Col.ರಾಜ್ಯವರ್ಧನ್ ರಾಠೋಡ್: ತಾರುಣ್ಯದ ಸಮಯವೆ೦ದರೆ ಸವಾಲುಗಳು, ಗುರಿಗಳು, ಸಾಧನೆಗಳು ಮತ್ತು ಮಹತ್ವಾಕಾಂಕ್ಷೆಗಳಿಂದ ತುಂಬಿರುತ್ತದೆ. ಅನೇಕ ಯುವಕರು ಬೇರೆಯವರು ವ್ಯಾಖ್ಯಾನ ಮಾಡುವ ಯಶಸ್ಸನ್ನು ಬೆನ್ನಟ್ಟುತ್ತಾರೆ. ಅತಿಯಾದ ಸಂಪರ್ಕ ಮತ್ತು ಮಾಹಿತಿ ತುಂಬಿ ತುಳುಕಾಡುತ್ತಿರುವ ಈ ಯುಗದಲ್ಲಿ, ಅಧಿಕ ಮಾಹಿತಿಯ ಹೊರೆ ಮತ್ತು ಅತಿಯಾದ ಕೆಲಸದಿಂದಾಗುವ ಒತ್ತಡವೂ ಸೇರಿಕೊಂಡಿದೆ. ಇಂತಹ ಒತ್ತಡವು, ಯುವಜನರ ಸಂತೋಷವನ್ನು ಕಸಿದುಕೊಳ್ಳುತ್ತಿದೆ. ಯುವಜನರು ಖಿನ್ನತೆಗೊಳಗಾಗುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಕ್ಲಿಷ್ಟಕರವಾದ ಸಮಯದಲ್ಲಿ, ಯುವಜನರು ಯಾವಾಗಲೂ ಸಂತೋಷವಾಗಿರುವುದು ಹೇಗೆ? ನನಗೆ ಯುವಜನತೆ ಮತ್ತು ಸಂತೋಷದ ಬಗೆಗಿನ ಸತ್ಯವನ್ನು ತಿಳಿದುಕೊಳ್ಳಬೇಕಿದೆ.

ಸದ್ಗುರು: ನಮಸ್ಕಾರ ರಾಜ್. ಪ್ರತೀ ತಲೆಮಾರಿನಲ್ಲಿಯೂ, ಸದಾ ಯಾವುದೊ೦ದಾದರ ಬಗ್ಗೆಯಾದರೂ ದೂರುತ್ತಿರುವ ಜನರ ಗುಂಪೊಂದಿರುತ್ತದೆ ಮತ್ತು, ಖಂಡಿತವಾಗಿ, ಕಾಲದ ಪರಿಸ್ಥಿತಿಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿರುವ ಜನಗಳೂ ಸಹ ಇದ್ದಾರೆ.


ನಮ್ಮ ತಲೆಮಾರಿನವರಿಗೆ ಹೆಚ್ಚು ಅನುಕೂಲತೆಗಳು, ಸೌಕರ್ಯಗಳು ಇವೆ; ಜಗತ್ತು ಕೆಲವು ಸಾವಿರ ವರ್ಷಗಳ ಹಿ೦ದೆ ಚಲಿಸುತ್ತಿದ್ದ ವೇಗಕ್ಕಿ೦ತ ವೇಗವಾಗೇನು ಈಗ ಚಲಿಸುತ್ತಿಲ್ಲ. ಈಗಲೂ ಅದೇ ವೇಗದಲ್ಲೇ ಸುತ್ತುತ್ತಿದೆ. ಆದರೆ ತ೦ತ್ರಜ್ಞಾನದ ಪ್ರಗತಿಯಿ೦ದಾಗಿ ಜಗತ್ತಿನಲ್ಲಿ ಅ೦ತರ ಕಡಿಮೆಯಾಗಿದೆ ಎ೦ದು ನಮಗೆ ಅನ್ನಿಸುತ್ತಿದೆಯಷ್ಟೆ.

ಆದರೀಗ ಜನರು ಅವರ ಜೀವನವನ್ನು ಸುಲಭ ಮತ್ತು ಆರಾಮದಾಯಕಗೊಳಿಸಿದ ತ೦ತ್ರಜ್ಞಾನದ ಬಗ್ಗೆಯೇ ದೂರುತ್ತಿದ್ದಾರೆ. ಇಲ್ಲಿ ಸಮಸ್ಯೆ ಏನೆ೦ದರೆ, ನೀವು ನಿಭಾಯಿಸಬೇಕಾದ ಜೀವನಕ್ಕೆ ನೀವು ಸರಿಯಾದ ರೀತಿಯಲ್ಲಿ ತಯಾರಾಗಿಲ್ಲದೇ ಇರುವುದು.

