲಿಲ್ಲ. “ನಮ್ಮ ಕ್ಲಾಸ್‌ನಲ್ಲಿರುವವರೆಲ್ಲರಿಗೂ ನೀವು ಯಾರೆಂದು ಗೊತ್ತು. ನಾವೆಲ್ಲ ನಿಮ್ಮ ವೀಡಿಯೋಗಳನ್ನ ನೋಡ್ತೀವಿ. ಯೂ ಆರ್ ಕೂಲ್, ಸದ್ಗುರು.” ಎಂದರು. ಹತ್ತು ವರ್ಷದ ಹುಡುಗರು ಸ್ವತಃ ತಾವಾಗಿಯೇ ಆಧ್ಯಾತ್ಮಿಕ ವಿಷಯಗಳತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನುವುದು ಒಂದು ಅದ್ಭುತವಾದ ಸಂಗತಿ ಎಂದು ನನಗನಿಸಿತು.

ಸಾಯುತ್ತಿರುವವರು ಹಿಡಿದಿರುವ ಹುಲ್ಲುಕಡ್ಡಿಯಿಂದ ಒಂದು ಜೀವಂತ ಅನುಭವದ ಕಡೆಗೆ

ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಆಕರ್ಷಕವಾಗಿ ಮಾಡುವುದೇ ಸದಾ ನಮ್ಮ ಗುರಿಯಾಗಿದ್ದಿತು. ಸಾಯುತ್ತಿರುವವರಿಗೆ ಏನನ್ನಾದರೂ ಮಾಡುವುದು ನಮ್ಮ ಉದ್ದೇಶವಲ್ಲ., ಸಾವಿನ ಭಯ ಹೇಗಿದ್ದರೂ ಅವರ ಬಾಯಿಂದ "ರಾಮ, ರಾಮ" ಎಂದು ಹೇಳಿಸುತ್ತದೆ. ಆ ರೀತಿಯ ಆಧ್ಯಾತ್ಮಿಕತೆಯ ಬಗ್ಗೆ ನಾವು ಮಾತನಾಡುತ್ತಿಲ್ಲ. ಪರಿಪೂರ್ಣವಾದ ಬದುಕನ್ನು ಬದುಕಲು ಹಂಬಲಿಸುವವರು ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಅರಸುತ್ತಾರೆ. ಆಧ್ಯಾತ್ಮಿಕ ಪ್ರಕ್ರಿಯೆಯು ಒಂದು ಸಾಮಾನ್ಯವಾದ ಪ್ರಕ್ರಿಯೆಯಾಗಬೇಕು, ಅದೊಂದು ಜೀವನ ಶೈಲಿಯಾಗಬೇಕು. ಜನರು ಬದುಕುವ ರೀತಿಯೇ ಆಧ್ಯಾತ್ಮಿಕವಾಗಿರಬೇಕು.

ಪರಿಪೂರ್ಣವಾದ ಬದುಕನ್ನು ಬದುಕಲು ಹಂಬಲಿಸುವವರು ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಅರಸುತ್ತಾರೆ. 

ಮಾನವ ಜಾಗೃತಿ ಎನ್ನುವುದು ಎಲ್ಲೋ ಒಂದು ಮೂಲೆಯಲ್ಲಿ ಸಂರಕ್ಷಿಸಿಡುವಂತದ್ದಲ್ಲ. ಆ ಜಾಗೃತಿ ವಿಶ್ವದಲ್ಲೆಲ್ಲಾ ಹರಡಿ ಜೀವಿಸಬೇಕು. ಹತ್ತು ವರ್ಷದ ಹುಡುಗರು ಆಧ್ಯಾತ್ಮಿಕ ಚರ್ಚೆಗಳನ್ನು ನೋಡುವುದು ತುಂಬ ಒಳ್ಳೆಯ ವಿಷಯ. ನನಗೆ ಹತ್ತು-ಹನ್ನೊಂದು ವರ್ಷವಿದ್ದಾಗ, ಖಂಡಿತವಾಗಿಯೂ ನಾನು ಹೀಗಿರಲಿಲ್ಲ, ನಾನು ಬೇರೆಯದ್ದೇ ರೀತಿಯಲ್ಲಿದ್ದೆ. ನಾನು ಅಪರಿಮಿತವಾದ ದೈಹಿಕ ಸಾಮರ್ಥ್ಯ ಹೊಂದಿದ್ದಂತಹ ಒಬ್ಬ ವ್ಯಕ್ತಿಯನ್ನು ಸಂಧಿಸಿದ್ದೆ. ಅವರು ಸ್ಪೈಡರ್-ಮ್ಯಾನ್ ತರಹ ಗೋಡೆಗಳನ್ನು ಹತ್ತುತ್ತಿದ್ದರು. ಆಧ್ಯಾತ್ಮಿಕತೆಗಾಗಲ್ಲ, ಅವರು ನನ್ನನ್ನು ಅತಿಮಾನುಷನನ್ನಾಗಿ ಪರಿವರ್ತಿಸುತ್ತಾರೆಂದು ಯೋಚಿಸಿ ನಾನು ಅವರ ಬಗ್ಗೆ ಆಸಕ್ತನಾದೆ. ಆದರೆ ಈಗ ನಾನು ಮಾಡುತ್ತಿರುವ ’ಸರ್ಕಸ್’ಗಳೆಲ್ಲವೂ ಮಕ್ಕಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿವೆ ಎನ್ನುವುದನ್ನು ನೋಡಲು ನನಗೆ ತುಂಬ ಖುಷಿಯಾಗಿದೆ.

