ಕಂಗನಾ ರನೌತ್: ಸದ್ಗುರು, ನಾವು ಕರ್ಮ ಬಂಧಗಳನ್ನು ಮುರಿಯುವುದಕ್ಕೆ ಪ್ರಯತ್ನಿಸಬೇಕು ಎಂದು ನೀವು ಹೇಳುತ್ತೀರಿ. ಆದರೆ, ಅದೇ ಸಮಯದಲ್ಲಿ, ನಾವು ಒಳಗೂಡಿಸಿಕೊಳ್ಳುವಿಕೆಯನ್ನು ಅಳವಡಿಸಿಕೊಳ್ಳಬೇಕು, ಮಾಡುವುದರೆಲ್ಲದರಲ್ಲೂ ನಮ್ಮನ್ನು ನಾವು ಬಹಳವಾಗಿ ತೊಡಗಿಸಿಕೊಳ್ಳಬೇಕೆಂದು ಪ್ರೇರೆಪಿಸುತ್ತೀರಿ. ಇವೆರಡೂ ಒಟ್ಟಿಗೆ ಇರುವುದಕ್ಕೆ ಹೇಗೆ ಸಾಧ್ಯ?

ಸದ್ಗುರು: ನಮಸ್ಕಾರಮ್ ಕ೦ಗನಾ. ಇವೆರಡರಲ್ಲಿ ನೀವು ವೈರುದ್ಧ್ಯವನ್ನ ಹೇಗೆ ನೋಡುತ್ತೀರ? ಕರ್ಮವೆ೦ದರೆ, ನಮ್ಮ ಭೌತಿಕ, ಮಾನಸಿಕ, ಭಾವನಾತ್ಮಕ ಮತ್ತು ಪ್ರಾಣಶಕ್ತಿಯ ಮೂಲಕ ನಾವು ಮಾಡುವ ಕೆಲಸಗಳ ಅಳೆದುಳಿದ ನೆನಪು. ಇನ್ನೊಂದು ರೀತಿಯಲ್ಲಿ ಹೇಳಬೇಕೆ೦ದರೆ, ಅದು ನೀವೇ ಸೃಷ್ಟಿಸುವು ಒಂದು ಸುಪ್ತಪ್ರಜ್ಞೆಯ ಸಾಫ್ಟ್ವೇರ್ ಆಗಿದೆ. ಹಲವಾರು ಹಂತಗಳಲ್ಲಿ ನಿಮ್ಮ ಜೀವನವನ್ನು ಆಳುವ ನಿರ್ದಿಷ್ಟ ಪ್ರಮಾಣದ ನೆನಪುಗಳವು. 

 

ಭೌತಿಕ ನೆನಪುಗಳು, ಮಾನಸಿಕ ನೆನಪುಗಳು, ಭಾವನಾತ್ಮಕ ನೆನಪುಗಳು ಮತ್ತು ಪ್ರಾಣಶಕ್ತಿಯ ನೆನಪುಗಳಿವೆ – ನೀವು ಎಡೆಮಾಡಿಕೊಟ್ಟಲ್ಲಿ, ಇವೆಲ್ಲಾ ಒಟ್ಟಾಗಿ ಸೇರಿ, ನಿಮ್ಮ ಜೀವನವನ್ನು ನಿಯಂತ್ರಿಸುತ್ತವೆ. ಹಾಗಾಗಿ, ನೆನಪು, ಅದೆಷ್ಟೇ ಇರಲಿ, ಅದು ಬಹಳ ಸೀಮಿತ. ಅದೊ೦ದು ಸೀಮಿತವಾದ ಗಡಿ. 

ಕರ್ಮವೆ೦ದರೆ ಒ೦ದು ಸೀಮಿತವಾದ ಗಡಿ. ಆ ನಿರ್ಧಿಷ್ಟ ಗಡಿಯ ಒಳಗೆ ಕರ್ಮವೆ೦ಬುದು ಬಹಳ ಉಪಯುಕ್ತ.

ಹಾಗಾಗಿ, ಕರ್ಮವೆ೦ದರೆ ಒ೦ದು ಸೀಮಿತವಾದ ಗಡಿ. ಆ ನಿರ್ಧಿಷ್ಟ ಗಡಿಯ ಒಳಗೆ ಕರ್ಮವೆ೦ಬುದು ಬಹಳ ಉಪಯುಕ್ತ ಮತ್ತದು ಅನೇಕ ವಿಷಯಗಳನ್ನು ಸುಗಮಗೊಳಿಸುತ್ತದೆ. ಅದು ನಿಮ್ಮನ್ನು ಸ್ವಲ್ಪ ಯಾಂತ್ರಿಕವಾಗಿಸುತ್ತದೆ, ಏಕೆ೦ದರೆ ನೀವಾಗ ಹಲವಾರು ವಿಷಯಗಳಿಗೆ ಅನಾಯಾಸವಾಗಿ ಪ್ರತಿಕ್ರಿಯಿಸಬಹುದು.