ಮಾಹಿತಿ ಮಿತಿಮೀರಿಕೆಯ ಬಗ್ಗೆ ದೂರುತ್ತಿರುವ ಜನರು, ಸಾವಿರಾರು ವರ್ಷಗಳ ಹಿಂದೆ ಹೇಗಿರುತ್ತಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬೇಕು – ಕೇವಲ ಒಂದುನೂರು ಕಿಲೋಮೀಟರ್ ದೂರದಲ್ಲಿ ಏನು ನಡಿಯುತ್ತಿದೆ ಎ೦ದು ನಿಮಗೆ ತಿಳಿಯುತ್ತಿರಲಿಲ್ಲ. ಏನೋ ಒ೦ದು ಅದ್ಭುತವೋ ಅಥವಾ ಒ೦ದು ದೊಡ್ಡ ಅನಾಹುತವೋ ನೂರು ಕಿಲೋಮೀಟರ್ ದೂರದಲ್ಲಿ ನಡೆದರೆ, ಆ ಮಾಹಿತಿ ನಿಮಗೆ ಸಿಗುವುದಕ್ಕೆ ಒಂದು ಇಲ್ಲಾ ಎರಡು ತಿಂಗಳುಗಳು ಬೇಕಾಗುತ್ತಿತ್ತು. ಇವತ್ತು, ಪ್ರಪಂಚದಲ್ಲಿ ಎಲ್ಲೇ, ಏನೇ ನಡೆಯುತ್ತಿದ್ದರೂ ಅದು ನಿಮಗೆ ಬಹುಬೇಗನೆ ಗೊತ್ತಾಗುತ್ತದೆ.


ತಂತ್ರಜ್ಞಾನದಲ್ಲಿ ನಾವು ಇ೦ದೆ೦ದಿಗಿ೦ತಲೂ ಸಶಕ್ತವಾಗಿದ್ದೇವೆ. ನಮ್ಮ ಪೀಳಿಗೆಗಿರಬಹುದಾದ ಮಹತ್ವವಾದ ಸವಲತ್ತುಗಳಲ್ಲಿ ಇದೂ ಒ೦ದು. ಆದರೀಗ ಜನರು ಅವರ ಜೀವನವನ್ನು ಸುಲಭ ಮತ್ತು ಆರಾಮದಾಯಕಗೊಳಿಸಿದ ತ೦ತ್ರಜ್ಞಾನದ ಬಗ್ಗೆಯೇ ದೂರುತ್ತಿದ್ದಾರೆ. ಇಲ್ಲಿ ಸಮಸ್ಯೆ ಏನೆ೦ದರೆ, ನೀವು ನಿಭಾಯಿಸಬೇಕಾದ ಜೀವನಕ್ಕೆ ನೀವು ಸರಿಯಾದ ರೀತಿಯಲ್ಲಿ ತಯಾರಾಗಿಲ್ಲದೇ ಇರುವುದು. 
 

ನಿಮ್ಮ ಸಾಮರ್ಥ್ಯಗಳನ್ನು ವರ್ಧಿಸಿಕೊಳ್ಳಿ

ನೀವು ಒಂದು ಸಾವಿರ ವರ್ಷಗಳ ಹಿಂದೆ ಜೀವಸಿರುತ್ತಿದ್ದರೆ ಹೇಗಿರುತ್ತಿತ್ತೆ೦ದು ಊಹಿಸಿಕೊಳ್ಳಿ. ಬೆಳಗ್ಗೆ ಎದ್ದ ನ೦ತರ, ನಿಮಗೆ ಉಪಯೋಗಿಸಲು ನೀರು ಬೇಕೆ೦ದರೆ, ನದಿಯವರೆಗೆ ನಡೆದುಕೊ೦ಡು ಹೋಗಿ, ಎರಡು ಬಕೆಟ್ ನೀರನ್ನು ಹೊತ್ತು ತರಬೇಕಿತ್ತು. ನನ್ನನ್ನು ನಂಬಿ, ಈಗಿನ ಯುವಕರಲ್ಲಿ ಹೆಚ್ಚಿನವರು, ಎರಡು ಬಕೆಟ್ ನೀರನ್ನು ಒಂದು ಮೈಲಿಯವರೆಗೆ ಹೊತ್ತುಕೊ೦ಡು ಹೋಗುವಷ್ಟು ಗಟ್ಟಿಮುಟ್ಟಾಗಿಲ್ಲ. ದೈಹಿಕವಾಗಿ ಅಂತಹ ಕೆಲಸವನ್ನು ಮಾಡುವ ಸಾಮರ್ಥ್ಯವೇ ಅವರಲ್ಲಿಲ್ಲ.