 

ಸದ್ಯದಲ್ಲಿ ನಾವು ಜಾಗತಿಕ ಹೊರಹೊಮ್ಮುವಿಕೆಗೆ ಸಿದ್ಧರಾಗಿದ್ದೇವೆ. ಇದನ್ನು ನೀವು ಈಶ ಸಂಸ್ಥೆ ಅಥವಾ ಸದ್ಗುರುಗಳಿಗೆ ಒಂದು ದೊಡ್ಡ ವಿಷಯವೆಂದು ಪರಿಗಣಿಸಬಾರದು. ಇಲ್ಲಿ ವಿಷಯ ಅದಲ್ಲ. ನೀವು ಗಮನಿಸಬೇಕಾದ ಅಂಶವೆಂದರೆ, ಚಿಕ್ಕ ಮಕ್ಕಳು ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ಆಸಕ್ತರಾಗುತ್ತಿದ್ದಾರೆ ಎನ್ನುವುದು. ಇಲ್ಲಿಯವರೆಗೆ ಆಧ್ಯಾತ್ಮಿಕತೆಯನ್ನು ಸಾಯುತ್ತಿರುವವರ ನೇತುಹಾಕಿಕೊಳ್ಳುವ ಕೊನೆಯ ವಿಷಯವಾಗಿ ನೋಡಲಾಗುತ್ತಿತ್ತು; ಮುಳುಗುತ್ತಿರುವವರು ಒಂದು ಹುಲ್ಲುಕಡ್ಡಿಯನ್ನು ಆಸರೆಯಾಗಿ ಹಿಡಿದುಕೊಂಡಂತೆ.

ಮೂರ್ಖತನದ ಕೆಲಸಗಳನ್ನು ಮಾಡುತ್ತಾ, ಅವರು ತಮ್ಮ ಇಡೀ ಜೀವನವನ್ನು ಅರಿವಿಲ್ಲದ ರೀತಿಯಲ್ಲಿ ಕಳೆದಿರುತ್ತಾರೆ. ಅವರು ಮಾಡಿದ್ದು ಇಷ್ಟೇ - ಕೂಡಿಡುವುದು, ಕೂಡಿಡುವುದು ಮತ್ತು ಕೂಡಿಡುವುದು ಮಾತ್ರ - ಅದು ಹಣವಾಗಿರಲಿ, ಸಂಪತ್ತಾಗಿರಲಿ ಅಥವಾ ಜ್ಞಾನವೇ ಆಗಿರಲಿ. ತಮ್ಮ ಪ್ರೀತಿ ಮತ್ತು ನಗುವನ್ನೂ ಸಹ ಅವರು ಬೇರೆಯವರಿಗೆ ಕೊಡದೆ ಕೂಡಿಟ್ಟುಕೊಂಡರು. ಬಳಿಕ ಅವರು ಸಾಯತ್ತಾರೆಂದು ಗೊತ್ತಾದಾಗ, ಮತ್ತು ಸತ್ತವರು ಬರಿಗೈಯಲ್ಲಿ ಹೋಗುವುದನ್ನು ನೋಡಿದಾಗ, ಇದ್ದಕ್ಕಿದ್ದ ಹಾಗೆ ಅವರು "ರಾಮ, ರಾಮ" ಎಂದು ಜಪಿಸಲು ಶುರುವಿಟ್ಟುಕೊಂಡರು.