ಆದರೆ ನೀವು ವಿಸ್ತಾರಗೊಳ್ಳಬೇಕು ಎ೦ದಾಗ, ಗಡಿ ಎನ್ನುವುದೊ೦ದು ಸಮಸ್ಯೆ. ಉದಾಹರಣೆಗೆ, ನಿಮ್ಮ ಮನೆಯ ಸುತ್ತ ನೀವೊ೦ದು ಗಡಿರೇಖೆಯನ್ನು ಎಳೆದಿರಿ ಎಂದೆಣಿಸೋಣ. ನಿಮಗೆ ವಿಸ್ತರಣೆಗೊಳ್ಳಬೇಕು ಎ೦ದೆನಿಸಿದಾಗ ಅದು ತುಂಬ ಸುಲಭ. ನೀವದನ್ನು ದಾಟಿ ಹೋಗಬೇಕಷ್ಟೆ. ಆದರೆ ಒಂದು ವೇಳೆ, ನಿಮ್ಮ ಜೀವಕ್ಕೆ ಮತ್ತು ನಿಮ್ಮ ಉಳಿವಿಗೆ ಸ೦ಚಕಾರವಿದೆ ಎಂದಾಗ, ದಪ್ಪ ಗೋಡೆಯ ಕೋಟೆಯೊ೦ದನ್ನು ನಿಮ್ಮ ಸುತ್ತ ಕಟ್ಟಿಕೊ೦ಡಿರಿ. 

ಒಳಗೂಡಿಸಿಕೊಳ್ಳುವುದು ಎಂದರೆ ಎಲ್ಲರೊಂದಿಗೆ ಸ್ನೇಹದಿಂದ ಇರುಬೇಕೆನ್ನುವ ವಿಚಾರವಲ್ಲ. ಅಸ್ತಿತ್ವದ ಸಹಜಗುಣವೇ ಒಳಗೂಡಿಸಿಕೊಳ್ಳುವಿಕೆಯಾಗಿದೆ.

ಅಪಾಯವಿದ್ದಾಗ, ನಿಮಗದು ಸುರಕ್ಷಿತವೆ೦ದೆನಿಸುತ್ತದೆ. ಆದರೆ ನಿಮ್ಮ ಜೀವಕ್ಕೆ ಯಾವ ರೀತಿಯ ಅಪಾಯವೂ ಇಲ್ಲದಾಗ, ಸಹಜವಾಗಿಯೆ, ನೀವು ವಿಸ್ತಾರಗೊಳ್ಳಲು ಬಯಸುವಿರಿ.  ವಿಸ್ತಾರಗೊಳ್ಳಬೇಕು ಎ೦ದುಕೊ೦ಡಾಗ, ಈ ಭಾರಿ ಗೋಡೆಯನ್ನು ಸರಿಸಿ, ನಿಮ್ಮ ಗಡಿಯನ್ನು ವಿಸ್ತರಿಕೊಳ್ಳುವುದು ಬಹಳ ಕಷ್ಟವಾಗತ್ತದೆ. ಬಹುಶಃ, ಆ ಗೋಡೆಯ ಕಾರಣದಿಂದಲೇ ನೀವು ವಿಸ್ತರಿಸಿಕೊಳ್ಳಲು ಹೋಗುವುದಿಲ್ಲ. 

ಅದೇ ರೀತಿಯಲ್ಲಿ, ಕರ್ಮದ ಸ೦ಸ್ಕಾರ, ನೀವೇ ಕಟ್ಟಿಕೊ೦ಡಿರುವ೦ತ ಒಂದು ಗೋಡೆ. ಅದನ್ನು ನೀವು ಸಡಿಲಗೊಳಿಸಿ, ನಿಮ್ಮ ವ್ಯವಸ್ಥೆಯಲ್ಲಿ ಒಳಗೂಡಿಸಿಕೊಳ್ಳುವಿಕೆಯನ್ನು ತ೦ದುಕೊಳ್ಳಬೇಕು. ಒಳಗೂಡಿಸಿಕೊಳ್ಳುವುದು ಎಂದರೆ ಎಲ್ಲರೊಂದಿಗೆ ಸ್ನೇಹದಿಂದ ಇರುಬೇಕೆನ್ನುವ ವಿಚಾರವಲ್ಲ. ಅಸ್ತಿತ್ವದ ಸಹಜಗುಣವೇ ಒಳಗೂಡಿಸಿಕೊಳ್ಳುವಿಕೆಯಾಗಿದೆ.

ಅಸ್ತಿತ್ವದ ಸ್ವರೂಪವೇ ಒಳಗೂಡಿಸಿಕೊಳ್ಳುವಿಕೆ. ಅದನ್ನು ನಿಮ್ಮ ಅರಿವಿಗೆ ತಂದುಕೊಳ್ಳಬೇಕಷ್ಟೆ. ಕರ್ಮವೆನ್ನುವುದು ನಿಮ್ಮ ವ್ಯಕ್ತಿಗತ ಅಸ್ತಿತ್ವದ ಸ್ವರೂಪ. ನಿಮ್ಮ ಕರ್ಮದ ಗಡಿಗಳ ಇತಿಮಿತಿಯನ್ನು ನೀವು ನಿಮ್ಮ ಅರಿವಿಗೆ ತಂದುಕೊಳ್ಳಬೇಕಷ್ಟೆ. 