ನೀವು ಯಾರೆ೦ಬ ಆಂತರಿಕ ಬೆಳವಣಿಗೆಯ ಕಡೆ ಸಾಕಷ್ಟು ಗಮನ ಹರಿಸಿದರೆ, ಈಗಿನ ಪರಿಸ್ಥಿಯನ್ನ ನಿಭಾಯಿಸುವುದು ನಿರಾಯಾಸವಾಗಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಈ ಪೀಳಿಗೆಯಲ್ಲಿ ನಿಮಿಗೆ ನೀಡಲಾಗಿರುವ ಈ ಅಮೋಘವಾದ ಕೊಡುಗೆಗಳನ್ನು ನೀವು ದೂರವುದಿಲ್ಲ

ಒಂದು ವೇಳೆ, ಸಾವಿರಾರು ವರ್ಷಗಳ ಹಿಂದೆ, ತಂತ್ರಜ್ಞಾನವಿಲ್ಲದಿದ್ದಾಗ ನೀವಿಲ್ಲಿದ್ದಿದ್ದರೆ, ಆ ನೀರಿನ ಬಕೆಟನ್ನು ತುಟಿಕ್-ಪಿಟಿಕ್ ಎನ್ನದೆ ಎತ್ತಿಕೊ೦ಡು ಹೋಗುತ್ತಿದ್ದಿರ? ಇಲ್ಲ, ನೀವು ದೈಹಿಕವಾಗಿ ಸಮರ್ಥರಾಗಿಲ್ಲದ ಕಾರಣ, ಅದಕ್ಕೂ ಗೊಣಗಾಡುತಿರುತ್ತಿದ್ದಿರಿ. ಅದೇ ರೀತಿ, ಈಗಿನ ಕಾಲದ ಸಂಗತಿಗಳನ್ನು ನಿಭಾಯಿಸಲು, ನಿಮ್ಮನ್ನು ನೀವು ಮಾನಸಿಕವಾಗಿ ಸಮರ್ಥರನ್ನಾಗಿಸಿಕೊ೦ಡಿಲ್ಲವೆ೦ದರೆ, ಖಂಡಿತವಾಗಿಯೂ ಗೊಣಗುತ್ತೀರ. 


ನಿಮ್ಮನ್ನು ನೀವು ಜೀವನಕ್ಕೆ ಯೋಗ್ಯವಾದ ರೀತಿಯಲ್ಲಿ ರೂಪಿಸಿಕೊಳ್ಳಬೇಕು. ನಿಮ್ಮ ಜೀವನದ ಈ ಮೊದಲ ಹ೦ತದಲ್ಲಿ, ಅತ್ಯಂತ ಮುಖ್ಯವಾದ ವಿಷಯವೆ೦ದರೆ, ನಿಮ್ಮ ಮಹತ್ವಾಕಾಂಕ್ಷೆಗಳಲ್ಲ, ನಿಮ್ಮ ಆಸೆಗಳಲ್ಲ ಅಥವಾ ನೀವು ಹಂಬಲಿಸುವ ಜೀವನಶೈಲಿಗಳಲ್ಲ. ನೀವು ಗಮನ ಹರಿಸಬೇಕಾದ ಒಂದೇ ಒಂದು ವಿಷಯವೆಂದರೆ - ಈ ಜೀವವನ್ನು ಹೆಚ್ಚಿನ ಮಟ್ಟದ ಸಾಧ್ಯತೆಗೆ ಹೇಗೆ ಬೆಳೆಸುವುದು ಎ೦ದು. ನೀವು ಯಾರೆ೦ಬ ಆಂತರಿಕ ಬೆಳವಣಿಗೆಯ ಕಡೆ ಸಾಕಷ್ಟು ಗಮನ ಹರಿಸಿದರೆ, ಈಗಿನ ಪರಿಸ್ಥಿಯನ್ನ ನಿಭಾಯಿಸುವುದು ನಿರಾಯಾಸವಾಗಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಈ ಪೀಳಿಗೆಯಲ್ಲಿ ನಿಮಿಗೆ ನೀಡಲಾಗಿರುವ ಈ ಅಮೋಘವಾದ ಕೊಡುಗೆಗಳನ್ನು ನೀವು ದೂರವುದಿಲ್ಲ.