ಬೆಂಗಳೂರಿನಲ್ಲಿ ಈ ಮೂವರು ಹುಡುಗರನ್ನು ಭೇಟಿಯಾದ ನಂತರ ನಾನು ಇದ್ದಕ್ಕಿದ್ದಂತೆ ಅತಿಯಾದ ಹುರುಪು ಮತ್ತು ಉತ್ಸಾಹದಿಂದ ತುಂಬಿದ್ದೇನೆ. ಹತ್ತು, ಹನ್ನೊಂದು ವರ್ಷದ ಬಾಲಕರು ಗುರುಗಳಲ್ಲಿ ಆಸಕ್ತರಾಗುವುದು ಒಂದು ಅತ್ಯದ್ಭುತವಾದ ವಿಷಯವೇ ಸರಿ.

ದುರದೃಷ್ಟಕರವಾಗಿ, ಈ ದೇಶದಲ್ಲಿ ಆಧ್ಯಾತ್ಮಿಕ ಪ್ರಕ್ರಿಯೆಯು ಕಳೆದ ಕೆಲವು ಶತಮಾನಗಳಲ್ಲಿ ಈ ರೀತಿಯಾಗಿಬಿಟ್ಟಿದೆ. ಬೆಂಗಳೂರಿನಲ್ಲಿ ಈ ಮೂವರು ಹುಡುಗರನ್ನು ಭೇಟಿಯಾದ ನಂತರ ನಾನು ಇದ್ದಕ್ಕಿದ್ದಂತೆ ಅತಿಯಾದ ಹುರುಪು ಮತ್ತು ಉತ್ಸಾಹದಿಂದ ತುಂಬಿದ್ದೇನೆ. ಹತ್ತು, ಹನ್ನೊಂದು ವರ್ಷದ ಬಾಲಕರು ಗುರುಗಳಲ್ಲಿ ಆಸಕ್ತರಾಗುವುದು ಒಂದು ಅತ್ಯದ್ಭುತವಾದ ವಿಷಯವೇ ಸರಿ.

ಕೃತಜ್ಞತೆಯಿಂದ ತುಂಬಿದ ಹೃದಯಗಳು

ಆದ್ದರಿಂದ, ನಾವು ಜಾಗತಿಕ ಹೊರಹೊಮ್ಮುವಿಕೆಯ ಹೊಸ್ತಿಲಿನಲ್ಲಿದ್ದೇವೆ. ಮತ್ತು ನಾವು ಸರಿಯಾದ ಕೆಲಸಗಳನ್ನು ಮಾಡಬೇಕಿದೆ. ಹೀಗಾದಾಗ, ನಮಗೆ ಬಹಳಷ್ಟು ಕೈಗಳ ಅವಶ್ಯಕತೆ ಇದೆ. ಮತ್ತು ಅವರ ಹೃದಯಗಳು ಕೃತಜ್ಞತೆಯಿಂದ ತುಂಬಿದ್ದರೆ, ನಾವದನ್ನು ಉತ್ತಮ ರೀತಿಗಳಲ್ಲಿ ಉಪಯೋಗಿಸಿಕೊಳ್ಳಲು ಬಯಸುತ್ತೇವೆ. ಒಂದು ಕ್ಷಣಕ್ಕಾದರೂ ನೀವೇನಾದರು ಮಾಡಬೇಕೆಂದುಕೊಂಡಿದ್ದೇ ಆದರೆ - ಅದನ್ನು ಮಾಡಲು ಇದೇ ಸರಿಯಾದ ಸಮಯ. ಇಂತಹ ಮತ್ತೊಂದು ಆಂದೋಲನವನ್ನು ನಡೆಸುವುದು ಸುಲಭದ ಮಾತಲ್ಲ. ನಾನಿದನ್ನು ಹಮ್ಮಿನಿಂದ ಹೇಳಿಕೊಳ್ಳುತ್ತಿಲ್ಲ - ಇದು ನನ್ನ ಬಗ್ಗೆಯಲ್ಲ. ಇದು ಆಧ್ಯಾತ್ಮಿಕತೆಯ ಬಗ್ಗೆ. ಇಂದು ಗಾಢವಾದ ಆಧ್ಯಾತ್ಮಿಕತೆಯನ್ನು ನಾವು ಒಪ್ಪಿಕೊಂಡಿರುವಂತೆ ಹಿಂದೆಂದೂ ಸಹ ಇಷ್ಟು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿರಲಿಲ್ಲ.