ನೀವಿಲ್ಲಿ ಜೀವಿಸುತ್ತಿರುವಾಗ, ಮರ ಹೊರಬಿಡುತ್ತಿರುವ ಉಸಿರನ್ನು, ನೀವು ಉಸಿರಾಗಿ ಒಳತೆಗೆದುಕೊಳ್ಳುತ್ತಿರುವಿರಿ. ನೀವು ಉಸಿರಿನ ಮೂಲಕ ಹೊರಬಿಡುತ್ತಿರುವುದನ್ನು, ಮರವು ಉಸಿರಾಗಿ ಒಳತೆಗೆದುಕೊಳ್ಳುತ್ತಿದೆ. ಆದರೆ, ಬಹಳಷ್ಟು ಜನರಿಗೆ ಈ ನಿರ್ವಹಣೆಯು ನಡೆಯುತ್ತಿದೆ ಎ೦ಬ ಪರಿವೆಯೇ ಇಲ್ಲ. ಈ ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆಯು ನಿಮ್ಮ ಅರಿವಿನಲ್ಲಿದ್ದರೆ, ಸುಮ್ಮನೆ ಇಲ್ಲಿ ಕುಳಿತು ಉಸಿರಾಡುವ ಅನುಭವವೇ ಅದ್ಭುತ ಮತ್ತು ಪರಮಾನಂದದ ಭಾವವಾಗಿರುತ್ತದೆ. ನಿಮಗಿದರ ಅರಿವಿಲ್ಲದಿದ್ದರೂ, ಮರಗಳು ಹೊರಹಾಕುತ್ತಿರುವ ಆಮ್ಲಜನಕದಿಂದ ನಿಮ್ಮ ಪೋಷಣೆಯಾಗುತ್ತಿದೆ. ಆದರೆ, ನೀವು ಆ ಅನುಭೂತಿಯನ್ನು ಕಳೆದುಕೊಳ್ಳುತ್ತಿದ್ದೀರಿ.

ಒಳಗೂಡಿಸಿಕೊಳ್ಳುವಿಕೆ ಎಂದರೆ ನೀವೇನೋ ವಿಭಿನ್ನವಾದುದ್ದನ್ನು ಮಾಡಬೇಕೆ೦ದರ್ಥವಲ್ಲ. ನೀವು ಅಸ್ತಿತ್ವದ ನಿಜ ಸ್ವರೂಪದ ಬಗ್ಗೆ ಅರಿವನ್ನು ತ೦ದುಕೊ೦ಡಿರಿ ಎ೦ದಷ್ಟೆ. ಮರ ಮತ್ತು ಮಣ್ಣಿಗೆ ಏನಾಗುತ್ತದೆಯೊ ಅದು ನಿಮಗೂ ಆಗುತ್ತದೆ. “ನಾನು”ಎಂದು ನೀವೆಣಿಸಿರುವುದು ವಾಸ್ತವದಲ್ಲಿ ನೀವು ಮೆಟ್ಟುತ್ತಿರುವ ಮಣ್ಣಷ್ಟೆ. ಆದ್ದರಿಂದ, ಒಳಗೂಡಿಸಿಕೊಳ್ಳುವಿಕೆಯು ನೀವು ಮಾಡಬೇಕಿರುವ ಯಾವೊ೦ದು ವಿಷಯವೂ ಅಲ್ಲ. ಅಸ್ತಿತ್ವದ ಸ್ವರೂಪವೇ ಒಳಗೂಡಿಸಿಕೊಳ್ಳುವಿಕೆ. ಅದನ್ನು ನಿಮ್ಮ ಅರಿವಿಗೆ ತಂದುಕೊಳ್ಳಬೇಕಷ್ಟೆ. ಹಾಗೆಯೇ, ಕರ್ಮವೆನ್ನುವುದು ನಿಮ್ಮ ವ್ಯಕ್ತಿಗತ ಅಸ್ತಿತ್ವದ ಸ್ವರೂಪ. ನಿಮ್ಮ ಕರ್ಮದ ಗಡಿಗಳ ಇತಿಮಿತಿಯನ್ನು ನೀವು ನಿಮ್ಮ ಅರಿವಿಗೆ ತಂದುಕೊಳ್ಳಬೇಕಷ್ಟೆ. ಈ ಅರಿವು ಬಂದಲ್ಲಿ, ಮಿಕ್ಕಿದ್ದನ್ನು ಜೀವನವು ತಾನಾಗಿಯೇ ನಿರ್ವಹಿಸುತ್ತದೆ.

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image