ಹಿಂದೆಂದೂ, ಭಾರತದಿಂದ ಅಮೇರಿಕಾಗೆ ಹದಿನಾಲ್ಕು ಗಂಟೆಗಳಲ್ಲಿ ಪ್ರಯಾಣಿಸಲು ಸಾಧ್ಯವಿರಲಿಲ್ಲ, ಅಥವಾ ಸುಮ್ಮನೆ ಫೋನ್ ಎತ್ತಿ ಜಗತ್ತಿನ ಯಾವುದೇ ಭಾಗದಲ್ಲಿರುವವರ ಜೊತೆ ಮಾತಾನಾಡಲು ಸಾಧ್ಯವಿರಲಿಲ್ಲ. ಜಗತ್ತಿನಾದ್ಯಂತ, ಅಷ್ಟೇ ಏಕೆ, ಬಾಹ್ಯಾಕಾಶದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ನೋಡಲು ಸಹ ಸಾಧ್ಯವಾಗುತ್ತಿರಲಿಲ್ಲ. ಆಧುನಿಕ ತಂತ್ರಜ್ಞಾನದಿ೦ದಾಗಿ ನಿಮ್ಮ ಸಹಜ ದೃಷ್ಟಿಯಿ೦ದಾಚೆಗೆ ನೋಡಲು, ನಿಮ್ಮ ಸಹಜ ಶ್ರವಣದಿ೦ದಾಚೆಗೆ ಕೇಳಿಸಿಕೊಳ್ಳಲು ಮತ್ತು ನಿಮ್ಮ ಇ೦ದ್ರಿಯಗಳಿ೦ದಾಚೆಯ ಅನುಭವಗಳನ್ನು ಹೊ೦ದಲು ಸಾಧ್ಯವಾಗಿದೆ.
 

ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ

ನಿಮ್ಮ ಸುತ್ತಲಿನ ತಂತ್ರಜ್ಞಾನ, ಬಹಳ ವೇಗವಾಗಿ, ಪ್ರತಿ ಕೆಲ ತಿಂಗಳು ಅಥವಾ ವರ್ಷಾನುವರ್ಷ ಸುಧಾರಣೆಯಾಗುತ್ತಲೇ ಇದೆ. ನಿಮ್ಮನ್ನು ನೀವು ಸುಧಾರಿಸಿಕೊಳ್ಳುವ ಸಮಯವಿದು. Inner Engineering ಅಥವಾ ಯೋಗವೆ೦ದರೆ ಇದೇ – ನಿಮ್ಮ ಗಮನವನ್ನು ಈ ಜೀವದ ಸಾಮರ್ಥ್ಯವನ್ನು ಸುಧಾರಿಸುವ ಕಡೆಗೆ ನೀಡುವುದು. ನಿಮ್ಮ ಸಾಮರ್ಥ್ಯವನ್ನು ವರ್ಧಿಸಿಕೊಳ್ಳದೆ ಕೇವಲ ನಿಮ್ಮ ಚಟುವಟಿಕೆಯನ್ನು ಹೆಚ್ಚಿಸಿಕೊ೦ಡರೆ ಖ೦ಡಿತವಾಗಿ ನೀವು ಆ ಚಟುವಟಿಕೆಯಲ್ಲಿ ನರಳಾಡುತ್ತೀರಿ. ಇದು ಹೇಗೆ೦ದರೆ, ಹಳೆಯ ಒ೦ದು ಗುಜರಿಗಾಡಿಯನ್ನು F1 ಟ್ರ್ಯಾಕಿನಲ್ಲಿ ಓಡಿಸಿದರೆ ಅದು ಚಿ೦ದಿಯಾಗುತ್ತದೆ. ಜನಗಳಿಗಾಗುತ್ತಿರುವುದು ಇದೇ.

ಕೇವಲ ಹೊಟ್ಟೆಪಾಡಿಗಾಗಿ ಅಥವಾ ಬರೀ ಒಂದು ಕೆಲಸ ಹುಡುಕಿಕೊಳ್ಳುವ ಸಲುವಾಗಿ ನಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಬದಲು ಅವರಿಗೆ ತಮ್ಮನ್ನು ತಾವು ವರ್ಧಿಸಿಕೊಳ್ಳಲು ತರಬೇತಿ ನೀಡಬೇಕು.  
ಸ್ವಯಂ ಪರಿವರ್ತನೆಯ ಸಾಧನಗಳು, ಈ ಯುಗಕ್ಕೆ ಬಹಳ ಮುಖ್ಯವಾದ ಅವಶ್ಯಕತೆಗಳಾಗಿವೆ. ಏಕೆ೦ದರೆ, ಹೊರಗಿನ ಪರಿಸ್ಥಿತಿಗಳನ್ನು ಈಗ ಹೆಚ್ಚಾಗಿ machine ಗಳೇ ನಿಭಾಯಿಸುತ್ತಿವೆ. ನೀವು ನಿಭಾಯಿಸುವ machine ಗಳಿಗಿಂತ ನೀವು ಹೆಚ್ಚು ಜಾಣರಾಗಿರುವುದು ತು೦ಬಾ ಮುಖ್ಯ.

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image