Login | Sign Up
logo
Donate
search
Login|Sign Up
Country
  • Sadhguru Exclusive
Also in:
বাংলা
English

ಮಾಸಿಕ ಸತ್ಸಂಗ

ಇನ್ನರ್ ಇಂಜಿನಿಯರಿಂಗ್‌ನ ನಿಮ್ಮ ಅನುಭವವನ್ನು ಗಾಢವಾಗಿಸಲು ಮತ್ತು ನಿಮ್ಮ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳಲು ನಿಮಗೊಂದು ಅವಕಾಶ.

7:30 AM IST, ಫೆಬ್ರವರಿ 2, 2025

(ಪ್ರತಿ ತಿಂಗಳ ಮೊದಲ ಭಾನುವಾರ)

ಆನ್‌ಲೈನ್ ನಲ್ಲಿ ಅಥವಾ ಖುದ್ದಾಗಿ ಬಂದು ಭಾಗವಹಿಸುವ ಸೌಲಭ್ಯವಿದೆ

ಮುಖ್ಯಾಂಶಗಳು

ಈಶಾಂಗ ಮಾರ್ಗದರ್ಶನದಲ್ಲಿ ಶಾಂಭವಿ ಮಹಾಮುದ್ರಾ ಕ್ರಿಯೆಯನ್ನು ಅಭ್ಯಾಸ ಮಾಡಿ

ನಿಮ್ಮ ಅಭ್ಯಾಸ-ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ

ಸದ್ಗುರುಗಳ ಮಾರ್ಗದರ್ಶನದಲ್ಲಿ ಶಕ್ತಿಯುತವಾದ ಧ್ಯಾನಗಳನ್ನು ಅನುಭವಿಸಿ

ಸದ್ಗುರುಗಳ ಸ್ಪೂರ್ತಿದಾಯಕ ಸತ್ಸಂಗಗಳನ್ನು ವೀಕ್ಷಿಸಿ

ಸತ್ಸಂಗಕ್ಕೆ ಹಾಜರಾಗುವ ವಿಧಾನಗಳು

ಖುದ್ದಾಗಿ ಹಾಜರಾಗಲು 

ನಿಮ್ಮ ಹತ್ತಿರದ ಕೇಂದ್ರದಲ್ಲಿ ಮಾಸಿಕ ಸತ್ಸಂಗಕ್ಕೆ ಹಾಜರಾಗಿ.
ದಿನಾಂಕ: ಫೆಬ್ರವರಿ 2, 2025
ಸಮಯ: ಬೆಳಗ್ಗೆ 7:30

ನನ್ನ ಹತ್ತಿರದ ಕೇಂದ್ರವನ್ನು ಹುಡುಕಿ
ಆನ್‍ಲೈನ್

ನಿಮ್ಮ ಮನೆಯ ಸೌಕರ್ಯದಿಂದ ಮಾಸಿಕ ಸತ್ಸಂಗಕ್ಕೆ ಹಾಜರಾಗಿ. It is available in English, Hindi, Tamil, Telugu, Kannada, Marathi and Bangla.
ದಿನಾಂಕ: ಫೆಬ್ರವರಿ 2, 2025
ಸಮಯ: ಬೆಳಗ್ಗೆ 7:30

ಮಾರ್ಗಸೂಚಿಗಳು

ಖುದ್ದಾಗಿ ಹಾಜರಾಗುವ ಸತ್ಸಂಗ

  • ಶಾಂಭವಿ ಮಹಾಮುದ್ರ ಕ್ರಿಯಾ ದೀಕ್ಷೆ ಪಡೆದವರಿಗೆ ಮಾತ್ರ ಸತ್ಸಂಗಕ್ಕೆ ಪ್ರವೇಶ.

  • ಖಾಲಿ ಹೊಟ್ಟೆಯ ಸ್ಥಿತಿಯನ್ನು ಕಾಯ್ದುಕೊಳ್ಳಿ.

  • ದಯವಿಟ್ಟು ಸಮಯಕ್ಕಿಂತ ಕನಿಷ್ಠ 15 ನಿಮಿಷಗಳ ಮುಂಚಿತವಾಗಿ ಕುಳಿತುಕೊಳ್ಳಿ.

ಆನ್‌ಲೈನ್ ಸತ್ಸಂಗ

  • ಖುದ್ದಾಗಿ ಹಾಜರಾಗುವ ಸತ್ಸಂಗದಂತೆಯೇ, ಶಾಂಭವಿ ಮಹಾಮುದ್ರ ಕ್ರಿಯಾ ದೀಕ್ಷೆ ಪಡೆದವರಿಗೆ ಮಾತ್ರ ಆನ್‌ಲೈನ್  ಸತ್ಸಂಗಕ್ಕೆ ಪ್ರವೇಶ.

  • ನಿಮ್ಮ ಕುಟುಂಬದ ಸದಸ್ಯರಾಗಿದ್ದರೂ, ದೀಕ್ಷೆ ಪಡೆಯದೇ ಯಾರೂ ಸತ್ಸಂಗದಲ್ಲಿ ಭಾಗವಹಿಸಲು ಅವಕಾಶವಿಲ್ಲ.

  • ಖಾಲಿ ಹೊಟ್ಟೆಯ ಸ್ಥಿತಿಯನ್ನು ಕಾಯ್ದುಕೊಳ್ಳಿ.

  • ಸದ್ಗುರುಗಳ ಛಾಯಾಚಿತ್ರ ಮತ್ತು ಅದರ ಮುಂದೆ ಬೆಳಗಿದ ದೀಪವನ್ನು ಇರಿಸುವ ಮೂಲಕ ನಿಮ್ಮ ಜಾಗದಲ್ಲಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಳ್ಳಿ. ನೆಲದ ಮೇಲೆ ಕುಳಿತುಕೊಳ್ಳುವುದು ಉತ್ತಮ.

  • ಈ ಸಮಯವನ್ನು ಸತ್ಸಂಗಕ್ಕಾಗಿ ಪ್ರತ್ಯೇಕವಾಗಿ ಮೀಸಲಿಡಿ, ಮತ್ತು ಸಂಪೂರ್ಣ ಅವಧಿಯವರೆಗೆ ಯಾವುದೇ ಅಡಚಣೆ (ರೆಸ್ಟ್ ರೂಂ ಅನ್ನು ಬಳಸುವುದು, ಕರೆಗಳಿಗೆ ಉತ್ತರಿಸುವುದು ಅಥವಾ ಸಂದೇಶಗಳನ್ನು ಪರಿಶೀಲಿಸುವುದು) ಇಲ್ಲದಂತೆ ಖಚಿತಪಡಿಸಿಕೊಳ್ಳಿ.

  • ಸ್ಥಿರವಾದ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದಾಗಿ ಖಚಿತಪಡಿಸಿಕೊಳ್ಳಿ.

  • ಲ್ಯಾಪ್‌ಟಾಪ್ ಮೂಲಕ ಹಾಜರಾಗುವುದು ಮತ್ತು ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡುವುದು ಉತ್ತಮ.

  • ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಕನಿಷ್ಠ 15 ನಿಮಿಷಗಳ ಮುಂಚಿತವಾಗಿ ಲಾಗ್ ಇನ್ ಮಾಡಲು ನಾವು ಶಿಫಾರಸು ಮಾಡುತ್ತೇವೆ, ಏಕೆಂದರೆ ಅಧಿವೇಶನವು ಸರಿಯಾಗಿ ಬೆಳಿಗ್ಗೆ 7:30ಕ್ಕೆ ಪ್ರಾರಂಭವಾಗುತ್ತದೆ.

 
Close