ನಾನು ಸತ್ತ ಬಳಿಕ ನನಗಾಗಿ ಒಂದು ಚಿನ್ನದ ಸ್ಮಾರಕವನ್ನು ನಿರ್ಮಿಸಬೇಡಿ. ಬಹುಶಃ ಸ್ಮಾರಕವನ್ನು ನಿರ್ಮಿಸಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ನಾನು ಸೃಷ್ಟಿಸುತ್ತೇನೆ, ಏಕೆಂದರೆ ನಾನು ಎಲ್ಲಿಗೆ ಹೋಗಿದ್ದೇನೆನ್ನುವುದೇ ನಿಮಗೆ ತಿಳಿಯುವುದಿಲ್ಲ. ನಾನು ಅದನ್ನಿನ್ನೂ ನಿರ್ಧರಿಸಿಲ್ಲ. ಆದರೆ ನಾವ್ಯಾರೂ ಸಹ ಸ್ಮಾರಕವಾಗಿರಲು ಇಷ್ಟಪಡುವುದಿಲ್ಲ ಅಲ್ಲವೆ? ನಾನೊಂದು ಸ್ಮಾರಕವಾಗಬೇಕೆಂದು ನೀವು ಬಯಸುತ್ತೀರ? ಇಲ್ಲ. ನನ್ನಲಿರುವ ಸಾಧ್ಯತೆಗಳು ಭೂಮಿಯಲ್ಲಿನ ಜೀವಂತ ಶಕ್ತಿಯಾಗಬೇಕು. ಅದು ಪ್ರತಿಯೊಬ್ಬರ ಹೃದಯದಲ್ಲೂ ಬದುಕಿರಬೇಕು.

ನಿಮ್ಮ ಹೃದಯದಲ್ಲಿ ಕೃತಜ್ಞತೆ ತುಂಬಿ ತುಳುಕುತ್ತಿದ್ದರೆ, ಅದನ್ನಲ್ಲೇ ಇಟ್ಟುಕೊಳ್ಳಿ. ನಿಮ್ಮ ದಾರಿಗೆ ಅಡ್ಡ ಬರುವ ಆ ಮೆದುಳನ್ನದು ಕರಗುವಂತೆ ಮಾಡಲಿ. ನೀವು ನನಗಾಗಿ ಏನನ್ನಾದರೂ ಮಾಡಬೇಕೆಂದು ಎಂದಾದರೂ ಯೋಚಿಸಿದ್ದೇ ಆದರೆ, ಅದನ್ನು ಮುಂದಿನ ಆರು ತಿಂಗಳಿನಿಂದ ಒಂದು ವರ್ಷದೊಳಗೆ ಮಾಡಿ, ಏಕೆಂದರೆ, ಈಗ ಅದರ ಅಗತ್ಯ ಬಹಳಷ್ಟಿದೆ.

ಸಂಪಾದಕರ ಟಿಪ್ಪಣಿ: ಆಧ್ಯಾತ್ಮಿಕ ಅನ್ವೇಷಕರುಗಳಿಗೆ ಅವರ ಎಲ್ಲಾ ಮಿತಿಗಳನ್ನು ಮೀರಿ ಹೋಗುವ ಅಪೂರ್ವ ಸಾಧ್ಯತೆಯನ್ನು ನೀಡಿ, ಅವರ ಪರಮ ವಿಮೋಚನೆಯ ಕಡೆಗಾದ ಅತೀಂದ್ರಿಯ ಪಯಣದಲ್ಲಿ ಸದ್ಗುರುಗಳು ಅವರನ್ನು ಕೊಂಡೊಯ್ಯುತ್ತಾರೆ. ಗುರು-ಶಿಷ್ಯರ ಸಂಬಂಧದ ಬಗ್ಗೆಯಾದ ಅಪರೂಪದ ಒಳನೋಟಗಳನ್ನು ಅವರು ಈ ಇಬುಕ್‌ನಲ್ಲಿ ವಿವರಿಸುತ್ತಾರೆ. ನಿಮ್ಮಿಷ್ಟದ ಬೆಲೆಯನ್ನು ನೀಡಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಿ. Name your price and download.

ಈ ಲೇಖನದ ಮೂಲ ಆವೃತ್ತಿ, ಸೆಪ್ಟೆಂಬರ್ 2018 ರ ಈಶ ಫಾರೆಸ್ಟ್ ಫ್ಲವರ್‌‌ ಮ್ಯಾಗ್‌ಸೀನ್‌ನಲ್ಲಿ ಪ್ರಕಟವಾಗಿರುತ್ತದೆ.